ಯಾದಗಿರಿ ಜಿಲ್ಲೆಯ ಎಸ್.ಪಿ. ಪೃಥ್ವಿಕ್ ಶಂಕರ್ , ಡಿ.ಎಸ್.ಪಿ ಜಾವೀದ್ ಇನಾಮ್ದಾರ್ ರವರ ಹಾಗೂ ರವಿಕುಮಾರ ಎಸ್.ಎನ್ ಸಿಪಿಐ ಹುಣಸಗಿ ಮಾರ್ಗದರ್ಶನದ ಮೆರೆಗೆ ಅಯ್ಯಪ್ಪ ಪಿ.ಎಸ್.ಐ. ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಕೊಡೇಕಲ್ ಗ್ರಾಮದ ನಿಜಲಿಂಗಪ್ಪ ಗುಡಿ ಹತ್ತಿರ,13 ಜನ ಹಾಗೆ ಸ್ಥಳದಿಂದ ಒಟ್ಟು ನಗದು ಹಣ 58800/- ರೂ. ಮತ್ತು ಕೊಡೇಕಲ್ ಗ್ರಾಮದ ಬಸ್ ನಿಲ್ದಾಣದ ಹತ್ತಿರ 09 ಜನ ಸ್ಥಳದಿಂದ ಒಟ್ಟು ನಗದು ಹಣ 28160/-ರೂ, ಜಪ್ತಿ . ಒಟ್ಟಾರೆಯಾಗಿ 86,960 ಹಣ ಮತ್ತು 22ಜನ ಇಸ್ಪೇಟ್ ಆಡುತ್ತಿರುವರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ನಂ.64 ಹಾಗೂ 65/2025 ಕಲಂ.87 ಕರ್ನಾಟಕ ಪೊಲೀಸ್ ಕಾಯ್ದೆ-1963 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ .
ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