ಸಮಾಜ ಸೇವಕ ಪ್ರಭು ಭೈರಿ ಕಾರ್ಯ ಶ್ಲಾಘನೀಯ: ಮುಖಂಡ ಭೋವಿ

Udayavani News
0
 ತಾಳಿಕೋಟಿ: ಸಮಾಜ ಸೇವೆಯ ಹೆಸರಿನಲ್ಲಿ ಕೇವಲ ತಮ್ಮ ಸ್ವಾರ್ಥವನ್ನೇ ಈಡೇರಿಸಿಕೊಳ್ಳುವ ಇಂದಿನ ದಿನಮಾನದಲ್ಲಿ ತಾನು ಜನಿಸಿದ ಗ್ರಾಮ ಅಭಿವೃದ್ಧಿಯಾಗಬೇಕು ಎಂಬ ಕಳಕಳಿಯಿಂದ ರೂ.25 ಲಕ್ಷ ಸ್ವಂತ ಹಣದಲ್ಲಿ ಸಿಸಿ ರಸ್ತೆ ಹಾಗೂ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಿ ಪ್ರಭು ಭೈರಿಯವರು ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದು ಮುಖಂಡ ಅಶೋಕ ಭೋವಿ ಹೇಳಿದರು.

 ತಾಲೂಕಿನ ಕಲಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಂತೆ ಮಾರಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳ ಆವರಣದಲ್ಲಿ ವಿಶ್ವನಾಥ್ ಭೈರಿ ಮತ್ತು ಜಗನ್ನಾಥ ಭೈರಿ ಅವರ ಸ್ವರರ್ಣಾರ್ಥವಾಗಿ ಪ್ರಭು ಜಯಪ್ಪ ಭೈರಿ ಅವರು ನಿರ್ಮಿಸಿದ ಕುಡಿಯುವ ನೀರಿನ ಟ್ಯಾಂಕ್ ಮತ್ತು ಸಿಸಿ ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ರವಿವಾರ ಮಾತನಾಡಿದರು. ಮುಖಂಡ ಹಣಮಂತ ವಡ್ಡರ ಮಾತನಾಡಿ ಪ್ರಭು ಭೈರಿಯವರು ಈಗಾಗಲೇ ಗ್ರಾಮದ ಕೆಲವು ಕಡೆ ಸಿಸಿ ರಸ್ತೆಗಳನ್ನು ಹಾಗೂ ಹಲವಾರು ಸಮಾಜ ಸೇವಾ ಕಾರ್ಯಗಳನ್ನು ಮಾಡಿದ್ದಾರೆ ಅವರಿಗೆ ನಾವೆಲ್ಲರೂ ಸಹಕರಿಸುವ ಅಗತ್ಯ ಇದೆ ಎಂದರು. ಗಣ್ಯರಾದ ರಾಘು ದೇಸಾಯಿ ಹಾಗೂ ಶಾಂತು ಹೊಸಗೌಡರ ನೇತೃತ್ವದಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಈ ಸಮಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜ ಅಹ್ಮದ್ ಸಿರಸಗಿ, ಗಣ್ಯರಾದ ಕೆ.ಡಿ.ದೇಸಾಯಿ, ರಾಮರಾವ್ ದೇಶಮುಖ, ರಾಜು ಜಂಬಗಿ, ವಿನೋದ್ ವಡಗೇರಿ, ಮುತ್ತು ಬೆಂಡೆಗೊಂಬಳ, ಸುನಿಲ್ ಜಂಗಣಿ, ದೇವೇಂದ್ರ ಬಡಿಗೇರ, ವಿಶ್ವ ಮೋಪಗಾರ, ಉಮೇಶ ಹೆಗ್ಗಣದೊಡ್ಡಿ ಫಾರೂಕ್ ವಲ್ಲಿಬಾಯಿ, ಸಂಗಪ್ಪ ಗೌಂಡಿ, ಭೀಮಣ್ಣ ವಡ್ಡರ, ಮಹೆಬೂಬ ಬಾಶಾ ಮನಗೂಳಿ, ಪರುಶರಾಮ ವಡ್ಡರ,ಗ್ರಾಮ ಪಂಚಾಯತ್ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

Post a Comment

0Comments

Post a Comment (0)