ಯಾದಗಿರಿ ಜ 8 :: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದಕ್ಷಿಣ ಕಾಶಿ ಎಂದೆ ಪ್ರಸಿದ್ಧ ಪಡೆದಿರುವ ತಿಂಥಣಿ ಶ್ರೀಮೌನೇಶ್ವರ ದೇವಸ್ಥಾವು ಮುಜರಾಯಿ ಧಾರ್ಮಿಕ ಧತ್ತಿ ಇಲಾಖೆಯ ಎ ಗ್ರೇಡ ಪಟ್ಟಿಯಲ್ಲಿ ಇದೆ ಸರಕಾರವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯ 1997 ಪ್ರಕಾರ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಹಿಂದು ಎ ಗ್ರೇಡ ದೇವಸ್ಥಾನಗಳಿಗೆ ಆಯುಕ್ತ, ಆಡಳಿತ ಅಧಿಕಾರಿ, ಇತರ ನೇಮಕ ಮಾಡಬೇಕಾದರೆ ಅಧಿನಿಯಮ ಪ್ರಕಾರ ಕಾಲಂ 7 ಪ್ರಕಾರ ಹಿಂದುಗಳಾಗಿರತಕ್ಕದ್ದು ಅಂತ: ಸ್ಪಷ್ಟವಾಗಿ ಅಧಿನಿಯಮವಿದೆ.
ದುರದೃಷ್ಟಕರ ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಸುರಪುರ ತಾಲೂಕಿನ ಪ್ರಖ್ಯಾತ ಎ ಗ್ರೇಡ ದೇವಸ್ಥಾನವಾದ ಶ್ರೀ ತಿಂಥಣಿ ಮೌನೇಶ್ವರ ದೇವಸ್ಥಾನಕ್ಕೆ ಹಿಂದುವಲ್ಲದ ಅಧಿಕಾರಿ ನೇಮಕ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ ಹಿಂದುವಲ್ಲ ಆಡಳಿತ ಅಧಿಕಾರಿಯೂ ಶ್ರೀ ಕ್ಷೇತ್ರದ ವಿಚಾರವಾಗಿ ಪ್ರಸ್ಥುತ ಸರಿಯಾಗಿ ಸ್ಥಳಿಯರಿಗೆ ಸ್ಪಂದಿಸುತ್ತಿಲ್ಲ ಹಾಗೂ ದೇವಸ್ಥಾನ ಸಮಿತಿ ಕಾಲವಧಿ ಎರಡು ತಿಂಗಳು ಆದರು ವ್ಯವಸ್ಥಾಪಕರ ಸಮಿತಿ ನೇಮಕ ಮಾಡಿಲ್ಲ ಯಾದಗಿರಿ ಜಿಲ್ಲಾ ಆಡಳಿತ ಹಾಗೂ ಮುಜರಾಯಿ ಇಲಾಖೆ ನೇಮಕ ಮಾಡಿದೆ ಮೌನವಾಗಿರುವುದು ಶ್ರಿಕ್ಷೇತ್ರದ ಅಭಿವೃದ್ದಿಗೆ ಹಿನ್ನೆಡೆಯು ಆಗಿದೆ ವಿಶೇಷವಾಗಿ ದೇಶಾದ್ಯಂತ ಭಕ್ತಿರು ಈ ಕ್ಷೇತ್ರದ ದರ್ಶನಕ್ಕೆ ಬರುತ್ತಾರೆ ಶ್ರೀ ತಿಂಥಣಿ ಶ್ರೀ ಮೌನೇಶ್ವರ ದೇವಸ್ಥಾನ ದಕ್ಷಿಣ ಕಾಶಿ ಎಂದೇ ಹೆಸರು ಭಕ್ತಿ ಪರಂಪರೆಯ ಜಾಗೃತಿ ದೇವಸ್ಥಾನವಾಗಿದ್ದು ಇದೇ ತಿಂಗಳು ಜನವರಿ ಕೊನೆಯವಾರದಲ್ಲಿ ಬೃಹತ ಜಾತ್ರೆ ಇರುವುದರಿಂದ ಆದಷ್ಟು ಬೇಗನೆ ದೇವಸ್ಥಾನದ ಅಭಿವೃದ್ದಿ, ಧಾರ್ಮಿಕ ಆಚರಣೆಯುಳ್ಳವಂತರ ಸಮಿತಿ ರಚಿಸಲು ಹಾಗೂ ತಾವುಗಳು ಆಡಳಿತದ ಹಿತದೃಷ್ಟಿಯಿಂದ ದಯವಿಟ್ಟು ತಕ್ಷಣ ಸುರಪುರ ತಹಶೀಲ್ದಾರ ಆಡಳಿತಾಧಿಕಾರಿಯನ್ನು ವರ್ಗಾವಣೆ ಮಾಡಬೇಕೆಂದು ವಿಶ್ವಕರ್ಮ ಮಹಾ ಒಕ್ಕೂಟ ಯಾದಗಿರಿ ಜಿಲ್ಲಾ ಘಟಕವು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿದೆ.
ಈ ಸಂದರ್ಭದಲ್ಲಿ ವಿಶ್ವಕರ್ಮ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಮನೋಹರ ಪತ್ತರಾ , ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಕೌಲೂರು ಹಿಂದು ಧಾರ್ಮಿಕ ಆಚರಣೆಯ ಸಮಿತಿ ಸದಸ್ಯರು ಹಾಗೂ ಹಿಂದು ಸಮಾಜದ ಮುಖಂಡರು ವಿಶ್ವಕರ್ಮ ಸಮಾಜ ಮುಖಂಡರು ಉಪಸ್ಥಿತರಿದ್ದರು.