ತಡರಾತ್ರಿ ಏಕಾಏಕಿ ತೆರೆದ `KRS ಡ್ಯಾಂ' ಗೇಟ್​: ಸಾವಿರಾರು ಕ್ಯೂಸೆಕ್​ ಕಾವೇರಿ ನದಿ ನೀರು ಪೋಲು.!

Udayavani News
0
ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯದ ಗೇಟ್ ಭಾನುವಾರ ರಾತ್ರಿ ಏಕಾಏಕಿ‌ ತೆರೆದಿದ್ದು ಸಾವಿರಾರು ಕ್ಯೂಸೆಕ್ ಕಾವೇರಿ ನೀರು ಪೋಲಾಗಿದೆ.

ಕೆಆರ್ ಎಸ್ ಗೇಟ್ ತೆರೆದ ಪರಿಣಾಮ 24 ಗಂಟೆಯಲ್ಲಿ ಬರೋಬ್ಬರಿ 2,000 ಕ್ಯೂಸೆಕ್ ನೀರು‌ ಪೋಲಾಗಿದೆ.ಘಟನೆ ಬಳಿಕ ಸೋಮವರಾರ ರಾತ್ರಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಗೇಟ್ ಬಂದ್ ಮಾಡಿದ್ದಾರೆ.

ಜಲಾಶಯದ ಗೇಟ್ ಏಕಾಏಕಿ ತೆರೆಯುವುದು ವಿರಾಳಾತಿ ವಿರಳ. ಆದರೆ, ಇಲ್ಲಿ ಕೆಆರ್​ಎಸ್​ ಡ್ಯಾಂನ ಗೇಟ್​ ಏಕಾಏಕಿ ತೆರೆದಿದ್ದು, ಅನುಮಾನವನ್ನು ಹುಟ್ಟು ಹಾಕಿದೆ. ಎರಡು ಕಾರಣಗಳಿಂದ ಡ್ಯಾಂ ಗೇಟ್​ ತೆರೆದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ಡ್ಯಾಂನ ಗೇಟ್​ನ ಮೋಟಾರ್​ ರಿವರ್ಸ್​ ಆಗಿದ್ದರಿಂದ ಗೇಟ್​ ತೆರೆದಿರಬಹುದು, ಅಥವಾ ನಮ್ಮದೇ ಸಿಬ್ಬಂದಿ ಗೇಟ್​ ತೆರೆದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಡ್ಯಾಂನ ಗೇಟ್​ ಏಕಾಏಕಿ ತೆರೆದ ವಿಚಾರ ತಿಳಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಲಿದ್ದಾರೆ.

Post a Comment

0Comments

Post a Comment (0)