ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿಗೆ ಅವಹೇಳನ ಆರೋಪ :- ವಕೀಲ ಜಗದೀಶನ ನಾಲಿಗೆ ಕಟ್ ಮಾಡುವೆವು- ಶೀವಾಲಿಲಾ ಬಸರಕೋಡ

Udayavani News
0
ಮುದ್ದೇಬಿಹಾಳ:- ಕರ್ನಾಟಕ ರಾಜ್ಯದ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನಾಗಲಕ್ಷ್ಮೀ ಚೌಧರಿ ಅವರು ಮಹಿಳೆಯರ ಕಷ್ಟಗಳಿಗೆ ಸ್ಪಂದಿಸುತ್ತಿದ್ದು ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ವಕೀಲ ಜಗದೀಶನ ನಾಲಿಗೆ ಕಟ್ ಮಾಡುವೆವು ಎಂದು ನಾಗಲಕ್ಷ್ಮೀ ಚೌಧರಿ ಅಭಿಮಾನಿ ಬಳಗದ ಸದಸ್ಯೆ ಶೀವಲೀಲಾ ಬಸರಕೋಡ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಹಿಳೆಯರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುತ್ತಾ ಸಮಾಜದಲ್ಲಿ ಮಹಿಳೆಯರು ನಾಲ್ಕು ಗೋಡೆಗಳನ್ನು ಬಿಟ್ಟು ಹೊರ ಬಂದು ದುಡಿಯುವುದಕ್ಕೆ ಧೈರ್ಯ ತುಂಬುತ್ತಿದ್ದಾರೆ ಆದರೆ ಇಂತಹ ದಿಟ್ಟ ಹೋರಾಟಗಾರ್ತಿಯ ಕುರಿತು ವಕೀಲ ವೃತ್ತಿಯಲ್ಲಿದ್ದುಕೊಂಡು ಕೀಳುಮಟ್ಟದಲ್ಲಿ ಮಾತನಾಡಿರುವುದು ಶೋಭೆ ತರುವುದಿಲ್ಲ ಎಂದು ಹೇಳಿದರು..
ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ತಿಪ್ಪಣ್ಣ ದೊಡ್ಡಮನಿ. ಅಭಿಮಾನಿ ಬಳಗದ ಯುವಮುಖಂಡ ಮುತ್ತು ಟಕ್ಕಳಕಿ ಮಾತನಾಡಿ.ವಕೀಲ ಜಗದೀಶ ಇದೇ ರೀತಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡುವುದು ಮುಂದುವರೆಸಿದ್ದಲ್ಲಿ ಅವರ ಮನೆಗೆ ಮುತ್ತಿಗೆ ಹಾಕುವುದಕ್ಕು ಹಿಂಜರಿಯುವುದಿಲ್ಲ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಲಿಲಿತಾ ಮುರಾಳ.ಮಾಳಿಂಗರಾಯ ಯರಝರಿ .ಹನಮಗೌಡ ಗೌಡರ, ರೇಣುಕಾ ಚಲವಾದಿ, ಭವ್ಯ ಹಿಪ್ಪರಗಿ,ಲಕ್ಷ್ಮೀಬಾಯಿ ಇಂಗಳಗೇರಿ, ರೀಜಾದ ನಧಾಫ.‌ಗೌರಮ್ಮ ಭೋವಿ.,ಲೋಕೆಶ ಹಾವರಗಿ,ನಿಂಗು ಬಂಡೆಪನಳ್ಳಿ,ಅನೀಲ ವಾಲಿಕಾರ ಹಾಗೂ ಮುಂತಾದವರು ಇದ್ದರು.

ಜಿಲ್ಲಾ ವರದಿಗಾರ : ಶಿವು ರಾಠೋಡ 

Post a Comment

0Comments

Post a Comment (0)