ಲಿಂಗಸೂಗೂರು : ಇಂದು ನಡೆದ ಸಭೆಯಲ್ಲಿ ಕರ್ನಾಟಕ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ಸಂಘ(ರಿ) ಧಾರವಾಡ ಇದರ ಅಡಿಯಲ್ಲಿ, ರಾಜ್ಯ ಸಂಚಾಲಕರಾದ ಶ್ರೀ ರವೀಂದ್ರ ಕುರಿ ಇವರ ಮಾಹಿತಿ ಮೇರೆಗೆ, ಲಿಂಗಸೂಗೂರು ತಾಲೂಕ ವಿಜ್ಞಾನ ಶಿಕ್ಷಕರ ಸಂಘ ಅಧಿಕೃತವಾಗಿ ಮತ್ತು ವಿದ್ಯುಕ್ತವಾಗಿ ರಚನೆಯಾಯಿತು. ಈ ಸಂದರ್ಭದಲ್ಲಿ ತಾಲೂಕಿನ ಪ್ರೌಢಶಾಲಾ ಬಹುತೇಕ ವಿಜ್ಞಾನ ಶಿಕ್ಷಕರು ಹಾಜರಿದ್ದು, ಈ ಕೆಳಕಂಡಂತೆ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
1. ಗೌರವಾಧ್ಯಕ್ಷರು-ಶ್ರೀ ಮಲ್ಲಿಕಾರ್ಜುನ ಗೌಡೂರ GGHS Mudgal
2. ಅಧ್ಯಕ್ಷರು-ಶ್ರೀ ಮಲ್ಲಪ್ಪ ದೇವರಗುಡಿ GPUC HS Mudgal
3. ಉಪಾಧ್ಯಕ್ಷರು-ಶ್ರೀಮತಿ ಸಮೀನ ಭಾನು GHS Guntagol
4. ಪ್ರಧಾನ ಕಾರ್ಯದರ್ಶಿಗಳು-ಶ್ರೀ ಶ್ರೀನಿವಾಸ ಹೆಳವರ KPS Khairawadagi
5. ಖಜಾಂಚಿಗಳು-ಶ್ರೀ ಮಲ್ಲಿಕಾರ್ಜುನ ಬಳಬಟ್ಟಿ GHS Town Lingasuguru
6. ಸಹಕಾರ್ಯರ್ಶಿಗಳು-1. ಶ್ರೀಮತಿ ರೂಪಾದೇವಿ GPC HS Lingasuguru
2. ಶ್ರೀ ಬಸವರಾಜ ಹೊನ್ನಳ್ಳಿ ಶ್ರೀ ಶರಣಬಸವೇಶ್ವರ ಅನುದಾನಿತ ಶಾಲೆ ಹಟ್ಟಿ
7. ಕಾರ್ಯಕಾರಿಣಿ ಸದಸ್ಯರು-1. ಶ್ರೀ ಬಸವರಾಜ ಡಿ ಜೆ.GHS Bannigol
2. ಶ್ರೀ ಬಸವರಾಜ ಕ್ಯಾತನಗೌಡ GHS Goudur
3. ಶ್ರೀ ಜಗದೀಶ್ ನಾಲತವಾಡ ಮೊರಾರ್ಜಿ ವಸತಿ ಶಾಲೆ ಡಿ.ಭೂಪುರ
ಗೌರವ ಸಲಹೆಗಾರರಾಗಿ ಹಿರಿಯ ಶಿಕ್ಷಕರಾದ ಶ್ರೀ ಸಂಗಮೇಶ್ ಬೊಮ್ಮನಹಳ್ಳಿ ಡಿ ದೇವರಾಜ ಅರಸು ಸ್ಮಾರಕ ಶಾಲೆ ಆನೆಹೊಸೂರು.
ಪದಾಧಿಕಾರಿಗಳನ್ನು ಆಯ್ಕೆಮಾಡಿದ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿ ಸಹಕರಿಸಿದ, ಎಲ್ಲಾ ವಿಜ್ಞಾನ ವಿಷಯದ ಶಿಕ್ಷಕ ಬಂಧು ಮಿತ್ರರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಈ ಸಂದರ್ಭದಲ್ಲಿ ನಮ್ಮ ಆಹ್ವಾನದ ಮೇರೆಗೆ ಆಗಮಿಸಿ ಹಾಜರಿದ್ದು, ಪ್ರೋತ್ಸಾಹಿಸಿದ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಪ್ರಭುಲಿಂಗ ಗದ್ದಿ ಸರ್ ಅವರಿಗೆ, ತಾಲೂಕ ಅಧ್ಯಕ್ಷರಾದ ಬಸಪ್ಪ ಹಂದ್ರಾಳ ಸರ್ ಅವರಿಗೆ, ಪ್ರಧಾನ ಕಾರ್ಯದರ್ಶಿಗಳಾದ ಚಿದಾನಂದ ಸರ್ ಅವರಿಗೆ, ನಿರ್ದೇಶಕರಾದ ಜಿತೇಂದ್ರ ರವರಿಗೆ, ಈ ಸಂದರ್ಭದಲ್ಲಿ ಹಾಜರಿದ್ದ ಬಿಆರ್‌ಪಿಗಳಾದ ಮಲ್ಲಿಕಾರ್ಜುನ ಮೇಟಿ ಅವರಿಗೂ ಮತ್ತು ಎಲ್ಲಾ ಸಹೃದಯಿ ಶಿಕ್ಷಕ ಬಂಧು ಮಿತ್ರರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.
ವರದಿ : ಜಿಲ್ಲಾ ವರದಿಗಾರರು ಶಿವು ರಾಠೋಡ