ಶ್ರೀ ಗಡ್ಡಿ ಗದ್ದೇಮ್ಮ ದೇವಿ ಜಾತ್ರೆಯಲ್ಲಿ ‌ನಕಲಿ ಮದ್ಯ ಮತ್ತು ಮಾರಾಟಗಾರರ ಮೇಲೆ ಕ್ರಮಕ್ಕೆ RC ಕಲಬುರ್ಗಿ,IG ಕಲಬುರ್ಗಿ,SP ಯಾದಗಿರಿ,DC ಯಾದಗಿರಿ,DYSP ಸುರಪುರ,CPI ಹುಣಸಗಿ ರವರಿಗೆ ಅಮರೇಶಣ್ಣ ಕಾಮನಕೇರಿ ದೂರು ನೀಡಿದ್ದಾರೆ..!

Udayavani News
0


ನಾರಾಯಣಪುರ ಜ 01 :: ಹೊಸ ವರ್ಷದ 2-01-2026 ರಿಂದ 6-01-2026 ಶ್ರೀ ಗಡ್ಡಿ‌ಗದ್ದೇಮ್ಮದೇವಿ ಜಾತ್ರಾಮೋತ್ಸವವು ಅದ್ದೂರಿಯಾಗಿ ನೇಡೆಯಲಿದ್ದು ಇದನ್ನೆ ಬಂಡವಾಳ ಮಾಡಿಕೊಂಡ ನಕಲಿ ಮದ್ಯ ತಯಾರಕರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ಮೂಲಕ ಸಾರಾಯಿ ಅಂಗಡಿಗಳನ್ನು‌ ತೆರೆದು ನಕಲಿ ಮದ್ಯ ಮಾರಾಟ ಮಾಡುತ್ತಾರೆ ಈ ಅಕ್ರಮದ ವಿರುದ್ಧ ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರು, ಪತ್ರಕರ್ತರು ಆದ ಅಮರೇಶಣ್ಣ ಕಾಮನಕೇರಿ ರವರು ರಿಜಿನಲ್ ಕಮೀಷನರ್ ಕಲಬುರ್ಗಿ (RC) ಯವರಿಗೆ ,ಕಲಬುರ್ಗಿ ವಲಯ ಪೋಲಿಸ ಕಮೀಷನರ್ ರವರಿಗೆ ,ಯಾದಗಿರಿ ಜಿಲ್ಲಾಧಿಕಾರಿಯವರಿಗೆ, ಯಾದಗಿರಿ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಯವರಿಗೆ, ಡಿವಾಯ್ಎಸಪಿ ಸುರಪುರರವರಿಗೆ,ಸರ್ಕಲ್ ಇನಸ್ಪೇಕ್ಟರ್ ಹುಣಸಗಿ ರವರಿಗೆ ಜಾತ್ರೆಯಲ್ಲಿ ನಕಲಿ‌ ಮದ್ಯ ಮತ್ತು ಸಾರಾಯಿ ಅಂಗಡಿ ತೆರೆದು ಅಕ್ರಮ ಮದ್ಯ ಮಾರಾಟ ಮಾಡುವವರ ಮೇಲೆ ಕಠಿಣ ಕಾನೂನ ಕ್ರಮ ಕೈಗೊಳ್ಳುವಂತೆ ಲಿಖಿತ ದೂರು ನೀಡಿದ್ದಾರೆ.



ಜಾತ್ರೆ ಮದ್ಯದಲ್ಲೆ ರಾಜರೋಷವಾಗಿ ಮದ್ಯ ಅಂಗಡಿ ತೆರೆಯುತ್ತಾರೆ ಎಂದು ಕಳೆದ ವರ್ಷ ಜಾತ್ರೆಗಿಂತ ಮುಂಚಿತವಾಗಿ ನಕಲಿ ಮದ್ಯ ತಯಾರಕರ ಮತ್ತು ಮಾರಾಟಗಾರರ ಮೇಲೆ ಕ್ರಮಕೈಗೋಳಬೇಕು ಎಂದು ಮನವಿಯನ್ನು ಪೋಲಿಸ ಇಲಾಖೆ ,ಕಂದಾಯ ಇಲಾಖೆ ,ಅಬಕಾರಿ ಇಲಾಖೆಗೆ ನೀಡಿದರು ಕ್ರಮಕೈಗೊಳ್ಳಲ್ಲ, ದಾಖಲೆ ಸಮೇತ ವರದಿ ಪ್ರಕಟವಾದರು ಕ್ರಮ‌ಕೈಗೋಳ್ಳಲಿಲ್ಲ ಪೋಲಿಸ ಇಲಾಖೆ ಈ ವರ್ಷವಾದರು ಕಠಿಣ ಕ್ರಮಕ್ಕೆ ಮುಂದಾಗಬೇಕು ಜಾತ್ರೆಗೆ ಬರುವ ಭಕ್ತರಿಗೆ ಕುಡುಕರ ಕಾಟದಿಂದ ಮುಕ್ತಗೊಳಿಸಬೇಕು ಜನರಿಗೆ ಪೋಲಿಸ ಇಲಾಖೆ ಮೇಲೆ ಇರುವ ಗೌರವ ಉಳಿಸಬೇಕು ಎಂದು ಆಗ್ರಹಿಸುತ್ತೆನೆ
ಅಮರೇಶಣ್ಣ ಕಾಮನಕೇರಿ
ರಾಜ್ಯಾಧ್ಯಕ್ಷರು
ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ (ರಿ)

