ನಾಲತವಾಡ. ಹಲವಾರು ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಲೋಟಗೇರಿ ನಾಲತವಾಡ ಸಂಪರ್ಕದ ಡಾಂಬರ್ ರಸ್ತೆಯನ್ನು ಗುತ್ತಿಗೆದಾರರಾದ ರಾಯನಗೌಡ ತಾತರಡ್ಡಿ ಅವರು ಗುಣಮಟ್ಟದಲ್ಲಿ ನಿರ್ಮಿಸಿದ್ದಾರೆ ಎಂದು ಸ್ಥಳಿಯರು ಕೊಂಡಾಡಿದ್ದು ಮುಂದಿನ ಇನ್ನುಳಿದ ಅರ್ಧ ರಸ್ತೆಯನ್ನು ಸಹ ಗುಣಮಟ್ಟದಲ್ಲಿ ನಿರ್ಮಿಸುವಂತೆ ಸೂಚಿಸುತ್ತೇನೆ ಎಂದು ಕೆಎಸ್‌ಡಿಎಲ್ ಅಧ್ಯಕ್ಷರು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಇಲ್ಲಿಗೆ ಸಮೀಪದ ಲೊಟಗೇರಿ ಬಳಿ ನಿರ್ಮಿಸಿದ ಡಾಂಬರ್ ರಸ್ತೆಯನ್ನು ಗ್ರಾ.ಪಂ ಸದಸ್ಯರಾದ ದೇವಿ ಆರಾಧಕ ಡಾ.ಗುರುಮೂರ್ತಿ ಕಣಕಾಲಮಠ ಸಾನಿಧ್ಯದಲ್ಲಿ ಪೂಜೆ ನೆರವೇರಿಸಿ ಲೋಕರ್ಪಣೆಗೊಳಿಸಿ ಮಾತನಾಡಿದ ಅವರು ರೈತರ ಕೃಷಿ ಉತ್ಪನ್ನಗಳ ಸಾಗಣೆ ಮತ್ತು ಸಾರ್ವಜನೀಕರಿಗೆ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗಿದ್ದ ಹದಗೆಟ್ಟ ರಸ್ತೆ ನಿರ್ಮಾಣಕ್ಕೆ ಸರಕಾರ ಮಟ್ಟದಲ್ಲೇ ವಿಳಂಬವಾಗುತ್ತದೆ ಎಂದರು.
ಲೊಟಗೇರಿ ಮತ್ತು ಬೈಲಹನುಮಂತ ದೇವಸ್ಥಾನದ ವರೆಗೆ ರಸ್ತೆ ನಿರ್ಮಾಣಕ್ಕೆ ಟ್ಯಾಕ್ಟರ್ ಚಲಾಯಿಸಿ ವಿಕ್ಷಣೆ ಮಾಡಿದ ಶಾಸಕರು, ಗ್ರಾಮೀಣ ಭಾಗದ ರಸ್ತೆಗಳನ್ನು ‘ನಮ್ಮ ಹೊಲ ನಮ್ಮ ರಸ್ತೆ’ಯಡಿ ಕ್ರೀಯಾಯೋಜನೆ ಮಾಡಲು ಗ್ರಾ.ಪಂ ಮಟ್ಟದಲ್ಲಿ ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.
ಶಾಸಕರಿಗೆ ಒತ್ತಾಯ: ಸುಮಾರು ವರ್ಷಗಳಿಂದ ಹದಗೆಟ್ಟ ರಸ್ತೆಯಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ, ಟೆಂಡರ್ ಕರೆಯಲಾಗಿದ್ದರೂ ಈವರೆಗೂ ರಸ್ತೆ ಪೂರ್ಣಗೊಂಡಿಲ್ಲ, ಸದ್ಯ 1 ಕಿಮೀ ರಸ್ತೆ ನಿರ್ಮಿಸಿದ ನಾಲತವಾಡದ ಗುತ್ತಿಗೆದಾರರಾದ ರಾಯನಗೌಡ ತಾತರಡ್ಡಿ ಅವರಿಗೆ ಇನ್ನುಳಿದ ಅರ್ಧ ನಾಲತವಾಡ ವರೆಗೆ ರಸ್ತೆ ನಿರ್ಮಿಸಲು ಗುತ್ತಿಗೆ ನೀಡಬೇಕು ಎಂದು ಸ್ಥಳದಲ್ಲೇ ಗ್ರಾಮದ ಸಾರ್ವಜನೀಕರು ಶಾಸಕರಿಗೆ ಒತ್ತಾಯಿಸಿದರು.
ಈ ವೇಳೆ ದೇವಿ ಆರಾಧಕರಾದ ಡಾ.ಗುರುಮೂರ್ತಿ ಕಣಕಾಲಮಠ, ಗುತ್ತಿಗೆದಾರರಾದ ರಾಯನಗೌಡ ಚಿತಾಪೂರ, ರಾಮನಗೌಡ ಚಿತಾಪೂರ, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಮಲ್ಲಪ್ಪ ಜೂಲಗುಡ್ಡ, ತಾ.ಪಂ ಮಾಜಿ ಸದ್ಯಸರಾದ ಸುರೇಶ ಹುಗ್ಗಿ,ಲಕ್ಕಪ್ಪ ನಾಗರಬೆಟ್ಟ, ಬಸವರಾಜ ನಾಯ್ಕಲ್ ಹಾಗೂ ಪಿಡಬ್ಲುಡಿ ಅಧಿಕಾರಿಗಳು ಇದ್ದರು.
ಪೋಟೋ29ಎನ್‌ಎಲ್ಟಿಡಿ1 ನಿರ್ಮಿಸಿ ಡಾಂಬರ್ ರಸ್ತೆಗೆ ಪೂಜೆ ಸಲ್ಲಿಸಿದ ಶಾಸಕ ಸಿ.ಎಸ್.ನಾಡಗೌಡ ಹಾಗೂ ಡಾ.ಗುರುಮೂರ್ತಿ
ವರದಿ : ಶಿವು ರಾಠೋಡ