ಅಂತಾರಾಷ್ಟ್ರಿಯ ಯೋಗ ದಿನಾಚರಣೆ ಆಚರಣೆ : ಶ್ರೀಮತಿ ಸುಕನ್ಯಾ ಕೆ.

Udayavani News
0
ಹುಣಸಗಿ :ಜೂ 21:  ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಉತ್ತಮ ಆರೋಗ್ಯವನ್ನು ವೃದ್ಧಿಸಲು ಮತ್ತು ದೈನಂದಿನ ಜೀವನದಲ್ಲಿ ಯೋಗದ ಮಹತ್ವವನ್ನು ಸಾರುವ ಉದ್ದೇಶದಿಂದ ದೇಶದ್ಯಂತ ಯೋಗ ದಿನಾಚರಣೆಯನು ಆಚರಿಸುತ್ತಾರೆ ಎಂದು ಶಾಲೆಯ ಮುಖ್ಯ ಗುರುಮಾತೆಯದ ಶ್ರೀಮತಿ ಸುಕನ್ಯಾ ಕೆ. ಹೇಳಿದರು.
ಹುಣಸಗಿ  ತಾಲ್ಲೂಕಿನ ಮಾರನಾಳ ತಾಂಡದಲ್ಲಿ ನಮ್ಮೂರ ಹಿರಿಯ ಪ್ರಾಥಮಿಕ  ಶಾಲೆ ಮಾರನಾಳ ತಾಂಡದ ಶಾಲಾ   ಆವರಣದಲ್ಲಿ  ಮಾತನಾಡಿದರು.
ಈ ಯೋಗ ದಿನನಿತ್ಯ ಮಾಡುವದರಿಂದ ಮಕ್ಕಳಿಗೆ ಯೋಗಾಸನ, ಪ್ರಾಣಾಯಾಮ, ಧ್ಯಾನದ ತರಬೇತಿ ನೀಡುವುದರ ಜೊತೆಗೆ ಇಂದಿನ ಒತ್ತಡದ ಜೀವನಶೈಲಿಯಲ್ಲಿ ಕಾಡುವ ಮಧುಮೇಹ, ರಕ್ತದೊತ್ತಡ, ಬೆನ್ನುನೋವು ಮತ್ತು ಮಾನಸಿಕ ಒತ್ತಡಗಳನ್ನು ಯೋಗ ಮತ್ತು ನಿಸರ್ಗೋಪಚಾರದ ಮೂಲಕ ಹೇಗೆ ನಿಯಂತ್ರಿಸಬಹುದು ಎಂಬುದರ ಬಗ್ಗೆ  ಶ್ರೀಮತಿ ಸುಕನ್ಯಾ ಕೆ ಪ್ರಧಾನ ಗುರುಮಾತೆ ತಿಳಿಸಿದರು .

ಪವಿತ್ರ ಎಸ್  ಮಾತನಾಡಿ :  ಯೋಗ ಎಂಬುದು ಕೇವಲ ದೈಹಿಕ ಕಸರತ್ತಲ್ಲ, ಅದು ದೇಹ ಮತ್ತು ಮನಸ್ಸನ್ನು ಜೋಡಿಸುವ ಅದ್ಭುತ ಕಲೆ. ಪ್ರತಿಯೊಬ್ಬರೂ ದಿನದಲ್ಲಿ ಕನಿಷ್ಠ 30 ನಿಮಿಷಗಳನ್ನು ಯೋಗಕ್ಕಾಗಿ ಮೀಸಲಿಟ್ಟರೆ ಸದೃಢ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಈ ನಿಟ್ಟಿನಲ್ಲಿ ವಿಶ್ವ ಯೋಗ ದಿನಾಚರಣೆಯ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ  ಶ್ರೀಮತಿ ಸುಕನ್ಯಾ ಕೆ ಪ್ರಧಾನ ಗುರುಮಾತೆ,  ಸಹ ಶಿಕ್ಷಕರು ಪವಿತ್ರಾ ಎಸ್,  ಆನಂದ ಕೆರೆಹೋಲ,   ಅತಿಥಿ ಶಿಕ್ಷಕರು ಸಂತೋಷ್ ನಾಯಕ.,  ತಿರುಪತಿ ರಾಠೋಡ,   ಹಂಪಣ್ಣ,   ಆಕಾಶ್, ಅಡುಗೆಸಿಬ್ಬಂದಿ ಶಾಲಾಭಿವೃದ್ದಿ ಮಂಡಳಿಯ  ಸರ್ವರೂ ಊರಿನ ಗುರು ಹಿರಿಯರು ಪತ್ರಿಕಾ ವರದಿಗಾರರು ಹಾಗು ಶಿಕ್ಷಣ ಪ್ರೇಮಿಗಳು ಇತರರಿದ್ದರು.

ಜಿಲ್ಲಾ ವರದಿಗಾರರು : ಶಿವು ರಾಠೋಡ.

Post a Comment

0Comments

Post a Comment (0)