ತಾಂಡದಲ್ಲಿ ನೂತನ ತರಕಾರಿ ಮಾರುಕಟ್ಟೆ ಉದ್ಘಾಟಿಸಿದ : ಪಿ.ಎಸ್.ಐ. ರಾಜಶೇಖರ ರಾಠೋಡ

Udayavani News
0


ಮಾರನಾಳ ತಾಂಡ. ಜ.04: (ಮಾರನಾಳ ತಾಂಡಾ) ರಾಮರಾವ್ ನಗರ  ಕ್ರಾಸ್ ಬಳಿ  ತರಕಾರಿ ಮಾರುಕಟ್ಟೆ  ಉದ್ಘಾಟನೆಯನ್ನು ನಾರಾಯಣಪುರ ಪಿಎಸ್ಐ ರಾಜಶೇಖರ್ ರಾಠೋಡ ನೆರವೇರಿಸಿದರು.

  ಸುಸಜ್ಜಿತ ಮತ್ತು ಸುವ್ಯವಸ್ಥಿತ ಮಾರುಕಟ್ಟೆ (Market) ಇದಾಗಿದೆ. ಈ ಮಾರುಕಟ್ಟೆಯಿಂದ ದಶಕಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವರಿಗೆ ಹಾಗೂ  ಮಾರಾಟಗಾರರಿಗೆ ಬಹಳ  ಅನುಕೂಲವಾಗಲಿದೆ. 

ವ್ಯವಸ್ಥಿತವಾಗಿ  ಮಾರುಕಟ್ಟೆ ಇಲ್ಲದೆ ರೈತರು ಮತ್ತು ಮಾರಾಟಗಾರರು, ತರಕಾರಿ, ಹಣ್ಣು, ಹೂವುಗಳನ್ನು  ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಇದಾನ ನಾವು ಸದುವಯೋಗ ಪಡೆದುಕೊಳ್ಳೋಣಾ ಎಂದು ತಿಳಿಸಿದರು.

 (ಮಾರನಾಳ ತಾಂಡಾ) ರಾಮರಾವ್ ನಗರ  ಕ್ರಾಸ್ ಬಳಿ  ಸಿದ್ದವಾಗುತ್ತಿದೆ  ತರಕಾರಿ ಮಾರುಕಟ್ಟೆ;   ನಾರಾಯಣಪುರ  ಮತ್ತು ಕೊಡೇಕಲ್  ನಡುವೆ, ನಾರಾಯಣಪುರ ಗ್ರಾಮದಿಂದ ಸುಮಾರು 7 ಕಿ.ಮೀ. ದೂರದಲ್ಲಿದೆ. ಹೊಸ ಮಾರುಕಟ್ಟೆಯು (ಮಾರನಾಳ ತಾಂಡಾ) ರಾಮರಾವ್ ನಗರ  ಕ್ರಾಸ್ ಬಳಿ ನಿರ್ಮಿಸಲಾಗಿದೆ.  ಇದರಿಂದ ಮಾರನಾಳ, ಯರಕಿಹಾಳ, ಮಾವಿನಗಿಡ್ ತಾಂಡಾ, ಜೋಕಾಂಡಭಾವಿ , ಗಡ್ಡದ ತಾಂಡಾ, ಬರದೇವನಾಳ , ರಾಯನಗೋಳ, ಜುಮಾಲಪುರ್ ದೊಡ್ಡ ತಾಂಡಾ, ಬೆಲ್ಲದಗಿಡ ತಾಂಡಾ,  ಹಾಗೂ ಸುತ್ತಮುತ್ತಲಿನ ಗ್ರಾಮ  ನಿವಾಸಿಗಳಿಗೆ ಅನುಕೂಲವಾಗಲಿದೆ.
ಮಾರುಕಟ್ಟೆಯಲ್ಲಿನ ಹೈಟೆಕ್ ಸೌಲಭ್ಯಗಳು ಇಲ್ಲದಿದ್ದರೂ ಸಹ  ಹವಾಮಾನ ಪರಿಸ್ಥಿತಿಗಳಲ್ಲೂ ಯಾವುದೇ ತೊಂದರೆಯಿಲ್ಲದೆ. ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳನ್ನು ಮಾರಾಟ ಮಾಡಬಹುದಾಗಿದೆ. ಗ್ರಾಮದ ಮಾರುಕಟ್ಟೆಯ ಸುತ್ತಲಿನ ಸಂಚಾರ ದಟ್ಟಣೆಯಿಂದ ಪ್ರಯಾಣಿಕರು ಮತ್ತು ಪಾದಚಾರಿಗಳು ಕಿರಿಕಿರಿ ಅನುಭವಿಸುತ್ತಾರೆ. ಸದ್ಯ ಮಾರನಾಳ ತಾಂಡದ ರಾಮರಾವ್ ನಗರ  ಕ್ರಾಸ್ ಬಳಿ ನಿರ್ಮಿಸಲಾದ  ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವ 100ಕ್ಕೂ ಹೆಚ್ಚು ಮಾರಾಟಗಾರರು ಹೊಸ ಮಾರುಕಟ್ಟೆಗೆ ಬಂದಿದರು ಸಂತೋಷ ತರತಕ್ಕದು ಎಂದು ಮಾರಾಟಗಾರರು ಹರ್ಷ ವ್ಯಕ್ತಪಡಿಸಿದರು.

ಇದೆ ಸಂದರ್ಭದಲ್ಲಿ  ನಾರಾಯಣಪುರ ಪಿ.ಎಸ್.ಐ. ರಾಜಶೇಖರ್ ರಾಠೋಡ್,  ಬರದನಾಳ  ಪಿ.ಡಿ.ಓ ಪ್ರೀಮಾ ರಾಠೋಡ್ , ಚಂದು ಹರಾವತ, ಸೀತಾಬಾಯಿ ಪವಾರ, ಶೇಖರ್ ನಾಯಕ್ , ಕೃಷ್ಣ್ ಜಾದವ . ಬಾಬು ಚವಾಣ್ . ಹರಿಕೃಷ್ಣ್  ಮೂಡ್ ,   ವಿನೋದ ಪವಾರ , ಜೈರಾಮ್ ರಾಠೋಡ,   ತಿರುಪತಿ ಚವಾಣ್ , ಹಾಗೂ ಗೋರ್ ಸೇನಾ ಗೋರ್ ಸಿಕವಾಡಿಯ ಹಲವಾರು ಪದಾಧಿಕಾರಿಗಳು. ಮತ್ತು ಗುರು ಹಿರಿಯರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು : ಶಿವು ರಾಠೋಡ ಯಾದಗಿರಿ

Post a Comment

0Comments

Post a Comment (0)