ಸುರಪುರ ಸುದ್ದಿ : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಜಡಿದು ಮಕ್ಕಳ ಸಮೇತ ಪಾಲಕರ ಧರಣಿ ಸತ್ಯಾಗ್ರಹ ನಡೆಸಿದ ಘಟನೆ ಜರುಗಿದೆ.
ಚಿಕ್ಕನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ - ಏಳನೇ ತರಗತಿಯವರೆಗೆ ಒಟ್ಟು 255 ಜನ ಮಕ್ಕಳ ದಾಖಲಾತಿ ಇದ್ದು. 03 ಜನ ಸರ್ಕಾರಿ ಶಿಕ್ಷಕರು ಹಾಗೂ ಅದರಲ್ಲಿ 06 ಜನ ಅತಿಥಿ ಶಿಕ್ಷಕರಿದ್ದಾರೆ, ಒಂದರಿಂದ ಏಳನೇ ತರಗತಿಯವರೆಗೆ 255 ಮಕ್ಕಳಿಗೆ ಒಬ್ಬರೇ ಗಣಿತ ಶಿಕ್ಷಕರಿದ್ದು, ಅದೇ ಗಣಿತ ಶಿಕ್ಷಕರನ್ನೇ ಬೋನ್ಹಾಳ ಶಾಲೆಯಲ್ಲಿ ಮೂರು ಹಾಗೂ ಚಿಕ್ಕನಹಳ್ಳಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.
ಇದರಿಂದ ನಮ್ಮ ಮಕ್ಕಳ ಶಿಕ್ಷಣದ ಗುಣಮಟ್ಟ ಕುಂಠಿತಗೊಳ್ಳುತ್ತಿದೆ, ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೂ ತಂದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ, ಹಾಗಾಗಿ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಶಿಕ್ಷಕರನ್ನು ನಮ್ಮೂರ ಶಾಲೆಯಲ್ಲಿ ಖಾಯಂ ಗೊಳಿಸಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.