ನೆರವು ಸಂಸ್ಥೆಯ ನೂತನ ಕಚೇರಿ ಉದ್ಘಾಟನೆ : ಅಶ್ವಥ ಟಿ ಮರಿಗೌಡ.

Udayavani News
0

ಮಾನ್ವಿ : ಕಾರ್ಮಿಕರು ಸರಕಾರ ನೀಡುವ ಸೌಲಭ್ಯದಿಂದ ವಂಚಿತರಾಗಿದ್ದು ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಕಾರ್ಮಿಕರು ಸದ್ಬಳಕೆ ಮಾಡಿಕೊಳ್ಳ ಬೇಕೆಂದು ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಅಶ್ವಥ ಟಿ ಮರಿಗೌಡ ಹೇಳಿದರು.

ಪಟ್ಟಣದ ಬಾಲಾಜಿ ಕಾಂಪ್ಲೆಕ್ಸ್ ಹತ್ತಿರ ಸಿಂಧನೂರು ಮೆನ್ ರೋಡ ಮಾನ್ವಿಯಲ್ಲಿ ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ನೂತನ ತಾಲ್ಲೂಕು ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಸೌಲಭ್ಯ ವಂಚಿತ ಕಾರ್ಮಿಕರನ್ನು ಗುರುತಿಸುವ ಕೆಲಸವನ್ನು ಸಂಘಟನೆ ಮಾಡುತ್ತಿದೆ. ಕಾರ್ಮಿಕರು ಸಂಘಟನೆ ಜೊತೆಗೆ ಕೈ ಜೋಡಿಸುವ ಮೂಲಕ ಕಾರ್ಮಿಕ ಕಾರ್ಡನಿಂದ ದೊರೆಯುವ ಮದುವೆ ಸಹಾಯಧನ, ಹೆರಿಗೆ ಸಹಾಯಧನ, ಶಿಷ್ಯವೇತನ, ಅಪಘಾತ ಪರಿಹಾರ ಸಹಾಯಧನ, ಶಸ್ತ್ರ ಚಿಕಿತ್ಸೆ ವೈದ್ಯಕೀಯ ಸಹಾಯ ಧನ, ಆರೋಗ್ಯ ಸೌಲಭ್ಯ, ಪಿಂಚಣಿ ಭಾಗ್ಯ ಇತ್ಯಾದಿ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿ ಹೆಚ್ಚಿನ ಮಾಹಿತಿ ಹಾಗೂ ಕಾರ್ಮಿಕರ ಕುಂದು ಕೊರತೆಗಳಿದ್ದಲ್ಲಿ ನೆರವು ಕಛೇರಿ ಸಂಪರ್ಕಿಸುವುದಾಗಿ ತಿಳಿಸಿದರು.

ಮಾನ್ವಿ ತಾಲೂಕಿನ ಅಧ್ಯಕ್ಷರನ್ನಾಗಿ ರಮೇಶ್ ಕವಿತಾಳ, ಹಾಗೆ ರಾಯಚೂರು ಜಿಲ್ಲೆಯ ಕಾರ್ಯದರ್ಶಿಯನ್ನಾಗಿ ಈರಪ್ಪ ವಲ್ಕಂದಿನ್ನಿ, ರಾಯಚೂರು ಜಿಲ್ಲೆಯ ಉಪಾಧ್ಯಕ್ಷರಾಗಿ ಈರಣ್ಣರವರನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ನೆರವು ಸಂಸ್ಥೆಯ ರಾಮಾನಗರ ಜಿಲ್ಲಾ ಅಧ್ಯಕ್ಷರು ಬೋರೆಗೌಡ ಟಿ ಎಂ. ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಹೆಚ್.ಸಿ, ಹುಣಸಗಿ ತಾಲ್ಲೂಕು ಅಧ್ಯಕ್ಷರು ಶಿವು ರಾಠೋಡ, ರಾಯಚೂರು ಜಿಲ್ಲಾ ಅಧ್ಯಕ್ಷರು ವೆಂಕಟೇಶ ರಾಠೋಡ, ಇಂಡಿಯಾ ಇಕ್ವಾಲಿಟಿ ಚಾನೆಲ್ ಪ್ರಾದೇಶಿಕ ಮುಖ್ಯಸ್ತರು ಶಿವ ಯಾದವ್, ಈರಪ್ಪ ಭೀಮಶಪ್ಪ ಪೂಜಾರಿ, ದೇವದುರ್ಗ ತಾಲ್ಲೂಕು ಅಧ್ಯಕ್ಷರು ಸಚಿನ ಪವಾರ, ರಾಯಚೂರು ತಾಲ್ಲೂಕು ಅಧ್ಯಕ್ಷರು ತಿಮ್ಮಪ್ಪ, ಸಿರವಾರ ತಾಲ್ಲೂಕು ಅಧ್ಯಕ್ಷರು ರವಿರಾಜ್, ಮೂಲ್ಕಿ ತಾಲ್ಲೂಕು ಅಧ್ಯಕ್ಷರು ಕುಮಾರ್ ಶೆಟ್ಟಿಗಾರ್, ಮಸ್ಕಿ ಕಾರ್ಯದರ್ಶಿ ಶಿವಕುಮಾರ್ ಚವಾಣ್ ಹಾಗೂ ಇನ್ನಿತರ ಪದಾಧಿಕಾರಿಗಳು, ಕಾರ್ಮಿಕರು ಸೇರಿದರು

Post a Comment

0Comments

Post a Comment (0)