ಲಿಂಗಸುಗೂರ ಉದ್ಯೋಗ ಖಾತ್ರಿ ಅನುದಾನ ದುರ್ಬಳಕೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ನಾಗರತ್ನ, ಕೃಷಿ ಅಧಿಕಾರಿ ಸಿದ್ದಪ್ಪ ಸಸ್ಪೆಂಡ್

Udayavani News
0
ಲಿಂಗಸುಗೂರ ಉದ್ಯೋಗ ಖಾತ್ರಿ ಅನುದಾನ ದುರ್ಬಳಕೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ನಾಗರತ್ನ, ಕೃಷಿ ಅಧಿಕಾರಿ ಸಿದ್ದಪ್ಪ ಸಸ್ಪೆಂಡ್
ಲಿಂಗಸುಗೂರ: ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ.ಎಡಿ. ನಾಗರತ್ನ ಎಚ ಹುಲಕೋಟಿ ಹಾಗೂ ಕೃಷಿ ಅಧಿಕಾರಿ ಸಿದ್ದಪ್ಪ ಬಾಚಿಹಾಳ ಅವರನ್ನು ಉದ್ಯೋಗ ಖಾತ್ರಿ ಅನುದಾನ ದುರ್ಬಳಕೆ ಹಿನ್ನಲೆಯಲ್ಲಿ ರಾಯಚೂರು ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿಫಾರಸ್ಸು ಮೇರೆಗೆ ಕರ್ನಾಟಕ ಸರಕಾರದ ಕೃಷಿ ಇಲಾಖೆ ಕಾರ್ಯದರ್ಶಿಗಳು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

 ಲಿಂಗಸುಗೂರ ತಾಲೂಕಿನ ಆನೆಹೋಸೂರ ಹಾಗೂ ಇತರೆ ಗ್ರಾಮ ಪಂಚಾಯತಿಯಲ್ಲಿ 2024-25 ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಇಲಾಖೆಯ ಮುಖೇನ ಅನುಷ್ಠಾನಗೊಂಡ ಕಾಮಗಾರಿಗಳಿಲ್ಲಿ 2.75.7307 ಕೋಟಿ ರೂಗಳ ಅವ್ಯವಹಾರಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರಗಿಸಲು ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ ಲಿಂಗಸುಗೂರ ಅವರು ಕೋರಿದ ಹಿನ್ನಲೆಯಲ್ಲಿ ರಾಯಚೂರು ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಮಟ್ಟದ ವಿವಿಧ ಇಲಾಖೆ 7 ತನಿಖಾ ಅಧಿಕಾರಿಗಳ ತಂಡ ವರದಿ ಹಿನ್ನಲೆಯಲ್ಲಿ ಉದ್ಯೋಗ ಖಾತ್ರಿ ಬದು ನಿರ್ಮಾಣ ಕಾಮಗಾರಿ ಅವ್ಯವಹಾರ ಅನುದಾನ ದುರ್ಬಳಕೆಗೆ ಕಾರಣವಾಗಿದೆ.

 ಎಡಿ ನಾಗರತ್ನ ಹಾಗೂ ಕೃಷಿ ಅಧಿಕಾರಿ ಸಿದ್ದಪ್ಪ ವಿರುದ್ಧ ರಾಯಚೂರು ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸರಕಾರದ ಕೃಷಿ ಇಲಾಖೆ ಕಾರ್ಯದರ್ಶಿಗಳಿಗೆ ಶಿಸ್ತು ಕ್ರಮಕ್ಕೆ ವರದಿ ಸಲ್ಲಿಸಿದ್ದಾರೆ. ಅದರಂತೆ ಉದ್ಯೋಗ ಖಾತ್ರಿ ಅನುದಾನ ದುರ್ಬಳಕೆ ದೃಢಪಟ್ಟಿದ್ದು, ಕೃಷಿ ಇಲಾಖೆ ಆಯುಕ್ತರು ಬೆಂಗಳೂರು ಇವರು ಕೃಷಿ ಸಹಾಯಕ ನಿರ್ದೇಶಕಿ ನಾಗರತ್ನ ಹಾಗೂ ಕೃಷಿ ಅಧಿಕಾರಿ ಸಿದ್ದಪ್ಪ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿರುವರು. 

ರಾಯಚೂರು ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ವಿಧಾನ ಪರಿಷತ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಕೃಷಿ ಆಯುಕ್ತರಿಗೆ ಪತ್ರ ಬರೆದು ಲಿಂಗಸುಗೂರಿನ ಕೃಷಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸೇ ಮಾಡಿದರು.

ಜಿಲ್ಲಾ ವರದಿಗಾರ : ಶಿವು ರಾಠೋಡ. ರಾಯಚೂರು

Post a Comment

0Comments

Post a Comment (0)