ಅಣ್ಣ-ತಂಗಿ ಲವ್ವಿಡವ್ವಿ.. ಸಾವಿನಲ್ಲಿ ಅಂತ್ಯ

Udayavani News
0


ಚಿಕ್ಕಬಳ್ಳಾಪುರ : ಕಾಮದ ಮುಂದೆ ಈ ಕಾಲದಲ್ಲಿ ಸಂಬಂಧಕ್ಕೆ ಬೆಲೆನೆ ಇಲ್ಲವಾಗಿದೆ.. ಇಲ್ಲೊಂದು ಪ್ರೇಮದ ಕತೆಯೂ ಇದೆ ರೀತಿ ಇದೆ.. ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದಲ್ಲಿ ನಡೆದಿರುವ ಘಟನೆ ಇದು.. ಆತನಿಗೆ 30 ವರ್ಷ, ಆಕೆಗೆ 21 ವರ್ಷ.. ಇಬ್ಬರು ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು. ಬಾಗೇಪಲ್ಲಿ ತಾಲೂಕಿನ ರಾಮಕೃಷ್ಣಪುರದ ನಿವಾಸಿಗಳು.. ಸಂಬಂಧದಲ್ಲಿ ಅಣ್ಣ-ತಂಗಿ. ಈ ಪವಿತ್ರ ಬಂಧಕ್ಕೆ ವಿರುದ್ದವಾಗಿ ಅಕ್ರಮ ಸಂಬಂಧ ಹೊಂದಿದ್ರು.. ದುಡಿಮೆಗೆ ಅಂತ ಊರು ಬಿಟ್ಟು ಬಂದಿದ್ದ ರಾಮಲಕ್ಷ್ಮಿ ಹಾಗೂ ಕೃಷ್ಣ ಒಂದೇ ರೂಮಿನಲ್ಲಿ ಲಿವಿಂಗ್ ರಿಲೇಷನ್ ಶಿಪ್​​ನಲ್ಲಿ ಇದ್ದರು.. ಕೃಷ್ಣಗೆ ಮದುವೆ ಆಗಿತ್ತು.. ಆದ್ರೂ ತಂಗಿ ರಾಮಲಕ್ಷ್ಮಿಯನ್ನೇ ಪ್ರೀತಿಸಿ ಪ್ರತ್ಯೇಕ ಸಂಸಾರ ಮಾಡಿದ್ದ.. ಈ ವಿಷಯ ಗೊತ್ತಾಗಿ 2 ಮನೆಯವರು ಬುದ್ಧಿವಾದ ಹೇಳಿದ್ರಂತೆ.. ಆದ್ರೂ ಇವರು ಒಬ್ಬರನೊಬ್ಬರು ಬಿಟ್ಟಿರಲಿಲ್ಲ.. ಅದೇನಾಯ್ತೋ ಏನೋ ರಾಮಲಕ್ಷ್ಮೀ ಏಕಾಏಕಿ ರೂಮಿನಲ್ಲಿ ನೇ*ಣಿ*ಗೆ ಶರಣಾಗಿದ್ದಾಳೆ.. ನಮ್ಮ ಮಗಳ ಸಾ*ವಿಗೆ ಕೃಷ್ಣನೇ ಕಾರಣ ಅಂತ ಪೋಷಕರು ಆರೋಪಿಸಿದ್ದಾರೆ..


Post a Comment

0Comments

Post a Comment (0)