ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಕೆಳಗೆ ಸಹಿ ಮಾಡಿರುವ ನಾನು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಮ್ಮ ತಂಡ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ಫಾರ್ಮಸಿಸ್ಟ್ ಅಧಿಕಾರ ಅಂದೋಲನವನ್ನು ನಡೆಸುತ್ತಿದ್ದು, ಈ ಅಂದೋಲನದಲ್ಲಿ ಪ್ರತಿಯೊಬ್ಬರೂ ರಿಜಿಸ್ಟರ್ ಫಾರ್ಮಸಿಸ್ಟ್ ರವರು ಭಾಗಿಯಾಗುತ್ತಿದ್ದಾರೆ, ಇದರ ಜೊತೆಗೆ ಫಾರ್ಮಸಿಸ್ಟ್ ಪರವಾನಗಿಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದರೆ ಅಥವಾ ಪಾರ್ಮಸಿಯಲ್ಲಿ ಅವರು ಹರಿಶೀಲನೆ ಬೇರೆ ಇಲ್ಲವಾದಲ್ಲಿ ಇದರ ಜೊತೆಗೆ ಬೇರೆಯವರ ಅವರ ಪರವಾನಗಿಯ ಮೇಲೆ ಪ್ರಾಕ್ಟಿಸ್ಟ್ ಮಾಡುತ್ತಿದ್ದರೆ ಫಾರ್ಮಸಿ ಆಕ್ಟ್ 1948 ಮತ್ತು ಫಾರ್ಮಸಿ ಪ್ರಾಕ್ಟಿಸ್ ರೆಗ್ಯುಲೇಶನ್ 2015 ಉಲ್ಲಂಘನೆ ಮಾಡುತ್ತಿರುವುದು ಕಂಡು ಬಂದರೆ ನಾವು ತಕ್ಷಣ ಫಾರ್ಮ ಕೌನಿಲ್ ಇದರ ಮಾಹಿತಿಯನ್ನು ನೀಡುತ್ತೇವೆ, ತಾವು ಇವರ ವಿರದ್ಧ ಸೂಕ್ತ ಕಾನೂನು ಕ್ರಮ ತೆಗೆದಕೊಳ್ಳಲು ಕೋರಿ ಮನವಿ ಮಾಡುತ್ತಿದ್ದು, ನಾವು ರಾಜ್ಯದಲ್ಲಿ ಕರ್ನಾಟಕ ಫಾರ್ಮ ಅಸೋಸಿಯೇಷನ್ ಡಿ-ಫಾರ್ಮ್ ಓದಿರುವಂತಹ ಯುವಕರಿಗೆ ಫಾರ್ಮಸಿಸ್ಟ್ ಉದ್ಯೋಗವಾಗಿದ್ದು, ಇದನ್ನು ಉಳಿಸಬೇಕು ರಿಜಿಸ್ಟರ್ಸ್ ಫಾರ್ಮಸಿಸ್ಟ್ ಅವರ ಹಕ್ಕನ್ನು ಅವರಿಗೆ ಒದಗಿಸಿಕೊಟ್ಟು, ಅವರಿಗೂ ನ್ಯಾಯಯುತವಾಗಿ ಜೀವನ ನಡೆಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತಿದ್ದು, ಆದಾಗಿ ಒಂದು ಫಾರ್ಮಸಿ ನಿರ್ಮಿಸಬೇಕೆಂದರೆ ಡ್ರಗ್ಸ್ ಅಂಡ್ ಕಾಸ್ಕೆಟಿಕ್ಸ್ ಆಕ್ಟ್ 1940 ಮತ್ತು ರೂಲ್ 1945ರ ಪ್ರಕಾರ ನಿಯಮಗಳನ್ನು ಪಾಲಿಸಬೇಕಾಗಿರುತ್ತದೆ. ಇದರ ಜೊತೆಗೆ ಫಾರ್ಮ ಕೌನ್ಸಿಲ್ ಆಫ್ ಇಂಡಿಯಾ (ಫಾರ್ಮಸಿ ಆಕ್ಸ್ 1948) ಇದರ ಪ್ರಕಾರ ಪರವಾನಗಿಯನ್ನು ಬಾಡಿಗೆಗೆ ಪಡೆದುಕೊಂಡಿದ್ದಲ್ಲಿ, ಅದು ಕಾನೂನು ಬಾಹಿರವಾಗಿರುತ್ತದೆ. ಈ ಆದೇಶವನ್ನು ಫಾರ್ಮ ಕೌನ್ಸಿಲ್ ಆಫ್ ಇಂಡಿಯಾ ಆದೇಶವನ್ನು ಹೊರಡಿಸಿದ್ದು, ಆದಾಗಿ ಯಾರಾರು ಪರವಾನಗಿಯನ್ನು