ಬನದ ಹುಣ್ಣುಮೆಗೆ ಕರ್ನಾಟಕದ ಮೂಲೆಮೂಲೆಗಳಿಂದ ಲಕ್ಷಾಂತರ ಭಕ್ತರು ಭಂಡಾರದೊಡತಿ ಭಕ್ತರ ಆರಾಧ್ಯದೈವ ಗಡ್ಡಿ ಗದ್ದಮ್ಮ ದೇವಿ ದರ್ಶನಕ್ಕೆ ಆಗಮಿಸುತ್ತಾರೆ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಹೊರ ರಾಜ್ಯದಿಂದಲೂ ಅಪಾರ ಪ್ರಮಾಣದ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಭಾರತ ಹುಣ್ಣುಮೆ ದಿನದಂದೂ ದೇವಿ ದರ್ಶನ ಪಡೆಯುವುದರಿಂದ ಕಷ್ಟ ಕಾರ್ಪಣ್ಯಗಳು ದೂರ ಆಗುತ್ತವೆ ಅನ್ನೋ ನಂಬಿಕೆ ಇದೆ. ಹೀಗಾಗಿ ಅಪಾರ ಸಂಖ್ಯೆಯಲ್ಲಿ ಹುಣ್ಣುಮೆ ಒಂದು ದಿನ ಮುಂಚತವಾಗಿ ಭಕ್ತರ ದಂಡು ಜಾತ್ರೆಗೆ ಹರಿದು ಬರುತ್ತೆ. ಏಳು ಗ್ರಾಮಗಳಲ್ಲಿ ಸಂಚಾರಿಸಿ ಉಡಿತುಂಬಿಕೊಂಡು ದೇವಿ ಬರುವದರಿಂದ ಒಂದು ದಿನ ಮೊದಲು ಬಂದು ದೇವಿಗೆ ವಿಶೇಷ ಖಾದ್ಯಗಳನ್ನ ಸಿದ್ದಪಡಿಸಿ ನೈವೇದ್ಯ ಹಿಡಿದು ಜಾತ್ರೆ ಆಚರಿಸುವುದು ಸಂಪ್ರದಾಯ.
ಇನ್ನೂ ದೇವಿ ದರ್ಶನ ಪಡೆದು ಪುನೀತರಾಗಲು ಆಗಮಿಸುವ ಭಕ್ತರನ್ನ ಟಾರ್ಗೆಟ್ ಮಾಡಿ ಗದ್ದೇಮ್ಮ ದೇವಿ ಜಾತ್ರೆಯಲ್ಲಿ ನಕಲಿ ಮದ್ಯವನ್ನು ಅಕ್ರಮವಾಗಿ ರಾಜಾರೋಷವಾಗಿ ಮಾರಾಟ ಮಾಡುತ್ತಾರೆ. ಸುಮಾರು ಎಕರೆ ಪ್ರದೇಶದಲ್ಲಿ ಅದ್ದೂರಿ ಜಾತ್ರೆ ನಡೆಯುತ್ತಿದ್ದು ವಿವಿಧ ಶಾಪ್ ಗಳು ಜಾತ್ರೆಯಲ್ಲಿ ತೆರೆದಿರುತ್ತಾರೆ. ದೇವಿಯ ಸನ್ನಿಧಾನದಲ್ಲಿದ್ದುಕೊಂಡೇ ಕೆಲವರು ಭಕ್ತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.ಗಡ್ಡಿ ಗದ್ದೇಮ್ಮ‌ದೇವಿ ಗ್ರಾಮದಲ್ಲಿ ಮಧ್ಯ ಮಾರಾಟಗಾರರು ಕೋಲ್ಡ್ರಿಂಕ್ಸ್ ಶಾಪ್ ನ ರೀತಿಯಲ್ಲಿ ಮದ್ಯ ಅಂಗಡಿ ತೆರದು ಪ್ರತಿ ವರ್ಷವು ನಕಲಿ ಮದ್ಯ ತಯಾರಕರು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಿಸುತ್ತಾರೆ.ನಕಲಿ‌ ಮದ್ಯ ರಾಜರೋಷವಾಗಿ ಅಂಗಡಿ‌ ತೆರೆದು ಮಾರಾಟ ಮಾಡುವವರ ವಿರುದ್ಧ ಕಳೆದ ವರ್ಷ ದಾಖಲೆ ಸಮೇತ ವರದಿ ಪ್ರಕಟಿಸಿದರು ಅಂದಿನ ನಾರಾಯಣಪುರ ಪೋಲಿಸ ಠಾಣೆಯ ಠಾಣಾಧಿಕಾರಿ ಕ್ರಮ‌ಕೈಗೊಳ್ಳದೆ ಅಕ್ರಮಕ್ಕೆ ಸಾಥ ನೀಡಿದರು ಈ ವರ್ಷವಾದರು ನೂತನವಾಗಿ ಬಂದಿರುವ ನಾರಾಯಣಪುರ ಪೋಲಿಸ ಠಾಣೆಯ ಠಾಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.

Post a Comment

0Comments

Post a Comment (0)