ಶಿಕ್ಷಣದಿಂದ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ : ಎಂ ಎಲ್ ಸಿ ಸಾಬಣ್ಣ ತಳವಾರ

Udayavani News
0
ಕಾಳಗಿ: 'ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರದ ಅಗತ್ಯವಿದೆ. ಆತ್ಮವಿಶ್ವಾಸ, ಪ್ರತಿಭೆಯಿಂದ ವ್ಯಕ್ತಿತ್ವ ರೂಪಿಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಬೇಕು' ಎಂದು ವಿಧಾನ ಪರಿಷತ್ ಸದಸ್ಯ ತಳವಾರ ಸಾಬಣ್ಣ ಸಲಹೆ ನೀಡಿದರು.

ಪಟ್ಟಣದಲ್ಲಿ ಸೋಮವಾರ ನಿಸರ್ಗ ಗುರುಕುಲ ಎಜ್ಯುಕೇಶನಲ್ ಮತ್ತು ಚಾರಿಟಬಲ್ ಟ್ರಸ್ಟ್‌ನಲ್ಲಿ ₹12 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕೊಠಡಿ ಉದ್ಘಾಟಿಸಿ ಹಾಗೂ 8ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. 'ಈಗಿರುವ ಪೀಳಿಗೆ ಸಂಸ್ಕಾರ ವಂಚಿತರಾಗಿ ಸಮಾಜದಲ್ಲಿ ಸಾಕಷ್ಟು ಅನಾಹುತಗಳಾಗುತ್ತಿವೆ. ವ್ಯಕ್ತಿ ಬೆಳವಣಿಗೆಯಲ್ಲಿ ಜ್ಞಾನ, ಸಂಸ್ಕಾರ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು. ಮಹಾಕಾವ್ಯ ಬರೆದ ವಾಲ್ಮೀಕಿ, ವೇದವ್ಯಾಸ ಮತ್ತು ಶ್ರೇಷ್ಠ ಕಾಳಗಿ ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ನೂತನ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ತಳವಾರ ಸಾಬಣ್ಣ ಅವರು 8ನೇ ತರಗತಿ ವಿದ್ಯಾರ್ಥಿಗಳಿಗೆ ಕಾಣಿಕೆ ನೀಡಿ ಶುಭ ಕೋರಿದರು

ಸಂವಿಧಾನ ಬರೆದ ಡಾ.ಬಿ.ಆರ್. ಅಂಬೇಡ್ಕ‌ರ್ ಜಗತ್ತಿಗೆ ಕೊಟ್ಟ ಜ್ಞಾನವನ್ನು ನೆನಪಿಸಿಕೊಂಡು ಸಮಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕು' ಎಂದು ಹೇಳಿದರು. ಜಗದೇವಪ್ಪ ಪಾಳಾ 'ಸಂಸ್ಥೆಯಲ್ಲಿ ಮಾತನಾಡಿ, ವರ್ಷಪೂರ್ತಿ ಮೌಲ್ಯಯುತ ಒಳ್ಳೆಯ ಶಿಕ್ಷಣ ಕೊಡಲಾಗುತ್ತಿದೆ. ಸಂಸ್ಥೆ ಇನ್ಮುಂದೆ ಎತ್ತರಕ್ಕೆ ಬೆಳೆಯಲಿ' ಎಂದು ಹಾರೈಸಿದರು.

ವಿನಯ ಸುರೇಶ ಅನಿಸಿಕೆ ಹಂಚಿಕೊಂಡರು. ಗ್ರಾ.ಪಂ ಮಾಜಿ ಅಧ್ಯಕ್ಷ ಶಿವಶರಣಪ್ಪ ಕಮಲಾಪುರ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಇಲಾಖೆ ಎಇ ರಾಜೇಂದ್ರ ದೇಶಪಾಂಡೆ, ಬಿಎಸ್‌ಎನ್‌ಎಲ್ ನಿವೃತ್ತ ನೌಕರ ಶ್ರೀಮಂತ ನಾಟೀಕಾರ ಹಾಜರಿದ್ದರು.ಪ್ರಧಾನ ಅಧ್ಯಾಪಕಿ ಶಿವಲೀಲಾ ಅಷ್ಟಗಿ ಪ್ರಾರ್ಥಿಸಿದರು. ಶಿಕ್ಷಕ ಅರವಿಂದ ಸಿತಾಳೆ ಸ್ವಾಗತಿಸಿದರು. ಬಸವರಾಜ ಕೋಡ್ಲಿ ವಂದಿಸಿದರು. ಗುಂಡಪ್ಪ ಕರೆಮನೋರ ನಿರೂಪಿಸಿದರು. ಇದಕ್ಕೂ ಮುಂಚೆ ಗೋಪೂಜೆ ನೆರವೇರಿತು. ನಿವೃತ್ತ ಶಿಕ್ಷಕ ಮಹ್ಮದ ಗುಡುಸಾಬ ಕಮಲಾಪುರ, ನೀಲಕಂಠ ಮಡಿವಾಳ, ಗಂಗಾಧರ ಧರಿ, ವೀರಣ್ಣಸಗರ, ರಮೇಶ ನಾಮದಾರ, ವೀರೇಶ ಹಲಚೇರಾ, ನಾಗಣ್ಣಾ ಕಮಕನೂರ, ಪೃಥ್ವಿರಾಜ ನಾಮದಾರ, ಸಂತೋಷ ಕಡಬೂರ, ಕಾಶಿನಾಥ ತೆಲಗಾಣಿ, ರವಿ ನಾಟೀಕಾರ, ಸಂಗಮೇಶ, ಚುನ್ನುಮಿಯಾ ದರ್ವೇಶ, ಪ್ರವೀಣ ನಾಮದಾರ, ಬಾಬಾಗೌಡ ಬಿರಾದಾರ, ಶಿವಶರಣ ನಾರಂಜಿ ಅನೇಕರು ಹಾಜರಿದ್ದರು.

Post a Comment

0Comments

Post a Comment (0)