ಹುಣಸಗಿ ತಾಲೂಕಿನಲ್ಲಿ ಇಸ್ಪೇಟ್ ಅಂದರ್ ಬಾರ್ ಆಟ ಹಾಗೂ ಮಟಕ ಕ್ರಿಕೆಟ ಬೆಟ್ಟಿಂಗ್ ಸೇರಿದಂತೆ ಅಕ್ರಮ ಚಟುವಟಿಕೆ ದಂದೆ : ಪೊಲೀಸ್ ವರಿಷ್ಟಾಧಿಕಾರಿ ಪೃಥ್ವಿ ಶಂಕರ.

Udayavani News
0
ಹುಣಸಗಿ: ಪಟ್ಟಣದ ಎಪಿಎಂಸಿಯಲ್ಲಿ ಕುರಿ ಮಾರ್ಕೆಟ್ ಇದ್ದರೂ ಸಹ ಪ್ರತಿ ಭಾನುವಾರ ರಸ್ತೆಯಲ್ಲಿ ಕುರಿ ಮಾರಾಟ ಮಾಡುತ್ತಾರೆ. ಇದರಿಂದ ಪ್ರಯಾಣಿಕರಿಗೆ, ಬೈಕ್ ಸವಾರರಿಗೆ ಅನೇಕ ಸಾರ್ವಜನಿಕರಿಗೆ ಅನಾನು ಕೂಲ ವಾಗಿದ್ದು ಕೂಡಲೇ ಕುರಿ ಮಾರುಕಟ್ಟೆ ಬೇರೆ ಕಡೆ ಸ್ಥಳಾoತರ ಮಾಡುವಂತೆ ಬೇಡ ಜಂಗಮ ಮಹಾಸಭಾ ಯಾದಗಿರಿ ಜಿಲ್ಲಾಧ್ಯಕ್ಷ ನಾಗಯ್ಯ ಸ್ವಾಮಿ ದೇಸಾಯಿ ಗುರು ಒತ್ತಾಯಿಸಿದರು

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಇಂದು ನಡೆದ ಜನಸಂಪರ್ಕ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

ತಾಲೂಕ ಡಿಎಸ್ಎಸ್ ಸಂಘದ ಅಧ್ಯಕ್ಷ ವೀರೇಶ್ ಗುಳಬಾಳ್ ಮಾತನಾಡಿ, ಹುಣಸಗಿಯ ತಾಲೂಕಿನ ಕೆಲವೊಂದು ಹಳ್ಳಿಗಳಲ್ಲಿ ಇಸ್ಪೇಟ್ ಅಂದರ್ ಬಾರ್ ಆಟ ಹಾಗೂ ಮಟಕ ಕ್ರಿಕೆಟ ಬೆಟ್ಟಿಂಗ್ ಸೇರಿದಂತೆ ಅಕ್ರಮ ಚಟುವಟಿಕೆ ದಂದೆ ನಡೆಯುತ್ತಿದ್ದು ಪೊಲೀಸರ ಗಮನಹರಿಸಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸ ಬೇಕು ಎಂದರು.

ತಾಲೂಕ್ ಟಿಪ್ಪು ಸುಲ್ತಾನ ಸಂಯುಕ್ತ ರಂಗದ ಅಧ್ಯಕ್ಷ ರಸುಲ ಬೆನ್ನೂರು ಮಾತನಾಡಿ, ಬಸವೇಶ್ವರ ಸರ್ಕಲ್, ಮಾಂತಸ್ವಾಮಿ ಸರ್ಕಲ್, ಬಸ್ ಸ್ಟಾಪ್ ಹತ್ತಿರ ಮೂರು ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿದ್ದರು ಸಹ ಕಳ್ಳತನ ದರೋಡೆ ಮೋಟರ್ ಸೈಕಲ ಹಾಗೂ ಸರಗಳ್ಳರಿಗೆ ಮಾಡುವರಿಗೆ ಅನುಕೂಲ ವಾಗಿದೆ ಕೂಡಲೇ ಬಸವೇಶ್ವರ ಸರ್ಕಲ ಹಾಗೂ ಮಾಂತಸ್ವಾಮಿ ಸರ್ಕಲ್ ಹಾಗೂ ಬಸ್ ಸ್ಟಾಪ್ ಹತ್ತಿರ ಮೂರು ಬಂದ್ ಆಗಿರುವ ಸಿ ಸಿ ಕ್ಯಾಮೆರಾ ಗಳನ್ನು ರಿಪೇರಿ ಮಾಡಿಸಿ ಸಾರ್ವಜನಿಕ ರಿಗೆ ಹಾಗೂ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕ್ಕೆ ಅಗ್ರಹಿಸಿದರು.

ಯಾದಗಿರಿ ಹಿರಿಯ ಪೊಲೀಸ್ ವರಿಷ್ಟಾಧಿಕಾರಿ ಪೃಥ್ವಿ ಶಂಕರ ಮಾತನಾಡಿ ಮೊನ್ನೆ ಇಸ್ಲಾಂಪುರ ಹೊರವಲಯದಲ್ಲಿ ಜೂಜಾಟ ಆಡುವರನ್ನು ಬಂಧಿಸಿ ನಾಲ್ಕು ಕಾರುಗಳು ಹಾಗೂ 14 ಮೋಟರ್ ಸೈಕಲ್ ಗಳನ್ನು ವಶಕ್ಕೆ ಪಡೆದಿದ್ದೇವೆ. ಎಂಟು ಜನರ ಮೇಲೆ ಪ್ರಕರಣ ದಾಖಲಿಸಿದ್ದೇವೆ ಇನ್ನು ಎಲ್ಲಿ ಮಟ್ಕಾ ಇಸ್ಪೇಟ್ ಕ್ರಿಕೆಟ್ ಬೆಟ್ಟಿಂಗ್ ಆಡಿಸು ತ್ತಾರೆ ಮಾಹಿತಿ ಕೊಡಿ ನಮಗೆ ಅಂತವರ ಮೇಲೆ ಪ್ರಕರಣ ದಾಖಲಿಸು ತ್ತೇವೆ ಎಂದು ಹೇಳಿದರು

ಸಭೆಯಲ್ಲಿ ಸುರಪುರ ಡಿವೈಎಸ್ಪಿ ಜಾವಿದ ಇನಾಮ್ದಾರ, ಹುಣಸಗಿ ಸಿಪಿಐ ರವಿಕುಮಾರ, ಪಿಎಸ್ಐ ಚಂದ್ರ ಶೇಖರ್ ಭಾಗಣ್ಣ ಕ್ರೈಂ ಪಿಎಸ್ಐ, ಸಿಬ್ಬಂದಿಗಳು ವಿವಿಧ ಸಂಘಟನೆಗಳ ಮುಖಂಡರುಗಳು ಊರಿನ ಹಿರಿಯ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ

Post a Comment

0Comments

Post a Comment (0)