ನಂತರ ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ(ಪ್ರೋತ್ಸಾಹ ಧನ) ಮತ್ತು ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರ ಗೌಡಗೆರೆ ಧರ್ಮದರ್ಶಿಗಳು ಶ್ರೀ ಮಲ್ಲೇಶ್ ಗುರೂಜಿ ರವರಿಗೆ,
ಡಿಎಸ್ ಮ್ಯಾಕ್ಸ್ ನಿರ್ದೇಶಕರು, ಎಸ್.ಪಿ ದಯಾನಂದರವರಿಗೆ, ಕರ್ನಾಟಕ ರಣಧೀರರ ವೇದಿಕೆ ರಾಜ್ಯಾಧ್ಯಕ್ಷರು ಶಂಕರ್ ಗೌಡ್ರು ಕೆ ಆರ್ ರವರಿಗೆ ತ್ರಿವಳಿ ರತ್ನಗಳಿಗೆ "ನೆರವು ರತ್ನ" ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕಾರ್ಮಿಕರ ಮಕ್ಕಳಾದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮತ್ತು ಮಂಡಳಿಯಿಂದ ಪಿಂಚಣಿ ವೇತನ ಪಡೆಯುತ್ತಿರುವ ಹಿರಿಯ ಕಾರ್ಮಿಕರಿಗೆ ಗೌರವ ಸನ್ಮಾನ ಮಾಡಲಾಯಿತು. ಮಲ್ಲೇಶ್ ಗುರೂಜಿ ಅವರು ಮಾತನಾಡಿ ನನ್ನ ಮತ್ತು ಅಶ್ವಥ್ ಮರಿಗೌಡರವರ ಬಾಲ್ಯದಿಂದ ಒಡನಾಟವಿದ್ದು ಅಶ್ವತ್ ಮರಿಗೌಡರವರನ್ನು ನಾನು ಹತ್ತಿರದಿಂದ ಬಲ್ಲೆ ಒಂದು ತೀರ ಬಡ ಕುಟುಂಬದಿಂದ ಬಂದು ಬೆಂಗಳೂರು ನಗರ ಪ್ರದೇಶದಲ್ಲಿ ಕೂಲಿ ಕಾರ್ಮಿಕರ ವರ್ಗಕ್ಕೆ ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಹಾಗೂ ಸರ್ಕಾರ ಮಾಡಬೇಕಾಗಿರುವ ಕೆಲಸವನ್ನು ಅಶ್ವಥ್ ರವರು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರೋತ್ಸಾಹ ಧನ ನೀಡುತ್ತಿರುವುದು ಮಾದರಿಯ ಕೆಲಸ ಮುಂದಿನ ವರ್ಷದಿಂದ ಅಶ್ವತ್ ಮರಿಗೌಡ್ರು ನೇತೃತ್ವದಲ್ಲಿ ನಡೆಯುವ ಪ್ರತಿಭಾ ಪುರಸ್ಕಾರಕ್ಕೆ ಪ್ರತಿವರ್ಷ ಕ್ಷೇತ್ರದ ವತಿಯಿಂದ ಒಂದು ವಿದ್ಯಾರ್ಥಿಗೆ ಲ್ಯಾಪ್ಟಾಪ್ ಅನ್ನು ನೀಡಲಾಗುವುದು ಎಂದು ಆಶೀರ್ವದಿಸಿದರು.
ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಮತ್ತು ಕಾರ್ಯದರ್ಶಿಗಳು ರವಿ ಡಿ ಚೆನ್ನಣ್ಣನವರ್ ರವರು ಮತ್ತು ಜಂಟಿ ಕಾರ್ಯದರ್ಶಿಗಳು ಎ.ಎಚ್ ಉಮೇಶ್ ರವರು ಮಂಡಳಿಯ ಕಾರ್ಯನಿಮಿತ್ತ ಹೊರ ರಾಜ್ಯಕ್ಕೆ ತೆರಳಿದ್ದು, ಕಾರ್ಯಕ್ರಮಕ್ಕೆ ಬೋರಲು ಸಾಧ್ಯವಾಗದ ಕಾರಣ, ಓಡಿಸ್ಸಾ ರಾಜ್ಯ ಭುವನೇಶ್ವರದಿಂದ ನೇರ ಪ್ರಸಾರ ವಿಡಿಯೋ ಮೂಲಕ ಮಾತನಾಡಿ ಕಾರ್ಮಿಕರು ಮತ್ತು ಕಾರ್ಯಕ್ರಮದ ಬಗ್ಗೆ ಹಿತನುಡಿಗಳನ್ನು ನುಡಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಅಧಿಕಾರಿ ನಾಗೇಂದ್ರ ಹೆಚ್ ಆರ್ ರವರು, ರಾಜ್ಯ ಉಪಾಧ್ಯಕ್ಷರು ಹೆಚ್ ಕುಮಾರ್, ನಮ್ಮ ಬೆಂಗಳೂರು ಎಸ್ಟೇಟ್ಸ್ ಮಾಲೀಕರು ಶಿವಕುಮಾರ್, ರಾಜ್ಯದ ಎಲ್ಲಾ ಜಿಲ್ಲೆಗಳ ಕಾರ್ಮಿಕ ಸಂಘಗಳ ಅಧ್ಯಕ್ಷರು/ ಪದಾಧಿಕಾರಿಗಳು ಕಾರ್ಮಿಕರು ಉಪಸ್ಥಿತರಿದ್ದರು.
ವರದಿ : ಶಿವು ರಾಠೋಡ