ಹುಣಸಗಿ: ಹರಿ ಸ್ಮರಣೆಯಿಂದ ಮಾತ್ರ ಮೋಕ್ಷ ಸಾಧ್ಯ ಎಂದು ನಿರೂಪಿಸಿಕೊಟ್ಟ ಮಹಾನ್ ಆಚಾರ್ಯರು ಎಂದು ವಿಪ್ರ ಸಮಾಜದ ಹಿರಿಯರಾದ ಮನೋಹರರಾವ್ ದ್ಯಾಮನಹಾಳ ಹೇಳಿದರು.
ಹುಣಸಗಿ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಧ್ವ ನವಮಿ ಉತ್ಸವದಲ್ಲಿ ಭಾಗವಹಿಸಿ ಮಧ್ವಾಚಾರ್ಯರ ಚರಿತ್ರೆ ಬಗ್ಗೆ ತಿಳಿಸಿದರು.
ಆಚಾರ್ಯ ಮಧ್ವರು ಪಾಜಕ ಕ್ಷೇತ್ರದಲ್ಲಿ ಜನಿಸಿದರು. ಅವರ ಮಹಿಮೆ ತಪಃ ಶಕ್ತಿ ಅಪಾರವಾದುದು. ಶ್ರೀ ಮದ್ ಆನಂದತೀರ್ಥರು, ಪೂರ್ಣ ಪ್ರಜ್ಞರು ಎಂದು ಪ್ರಸಿದ್ಧಿಯನ್ನು ಪಡೆದು ಉಡುಪಿಯಲ್ಲಿ ಶ್ರೀ ಕೃಷ್ಣನ್ನು ಪ್ರತಿಷ್ಟಾಪಿಸಿ ಅಷ್ಟಮಠಗಳಿಗೆ ಕೃಷ್ಣ ಪೂಜಾ ಕೈಂಕರ್ಯವನ್ನು ನೀಡಿದರು. ಆ ಮೂಲಕ ಹರಿ ಸ್ಮರಣೆ ಹಾಗೂ ಧೈತ ಮತ ತತ್ವ ಪ್ರಚಾರಕ್ಕೆ ಆದ್ಯತೆ ನೀಡಿದರು.
ದೇಶದೆಲ್ಲೆಡೆ ಸಂಚರಿಸಿ ತತ್ವ ಸಿದ್ಧಾಂತವನ್ನು ಪ್ರಚಾರ ಮಾಡಿದರು. ಅಲ್ಲದೇ ಇವರು ರಚಿಸಿದ ಗ್ರಂಥಗಳನ್ನು ಸರ್ವಮೂಲ ಗ್ರಂಥಗಳು ಎಂದು ಕರೆಯಲಾಗುತ್ತದೆ ಎಂದು ಮಧ್ವ ಸಿದ್ಧಾಂತದ ಕುರಿತು ಮಾತನಾಡಿದರು.
ಬೆಳಿಗ್ಗೆ ಮಧ್ವನಾಮ, ವಾಯುಸ್ತುತಿ, ಮುನ್ಯುಸೂಕ್ತ ಪುನಃಶ್ಚರಣ, ಸುಮಧ್ವವಿಜಯ 16 ಸ್ವರ್ಗ ಪಾರಾಯಣ, ಪಂಚಾಮೃತ ಅಭಿಶೇಕ ಮಾಡಲಾಯಿತು.
ಬಳಿಕ ಮಧ್ವಾಚಾರ್ಯರ ಭಾವಚಿತ್ರವನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಪುರಪ್ರದಕ್ಷಿಣೆ ಮೆರವಣಿಗೆ ನಡೆಯಿತು.
ವೇದವತಿ ಮಹಿಳಾ ಭಜನಾ ಮಂಡಳಿ ಹಾಗೂ ಛಾಯಾಭಗವತಿ ಭಜನಾ ಮಂಡಳಿಯಿಂದ ಸಾಮೂಹಿಕ ಭಜನೆ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ಪಟ್ಟಣದ ವರಹಳ್ಳೇರಾಯ ದೇವಸ್ಥಾನದಲ್ಲಿ ಮಧ್ವ ನಾಮ ಪಠಣ, ವಾಯುಸ್ತುತಿ ಪಠಣ, ಪಂಚಾಮೃತ ಅಭಿಶೇಕ, ನೆಡೆಯಿತು
ಈ ಸಂದರ್ಭದಲ್ಲಿ ಪ್ರಲ್ಲಾದಾಚಾರ್ಯ ಜೋಶಿ, ವಿಜಯಾಚಾರ್ಯ ಕಕ್ಕೇರಾ, ವೆಂಕಟೇಶ ಆಚಾರ್ಯ ಅರಳಿಗಿಡದ, ಗಂಗಾಧರ ಜೋಶಿ, ಚಂದ್ರಕಾಂತ ದೇಶಪಾಂಡೆ, ರವಿಂದ್ರ ಜಮದರಖಾನಿ, ರಾಘವೇಂದ್ರ ಕಾಮನಟಗಿ, ಮೋಹನರಾವ್ ಕುಲಕರ್ಣಿ, ವಿಷ್ಣುವರ್ಧನ ಕುಲಕರ್ಣಿ, ಲಕ್ಷ್ಮೀಕಾಂತ ಜಮದರಖಾನಿ, ವೆಂಕಟೇಶ ದೇಶಪಾಂಡೆ, ಪ್ರಾಣೇಶ ಕುಲಕರ್ಣಿ, ಕೃಷ್ಣಾ ದೇಶಪಾಂಡೆ, ಶ್ರೀಹರಿ ಕುಲಕರ್ಣಿ, ಭೀಮಾಶಂಕರ ಕುಲಕರ್ಣಿ, ವಾಸು ದ್ಯಾಮನಹಾಳ, ಶಾಮಸುಂದರ ದೇಶಪಾಂಡೆ, ಪ್ರಾಣೇಶ ದೇಶಪಾಂಡೆ, ಶ್ರೀನಿವಾಸ ಕುಲಕರ್ಣಿ ಸೇರಿದಂತೆ ಇತರರು ಇದ್ದರು.
ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