ನಕಲಿ ಜಾತಿ ಪ್ರಮಾಣ ಪತ್ರ ವಿರೋಧಿಸಿ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ.

Udayavani News
0
ನಾರಾಯಣಪುರ : ಮಹರ್ಷಿ ವಾಲ್ಮೀಕಿ ನಾಯಕ ಸಂಘ ಯಾದಗಿರಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಗೌಡಪ್ಪಗೌಡ ಆಲ್ದಾಳ ಇಂದು ಆಗಸ್ಟ್ 8ರಂದು ನಮ್ಮ ಜಿಲ್ಲೆಯ ಕಟ್ಟಕಡೆಯ ಗ್ರಾಮದ ನಾರಾಯಣಪುರ ಗ್ರಾಮಕ್ಕೆ ಭೇಟಿ ನೀಡಿದರು ಈ ಸಂದರ್ಭದಲ್ಲಿ ನಾರಾಯಣಪುರ ಗ್ರಾಮದ ಸಮಾಜದ ಮುಖಂಡರು ಎಲ್ಲರೂ ಸೇರಿ ಅದ್ದೂರಿಯಾಗಿ ಸ್ವಾಗತಿಸಿದರು. ಆಗಸ್ಟ್ 13ರಂದು ತಮ್ಮ ಗ್ರಾಮದಿಂದ ಹೆಚ್ಚಿನ ಜನಸಂಖ್ಯೆ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ವೆಂಕಣ್ಣ ದೊರೆ ಗೌಡಗೇರಿ ಮತ್ತು ಹನುಮಂತ ದೊರಿ ಟೋಕಾಪುರ. ನಾರಾಯಣಪುರ ಗ್ರಾಮ ಘಟಕದ ಅಧ್ಯಕ್ಷರು ಮಾರುತಿ ಎಲ್. ಕನ್ನಳ್ಳಿ ಮತ್ತು ಊರಿನ ಹಿರಿಯ ಮುಖಂಡರು ಹಲವಾರು ಜನ ಈ ಸಭೆಯಲ್ಲಿ ಮಾತನಾಡಿ ನಮ್ಮ ಗ್ರಾಮದಿಂದ ಹೆಚ್ಚಿನ ಜನಸಂಖ್ಯೆಯಲ್ಲಿ ಬರುತ್ತೇವೆ ಎಂದು ಭರವಸೆ ನೀಡಿದರು.
ತಾಲೂಕು ಉಪಾಧ್ಯಕ್ಷರು ಅಮರೇಶ್ ಕೋಳೂರು,, ಹಣಮಗೌಡ ಪೋಲಿಸ್ ಪಾಟೀಲ್, ರಮೇಶ್ ಕೋಳೂರು , ವಾಸಿ ಗೌಡ್ರು ,ಆರ್.ಸಿ.ಗೌಡ್ರು, ಯಮನಪ್ಪ ಜಂಜಿಗಡ್ಡಿ, ಆಂಜನೇಯ ದೊರೆ, ಗೌಡಪ್ಪ ಗೌಡ, ಯಂಕಪ್ಪ ರೋಡಲಬಂಡಿ , ಇನ್ನಿತರರು ಉಪಸ್ಥಿತರಿದ್ದರು.

ವರದಿಗಾರ : ಶಿವು ರಾಠೋಡ

Post a Comment

0Comments

Post a Comment (0)