ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟ, ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ಈ ಸಭೆಯನ್ನು ಹರಿಹರ ತಾಲ್ಲೂಕಿನ ಹೊಸಪೇಟೆ ಬೀದಿ ಶ್ರೀ ಮುರುಘಾರಾಜೇಂದ್ರ ಕಲ್ಯಾಣ ಮಂಟಪ ಎದುರು ಶ್ರೀ ಹರಿಹರೇಶ್ವರ ಕಟ್ಟಡ ಕಾರ್ಮಿಕರ ಸಂಘ ಕಛೇರಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.
ಅಶ್ವತ ಟಿ ಮರೀಗೌಡ್ರು, ಶಿವಕುಮಾರ್ ಗೌಡ, ರಮೇಶ್, ಲೋಕೇಶ್ ನಾಯಕ, ಹಾಲೇಶ್, ಭೀಮಣ್ಣ, ಶಶಿನಾಯ್ಕ್ , ಶಿವಣ್ಣ, ಪರಶುರಾಮ, ನಾಗರಾಜು, ಬಸವರಾಜ್ ಕಾರ್ಯಕ್ರಮ ಉದ್ಘಾಟಿಸಿದರು ಪಂಪಾಪತಿ ಇಂಗಳಗಿ ಪ್ರಾಥನ ಗೀತೆ ಹಾಡಿದರು, ಪ್ರಸ್ತಾವ ನುಡಿಯನ್ನು ಲೋಕೇಶ್, ಸ್ವಾಗತವನ್ನು ಶಶಿ ನಾಯಕ ( ವಕೀಲರು ) ಮಾಡುವ ಮಾಡಿದರು.
ಸಭೆಯಲ್ಲಿ ಕಾರ್ಮಿಕ ಇಲಾಖೆಯಿಂದ ಆಗುತ್ತಿರುವ ಲೋಪದೋಷಗಳನ್ನು ಮತ್ತು ಕಾರ್ಮಿಕರಿಗೆ ಮಂಡಳಿಯಿಂದ ಆಗುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂದಿನ ಅತಿ ಶೀಘ್ರದಲ್ಲಿ ಮಂಡಳಿ ಮುಂದೆ ಉಗ್ರವಾದ ಹೋರಾಟಗಳನ್ನು ಮಾಡಲು ನಿರ್ಣಯ ಕೈಗೊಳ್ಳಲಾಯಿತು
ಈ ಸಂಧರ್ಭದಲ್ಲಿ, ಜಯರಾಜ್ ಸಾಲಿನ್, ಮಲ್ಲೇಶ್, ಶರಣಪ್ಪ, ಶಿವಣ್ಣ, ಚಂದ್ರು, ದುರ್ಗಪ್ಪ, ಲಕ್ಮಣ್, ಬಾಬು, ಆಕ್ರಂ ಭಾಷಾ, ಮಹಿಳಾ ಅಧ್ಯಕ್ಷರು, ಹಾಗೂ ಹರಿಹರೇಶ್ವರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರು ಎಮ್.ಹೆಚ್. ಭೀಮಣ್ಣ ಉಪಾಧ್ಯಕ್ಷರು ಹೆಚ್. ಅಂಜನಪ್ಪ, ,ವಿನಾಯಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರು ಎಮ್.ಎಸ್. ಹಾಲೇಶ್, ಹರಿಹರೇಶ್ವರ ಆಸಂಘಟಿತ ಬಡಗಿ ಕೆಲಸಗಾರರ ಸಂಘದ ಅಬ್ದುಲ್ ಸತ್ತರ ಹಾಗೂ ನಾಗರಾಜ, ತುಂಗಭದ್ರಾ ಪ್ಲಾಂಬರ್ ಕಾರ್ಮಿಕರ ಸಂಘದ ರಮೇಶ್. ಬಿ, ಜಯಶಾಂತ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರು ಶಶಿ ನಾಯಕ,ಮಹಬ್ಬ ಅಲ್ಲಿ, ನೆಹೆಮತಉಲ್ಲಾ, ಹರಿಹರ ಪೇಂಟರ್ ಕಾರ್ಮಿಕರ ಸಂಘದ ಅಧ್ಯಕ್ಷರು ಭೀರಪ್ಪ ಪ್ರಧಾನ ಕಾರ್ಯದರ್ಶಿ ಪರಶುರಾಮ, ಸೋಮೇಶ್ವರ ಕಟ್ಟಡ ಕಾರ್ಮಿಕರ ಸಂಘದ ಹರಿಹರ ಅಧ್ಯಕ್ಷರು ಹಾಲೇಶ್ ನಾಯಕ, ಜಂಬಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಶರು ಬಸವರಾಜ, ಕರ್ನಾಟಕ ರಾಜ್ಯದ ಸರ್ವ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು, ಕಾರ್ಮಿಕ ಮುಖಂಡರು, ಕಾರ್ಮಿಕರು, ಇನ್ನೂ ಮುಂತಾದವರು ಭಾಗವಹಿಸಿದ್ದರು.
ವರದಿ: ಶಿವು ರಾಠೋಡ