ಗುಳಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 10.000=00 (ಹತ್ತು ಸಾವಿರ ರೂಪಾಯಿ) ರೂ ಮೌಲ್ಯದ ಮೈಕ್ ಸೌಂಡ್ ಸಿಸ್ಟಮ್ ದೇಣಿಗೆ.

Udayavani News
0
ಗುಳಬಾಳ : ಹುಣಸಗಿ ತಾಲ್ಲೂಕಿನ ಗುಳಬಾಳ ಗ್ರಾಮದ ನಿವಾಸಿಯಾದ ಶ್ರೀಮತಿ ಯಂಕಮ್ಮ ಬಮ್ಮನಳ್ಳಿ ಇವರು ಇದೆ ಶಾಲೆಯಲ್ಲಿ ಓದಿದ್ರು ಆದ ಕಾರಣ "ನಾನು ಕಲಿತ ಶಾಲೆ ನನ್ನ ಹೆಮ್ಮೆ" ಎಂದು ತಿಳಿದು ಶಾಲೆಯಲ್ಲಿ ನಡೆಯುವ ರಾಷ್ಟ್ರೀಯ ಕಾರ್ಯಕ್ರಮಗಳು ಇನ್ನಿತರೆ ಜಯಂತಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ತಮ್ಮ ವೈಯಕ್ತಿಕ ಹಣದಲ್ಲಿ ಶಾಲೆಗೆ ದೇಣಿಗೆ ನೀಡಿರುವರು,

ಇತರಹ ಹುಣಸಗಿ ತಾಲೂಕಿನ ಎಲ್ಲಾ ಪದವೀಧರರಿಗೂ ಕೂಡಾ ತಮ್ಮ ಊರಿನ ಶಾಲೆಗೆ ದೇಣಿಗೆ ನೀಡಿ ಮಾದರಿಯಾಗಿ ಎಂದು ಶಿಕ್ಷಕರು ತಿಳಿಸಿದರು ಹಾಗೂ ಈ ಪ್ರಯತ್ನಕ್ಕೆ ನಮ್ಮ ಶಾಲೆಯ ಎಲ್ಲಾ ಶಿಕ್ಷಕರ ಪ್ರೇರಣೆ ಎಂದು ಪ್ರಧಾನ ಗುರು ಭೀಮನಗೌಡ ಬಿರಾದಾರ ಹೇಳಿದರು,

 ಈ ಸಂದರ್ಭದಲ್ಲಿ ರಾಜ್ಯ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷರು ದೈಹಿಕ ಶಿಕ್ಷಕರಾದ ಬಸನಗೌಡ ವಠಾರ,ಶಿಕ್ಷಕರಾದ ಪ್ರಭುಗೌಡ ಬಿರಾದಾರ,ಕಡ್ಲಬಾಳಪ್ಪ, ಹುಲಗಣ್ಣ ಹೊಸಮನಿ,ಯಂಕಮ್ಮ ಬಮ್ಮನಳ್ಳಿ,ಭಾಗ್ಯಶ್ರೀ ಕಕ್ಕೇರಿ,ಸರೋಜಾ ಅಂಬಿಗೇರ ಇನ್ನಿತರರು ಇದ್ದರು,

ವರದಿ : ಶಿವು ರಾಠೋಡ.

Post a Comment

0Comments

Post a Comment (0)