ಬೆಂಗಳೂರ : ಮುಂದಿನ ಚುನಾವಣೆಯಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿಗೆ ಬಹುಮತ ಬರಲಿದೆ ಎಂದು ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಎ.ಎಸ್.ಪಾಟೀಲ್ ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,
ವಿಜಯೇಂದ್ರ ನೇತೃತ್ವದಲ್ಲಿ, ಹಿಂದುತ್ವದ ಆಧಾರದಲ್ಲಿ ಪಕ್ಷ ಕಟ್ಟುವ ಸಂಕಲ್ಪ ಮಾಡಿದ್ದೇವೆ.
ಸಂಕಲ್ಪ ಸಾಕಾರ ಮಾಡಲು ವಿಜಯೇಂದ್ರ ನೇತೃತ್ವದಲ್ಲಿ ಕೆಲಸ ಮಾಡೋಣ. ಮುಂದಿನ ಚುನಾವಣೆಯಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿಗೆ ಬಹುಮತ ಬರಲಿದೆ ಎಂದು ಭವಿಷ್ಯ ನುಡಿದರು.
2023ರ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರದಲ್ಲಿ ನಾವು 7 ಜನ ಸೋತಿದ್ದೆವು. ಯತ್ನಾಳ್ ಅವರೊಬ್ಬರು ಗೆದ್ದಿದ್ದರು. ಎಂಪಿ ಚುನಾವಣೆಗೆ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಮಾಡಿದ್ದೆವು. ಯತ್ನಾಳ್ ಆ ಸಭೆಗೆ ಬಂದಿರಲಿಲ್ಲ.
ಸೋತವರು ಚುನಾವಣೆ ಗೆಲ್ಲಿಸುತ್ತೇವೆ ಅಂತ ಹೇಳಿದ್ದೆವು ಅದರಂತೆ ಗೆದ್ದೆವು. ವಿಜಯಪುರದಲ್ಲಿ ಲೀಡ್ ಕೊಟ್ಟು, ಹಿಂದೂ ಹುಲಿ ಕ್ಷೇತ್ರದಲ್ಲಿ 10 ಸಾವಿರ ಲೀಡ್ ಕಾಂಗ್ರೆಸ್‌ಗೆ ಹೋಯಿತು. ಯತ್ನಾಳ್ ಹುಲಿನೂ ಅಲ್ಲ, ಇಲಿನೂ ಅಲ್ಲ. ಈಗ ಅದು ಬಿಲ ಸೇರಿಕೊಂಡಿದೆ ಎಂದು ಕಿಡಿಕಾರಿದರು.
ಜಿಲ್ಲಾ ವರದಿಗಾರ : ಶಿವು ರಾಠೋಡ