ಸಂಗಪ್ಪ ಬಸಪ್ಪ ಗೌಡೂರ.ನಾಲತವಾಡ ಬಳಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ.

Udayavani News
0
ನಾಲತವಾಡ:ನಾರಾಯಣಪುರದಿಂದ ಮುದ್ದೇಬಿಹಾಳ ಕಡೆಗೆ ಸಾಗುತ್ತಿದ್ದ ಸರಕಾರಿ ಬಸ್, ಬುಧವಾರ ಸಂಜೆ ಆರೇಶಂಕರ ಕ್ರಾಸ್ ಹತ್ತಿರ ಬೈಕಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮೃತ ವ್ಯಕ್ತಿಯನ್ನು ನಾಲತವಾಡ ಪಟ್ಟಣದ 5ನೇ ವಾರ್ಡಿನ ನಿವಾಸಿ ಸಂಗಪ್ಪ ಬಸಪ್ಪ ಗೌಡೂರ (28) ಎಂದು ಗುರುತಿಸಲಾಗಿದೆ. ಸ್ಥಳೀಯ ಪ.ಪಂಯಲ್ಲಿ ಪೌರ ಕಾರ್ಮಿಕನಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಪರಿಚಯದ ಮಹಿಳೆಯೊಂದಿಗೆ ಬೈಕ್‌ನಲ್ಲಿ ಆರೇಶಂಕರ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಆರೇಶಂಕರ ಕ್ರಾಸ್ ಹತ್ತಿರ, ಮುಂಭಾಗದಿಂದ ಬಂದ ಬಸ್ ಹಠಾತ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಸಂಗಪ್ಪ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿ ಜೊತೆಗಿದ್ದ ಮಹಿಳೆಗೆ ಲಘು ಗಾಯಗಳಾಗಿವೆ ಎಂದು ವರದಿಯಾಗಿದೆ.

ಪೊಲೀಸರು ಮುದ್ದೇಬಿಹಾಳ ಪಿಎಸೈ ಸಂಜೀವ ತಿಪ್ಪಾರಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ಪರಿಣಾಮ ಗ್ರಾಮದಲ್ಲಿ ಶೋಕವಾತಾವರಣ ಮನೆಮಾಡಿದೆ.

ಸೋಮವಾರ ಎರಡು ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದರು. ಇದಾದ ಮೇಲೆ ಬುಧವಾರ ಮತ್ತೇ ಈ ಅಪಘಾತ ನಡೆದಿದೆ. ಎರಡು ದಿನಗಳಲ್ಲಿ ನಾಲತವಾಡ ಗ್ರಾಮದ ಮೂರು ಜನರು ದುರ್ಮಣಕ್ಕೆ ಈಡಾಗಿದ್ದಾರೆ.

 ವರದಿಗಾರ : ಶಿವು ರಾಠೋಡ 

Post a Comment

0Comments

Post a Comment (0)