ಬೇಸಿಗೆ ರಜೆಯಲ್ಲಿ ಮಕ್ಕಳಿಗಾಗಿ ಮುದ್ದೇಬಿಹಾಳ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಕರಾಟೆ ಜೊತೆ ಸ್ಕೆಟಿಂಗ್ ತರಬೇತಿ.

Udayavani News
0
ಮುದ್ದೇಬಿಹಾಳ ಪಟ್ಟಣದಲ್ಲಿ ಬೇಸಿಗೆ ರಜೆಯಲ್ಲಿ ಪ್ರಪ್ರಥಮ ಬಾರಿಗೆ ಆರೋಗ್ಯರ ಕ್ರೀಡೆಗಳಲ್ಲೊಂದಾದ ಕರಾಟೆ ಹಾಗೂ  ಸ್ಕೆಟಿಂಗ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು ಆಸಕ್ತ ಪಾಲಕರು ತಮ್ಮ ಐದು ವರ್ಷ ಮೇಲ್ಪಟ್ಟ ವಯಸ್ಸಿನ  ಮಕ್ಕಳಿಗೆ ಬೇಸಿಕ್ ಹಾಗೂ ಅಡ್ವಾನ್ಸ್ ತರಬೇತಿಯನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಹೆಸರು ನೋಂದಾಯಿಸಲು ತರಬೇತಿದಾರ ಶಿವಕುಮಾರ ಶಾರದಳ್ಳಿ ಮೊಬೈಲ್ ಸಂಖ್ಯೆ 9901812906,
97431 70371 ಕರೆ ಮಾಡಿ 
 ಬೇಗ ಬೇಗನೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. 

ಮೆಟ್ರೋ ಸಿಟಿ, ಮಹಾನಗರಗಳ ಮಕ್ಕಳಿಗಷ್ಟೆ ಸೀಮಿತವಾಗಿರುವ ಕರಾಟೆ ಮತ್ತು  ಸ್ಕೇಟಿಂಗ್‌ ತರಬೇತಿಯನ್ನು ಮುದ್ದೇಬಿಹಾಳ ಪಟ್ಟಣದ ಮಕ್ಕಳು ಕೂಡಾ ಪಡೆಯುವ ಅವಕಾಶವಿದೆ.

 ನಿಯಮಿತವಾಗಿ ತರಬೇತಿ ಪಡೆದ ಕ್ರೀಡಾಪಟುಗಳು ಹಂತ ಹಂತವಾಗಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಸ್ಕೇಟಿಂಗ್‌ ಕ್ರೀಡಾಕೂಟದಲ್ಲಿ ಭಾಗವಹಿಸುವ ಸುವರ್ಣಾವಕಾಶವನ್ನು ಹೊಂದ ಬಹುದಾಗಿದೆ.
ಸ್ಕೇಟಿಂಗ್‌ ಕ್ರೀಡೆಯಲ್ಲಿ  ಲಾಭಗಳು :  ದೇಹದ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಸ್ಕೆಟಿಂಗ್ ಕ್ರೀಡೆ ಸಹಕಾರಿಯಾಗಿದೆ, ಮಕ್ಕಳಲ್ಲಿ ಏಕಾಗ್ರತೆಯ ಜೊತೆಗೆ ಅಧ್ಯಯನ ದತ್ತ ಗುಣಗಳ ಬೆಳವಣಿಗೆಗೆ ಬಹು ಉಪಯುಕ್ತ ಜೊತೆಗೆ ಮಾನಸಿಕ, ದೈಹಿಕ ಸ್ಥಿರತೆಯನ್ನು ಕಾಪಾಡುತ್ತದೆ
ಇಚ್ಛಾಶಕ್ತಿ, ಆತ್ಮ ವಿಶ್ವಾಸ ಹೆಚ್ಚಾಗುತ್ತದೆ ಹಾಗೂ ಹೃದಯದ ಸ್ನಾಯುಗಳಲ್ಲಿ ಬಲ ಹೆಚ್ಚುತ್ತದೆ ಇಷ್ಟೆಲ್ಲ ಆರೋಗ್ಯಕರ ಪ್ರಯೋಜಗಳನ್ನು ಸ್ಕೆಟಿಂಗ್ ಕ್ರೀಡೆ ಹೊಂದಿದೆ. 

ಸೀಮಿತ ಸಂಖ್ಯೆ ಸೀಟ್ ಗಳಿದ್ದು ಬೇಗ ಬೇಗ ಹೆಸರನ್ನು ನೊಂದಾಯಿಸಿಕೊಳ್ಳಿ ಎಂದು ಶಿವಕುಮಾರ ಶಾರದಳ್ಳಿ ತಿಳಿಸಿದರು.

 ವರದಿಗಾರ : ಶಿವು ರಾಠೋಡ. ಮುದ್ದೇಬಿಹಾಳ

Post a Comment

0Comments

Post a Comment (0)