2024 - 25 ನೇ ಸಾಲಿನಲ್ಲಿ ನಮ್ಮ ಮಕ್ಕಳ ಭವಿಷ್ಯ ಉನ್ನತ ವಿದ್ಯೆ ಹಾಗೆ ಉನ್ನತ ಸ್ಥಾನದಲ್ಲಿ ಪ್ರಜ್ವಲಿಸಲಿ ಎಂದು ಸುರಪುರ ಶಾಸಕರು ರಾಜಾ ವೇಣುಗೋಪಾಲ ನಾಯಕ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಸಂತಸ ವ್ಯಕ್ತಪಡಿಸಿದರು. ಹಾಗೆ ಸಂತ ಸೇವಾಲಾಲ್ ಭವನವನ್ನು ಉದ್ಘಾಟನೆಯನ್ನು ಸಹ ಮಾಡಿದರು.
ಇದೇ ಸಂದರ್ಭದಲ್ಲಿ ಸರ್ಕಾರದ 5 ಗ್ಯಾರಂಟಿಗಳ ಬಗ್ಗೆ ನಮ್ಮ ಸರ್ಕಾರ ಯಾವ ರೀತಿ ಮಾತು ಕೊಟ್ಟಿತ್ತು ಅದೇ ರೀತಿಯಲ್ಲಿ ನಾವು ಸರ್ಕಾರವನ್ನು ನಡೆಸುತ್ತಿದ್ದೇವೆ. ಅದರ ಜೊತೆಯಲ್ಲಿ ಸುರುಪುರು ತಾಲೂಕು ಮತ್ತು ಹುಣಸಗಿ ತಾಲೂಕಿನಲ್ಲಿ ಈ 5 ಗ್ಯಾರಂಟಿಗಳ ಸದುಪಯೋಗ ಪಡೆದುಕೊಳ್ಳಿ ಎಂದು ಮತದಾರರಿಗೆ ತಿಳಿಸಿದರು..
ಇದೇ ಸಂದರ್ಭದಲ್ಲಿ ಸುರುಪೂರ ಶಾಸಕರಾದ ರಾಜಾ ವೇಣುಗೋಪಾಲ್ ನಾಯಕ, ನಿಂಗರಾಜ್ ಬಾಚಿಮಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸುರಪುರ, ಚಂದ್ರಶೇಖರ್ ದಂಡಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹುಣಸಗಿ, ಹುಣಸಗಿಯ , ಮಲ್ಲಣ್ಣ ಸೌಕಾರ್ ಹಿರಿಯ ಕಾಂಗ್ರೆಸ್ ಮುಖಂಡರು ಚೆನ್ನಯ್ಯಸ್ವಾಮಿ ತಿಮ್ಮಣ್ಣ ಮಿಂಚೇರಿ ಎಲ್ಲಪ್ಪ ಗೌಡ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾರನಾಳ ತಾಂಡ, ಮುಖ್ಯ ಗುರುಗಳು, ಸಿಪಿಐ ಸಚಿನ್ ಚಲವಾದಿ, ಹುಣಸಗಿ ಪಿಎಸ್ಐ ಚಂದ್ರಶೇಖರ್ ಎಸ್, ಕೊಡೆಕಲ್ ಪಿಎಸ್ಐ ಅಯ್ಯಪ್ಪ ನಾರಾಯಣಪುರ ಪಿಎಸ್ಐ ರಾಜಶೇಖರ ರಾಠೋಡ , ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಮತ್ತು ಮಾರನಾಳ ತಾಂಡದ ಗುರು ಹಿರಿಯರು ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗರರು : ಶಿವು ರಾಠೋಡ ಯಾದಗಿರಿ