ಪಡೆದಿರುತ್ತಾರೋ ಅವರೇ ಫಾರ್ಮಸಿ ನಡೆಸಬೇಕಾಗಿರುತ್ತದೆ. ಆದಾಗಿ ಫಾರ್ಮಸಿಯಲ್ಲಿ ಯಾವುದೇ ರೀತಿಯ ಡಿ ಫಾರ್ಮ ವಿದ್ಯಾರ್ಥಿಗಳನ್ನು ಬಿಟ್ಟು, ಬೇರೆಯವರಿಗೆ ಪ್ರಾಕ್ಟಿಸ್‌ನ್ನು ಮಾಡಿಸುವಂತಿಲ್ಲ. ಏಕೆಂದರೆ ಅದು ಜನರ ಜೀವದ ಪ್ರಶ್ನೆಯಾಗಿರುತ್ತದೆ. ಆದ್ದರಿಂದ ಎಲ್ಲಾ ಫಾರ್ಮಸಿಯಲ್ಲಿ ಡಿ ಫಾರ್ಮ ಮಾಡಿರುವಂತಹ ಕ್ಯಾಲಿಫೈಡ್ ಫಾರ್ಮಸಿಸ್ಟ್ ಇರಬೇಕಾಗಿರುತ್ತದೆ. ಇದರ ಜೊತೆಗೆ ಫಾರ್ಮಸಿ ಪ್ರಾಕ್ಟಿಸ್ ರೆಗ್ಯುಲೇಷನ್ 2015 ಮತ್ತು ಫಾರ್ಮಸಿ ಪ್ರಾಕ್ಸಿಸ್ (ಅಮಿಡ್ ಮೆಂಟ್) ರೆಗೊಲೇಶನ್ 2021 ಪ್ರಕಾರ ಈ ರೀತಿಯಾಗಿ ಇರುವ ನಿಯಮವನ್ನು ಬಿಟ್ಟು, ಕಾನೂನು ಬಾಹಿರವಾಗಿ ಪ್ರಾಕ್ಟಿಸ್ ಮಾಡುವಂತಿಲ್ಲ. ಇದರ ಜೊತೆಗೆ ಡಿಪ್ಲೋಮಾ ಇನ್ ಫಾರ್ಮಸಿ ಎಕ್ಸಿಟ್ ಎಕ್ಸಾಮಿನೇಶನ್ ರೆಗ್ಯುಲೇಶನ್ 2022 ರ ಪ್ರಕಾರ ಡಿ ಫಾರ್ಮ ಮಾಡಿರುವಂತಹ ವಿದ್ಯಾರ್ಥಿಗಳನ್ನು ಬಿಟ್ಟು, ಬೇರೆ ಯಾರಿಗೂ ಕೂಡ ಪ್ರಾಕ್ಟಿಸ್ ಮಾಡಲು ಅನುಮತಿಯನ್ನು ನೀಡಿರುವುದಿಲ್ಲ. ಇಂತಹ ಪಾರ್ಮಸಿಗಳು ಗಮನಕ್ಕೆ ಬಂದರೆ ಅಥವಾ ಪಾರ್ಮಸಿಯಲ್ಲಿ ಅವರು ಪರಿಶೀಲನೆ ವೇಳೆ ಇಲ್ಲವಾದಲ್ಲಿ ಇದರ ಜೊತೆಗೆ ಬೇರೆಯವರ ಅವರ ಪರವಾನಗಿಯ ಮೇಲೆ ಪ್ರಾಕ್ಟಿಸ್ಟ್ ಮಾಡುತ್ತಿದ್ದರೆ ಫಾರ್ಮಸಿ ಆಕ್ಟ್ 1948 ಮತ್ತು ಫಾರ್ಮಸಿ ಪ್ರಾಕ್ಟಿಸ್ ರೆಗ್ಯುಲೇಶನ್ 2015 ಉಲ್ಲಂಘನೆ ಮಾಡುತ್ತಿರುವುದು ಕಂಡು ಬಂದರೆ ನಾವು ತಕ್ಷಣ ಫಾರ್ಮ ಕೌನ್ಸಿಲ್‌ಗೆ ಇದರ ಮಾಹಿತಿಯನ್ನು ನೀಡುತ್ತೇವೆ. ಆದ್ದರಿಂದ ದಯವಿಟ್ಟು ಮೇಲೆ ತಿಳಿಸಿರುವ ಎಲ್ಲಾ ವಿಷಯಗಳನ್ನು ಗಮನಿಸಿ, ಅವರುಗಳ ಮೇಲೆ ಸೂಕ್ತವಾದ ಕಾನೂನು ರೀತಿಯ ಕ್ರಮವನ್ನು ತೆಗೆದುಕೊಂಡು ಕೂಡಲೇ ಅವರ ಫಾರ್ಮಸಿಸ್ಟ್ ರವರ ಪರವಾನಗಿಯನ್ನು ತೆರವುಗೊಳಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕಳಕಳಿಯಿಂದ ಮವಿಯನ್ನು ಮಾಡಿಕೊಳ್ಳುತ್ತಿದ್ದೇವೆ..
ಕರ್ನಾಟಕ ಫಾರ್ಮ ಅಸೋಸಿಯೇಷನ್ ಅಧ್ಯಕ್ಷರಾದ ಸಿ ಎಂ ಶಹಬಾಜ್ ಖಾನ್ ಫಾರ್ಮಸಿಸ್ ಅಧಿಕಾರ ಅದೋಲನ ಬಗ್ಗೆ ಕರ್ನಾಟಕ ರಾಜ್ಯ ಫಾರ್ಮಸಿ ಕೌನ್ಸಿಲ್ ಗೆ ಮನವಿ.
February 05, 2025
0
Tags