ನಾಗಬೇನಾಳ ತಾಂಡ : ಶುಕ್ರವಾರದಂದು ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯ ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ ಮುದ್ದೇಬಿಹಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಾಗಬೇನಾಳ ತಾಂಡ ಇವರ ಸಹಯೋಗದಲ್ಲಿ ಸಮಗ್ರ ಶಿಕ್ಷಣ ಇಲಾಖೆಯ ಶಾಲಾ ಪೋಷಕರ ಸಭೆ ನಡೆಸಲಾಯಿತು.
ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕರಾದ ಚಿದಾನಂದ ಕೋಳ್ಳಾರಿ ಇವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪಾಲಕರಿಗೆ ಸರಕಾರದ ಜೊತೆ ಕೈ ಸೇರಿಸಿ ಕೈಲಾದ ದಾನ ಮಾಡಿ ಅಭಿವೃದ್ಧಿ ಮಾಡುವುದು ಪಾಲಕರಿಂದ ಆದಾಗ ಮಾತ್ರ ಶಾಲಾ ಅಭಿವೃದ್ಧಿ ಕಾಣಲು ಸಾಧ್ಯ ಎಲ್ಲೋ ಮೂಲೆಯಲ್ಲಿರುವ ನಾಗಬೇನಾಳ ತಾಂಡಾ ಶಾಲೆ ಸಂಪನ್ಮೂಲ ಶಿಕ್ಷಕರ ಗುಣಮಟ್ಟದ ಕಲಿಕೆಯಿಂದ ಜಿಲ್ಲೆ ಮತ್ತು ರಾಜ್ಯ ಗುರುತಿಸುವಂತೆ ಮಾಡಿದೆ ಶಿಕ್ಷಕರ ಜೊತೆಗೂಡಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ಬಹುಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶಿವಾನಂದ ನಾಯಕ್ ಶಿಕ್ಷಣ ಪ್ರೇಮಿ ಮತ್ತು ಬಂಜಾರ ಸಮುದಾಯದ ಅಧ್ಯಕ್ಷರಾದ ಆನಂದ. ಟಿ. ನಾಯಕ್ ಗ್ರಾಮ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶಂಕ್ರಮ್ಮ ಕುಂಟೋಜಿ, ಹಿರಿಯರಾದ ಸೋಮಪ್ಪ ನಾಯಕ್, ಕೃಷ್ಣಪ್ಪ ರಾಥೋಡ್ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಟಿ. ಎಂ. ಕೋಲ್ಕಾರ್, ಮುಖ್ಯ ಗುರು ಮಾತೆ ಶ್ರೀಮತಿ ಎಸ್ ಎ ಗಂಗನಗೌಡರ್ ಉಪಸ್ಥಿತರಿದ್ದರು.
ಪವಿತ್ರ ಹಾಗೂ ಸಂಗಡಿಗರಿಂದ ಪ್ರಾರ್ಥನೆ ಮಾಡಲಾಯಿತು. ವೀರೇಶ್ ನವಲಿ ಶಿಕ್ಷಕರು ಸ್ವಾಗತಿಸಿದರು. ಶ್ರೀಮತಿ ಪ್ರಿಯಾ ಯರನಾಳ ಗುರುಮಾತೆಯರು ಪ್ರಾಸ್ತಾವಿಕ ನುಡಿ ಹೇಳಿದರು , ಅಕ್ಕಮಹಾದೇವಿ ಉಪನಾಳ ಗುರುಮಾತೆಯರು ವಂದಿಸಿದರು. ಪಾಲಕರ ಸಭೆಯಲ್ಲಿ ಸುಮಾರು 30 ಹೆಚ್ಚು ಪಾಲಕರು ಪಾಲ್ಗೊಂಡು ಶಿಕ್ಷಣ ಅಭಿವೃದ್ಧಿ ಬಗ್ಗೆ ಚರ್ಚಿಸಿದರು....
ವರದಿಗಾರರು : ಶಿವು ರಾಠೋಡ ಮುದ್ದೇಬಿಹಾಳ