ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತೋತ್ಸ.

Udayavani News
0
ದೊಡ್ಡ ಚಾಪಿತಾಂಡ  : ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ   ದೊಡ್ಡ ಚಾಪಿತಾಂಡದಲ್ಲಿ  ಇಂದು ಬಂಜಾರ ಸಮುದಾಯದವರ ಏಳಿಗೆಗಾಗಿ ತಮ್ಮ ಇಡೀ ಜೀವನವನ್ನೇ ಮೀಸಲಿಟ್ಟಿದ್ದ ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತೋತ್ಸವದಂದು ಅವರಿಗೆ ಗೌರವಪೂರ್ವಕ ನಮನಗಳು ಸಲ್ಲುತ್ತದೆ.
18 ನೇ ಶತಮಾನದಲ್ಲಿ ಬಂಜಾರ ಸಮುದಾಯವನ್ನು ಸಂಘಟಿಸಿ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ವರೂಪ ನೀಡಿ ಶ್ರಮಿಸಿದ ಸೇವಾಲಾಲರ ತತ್ವಾದರ್ಶಗಳು ನಮ್ಮೆಲ್ಲರಿಗೆ ಮಾದರಿಯಾಗಿವೆ. ಹಾಗೂ ಭರತ ಖಂಡದ ಧಾರ್ಮಿಕ ರಾಯಭಾರಿ ಎಂದು ಹೆಸರಾದ ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ - ಗೆದ್ದವರು. ತಮ್ಮ ಲೀಲೆಗಳ ಪ್ರದರ್ಶನ ಮಾಡುತ್ತಾ ಜಗದಂಬೆಯ ಆರಾಧಕರಾಗಿ ಇಡೀ ಜೀವನಮಾನದ ಜೊತೆಗೆ ಬ್ರಹ್ಮಚರ್ಯವನ್ನೇ ಪಾಲನೆ ಮಾಡಿದ ಸಂತ ಸೇವಾಲಾಲ್ವಿನ ಜನ ಮಾನಸಿನಲ್ಲಿ ಗುರು ಸ್ಥಾನವನ್ನು ಪಡೆದಿದ್ದಾರೆ.
ಈತಃ ಮಹಾನ ಸಂತರ ದಿನವನ್ನು ಇಂದು ಆಚರಿಸುವುದು ಬಹಳ ಸಂತೋಷದಾಯಕ ಎಂದು ಗುರು - ಹಿರಿಯರು ಮನದಾಳದ ಮಾತನು ಹೇಳಿದರು 

ಪುಟ್ಟ ಪುಟ್ಟ ಪುಟಾಣಿಗಳು ಬಂಜಾರ ಸಮಾಜದ ಉಡುಪುಗಳನ್ನು ಧರಿಸಿ ಮೆರವಣಿಗೆಯ ಮೆರಗು ತಂದರು 

Post a Comment

0Comments

Post a Comment (0)