ಮೃತ ಕಾರ್ಮಿಕನ ಕುಟುಂಬದ ನೆರವಿಗೆ ನಿಂತ ಅಶ್ವಥ್ ಮರೀಗೌಡ್ರು

Udayavani News
0
ಬೆಂಗಳೂರಿನ ಸರ್ಜಾಪುರ ರಸ್ತೆಯ ವರ್ತೂರಿನ ಕಂಪನಿಯಲ್ಲಿ ರಾತ್ರಿ ಸಮಯದಲ್ಲಿ ಗದಗ ಜಿಲ್ಲೆಯ ಕಾರ್ಮಿಕ ಸಹಜ ಮರಣವನ್ನು ಹೊಂದಿದ್ದು ನೆರವು ಕಟ್ಟಡ ಕಾರ್ಮಿಕ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾದ ಅಶ್ವಥ್ ಮರಿಗೌಡ್ರು ಮತ್ತು ಗದಗ ಜಿಲ್ಲೆಯ ಶ್ರೀ ಸಿದ್ದರಾಮೇಶ್ವರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಬಸವರಾಜ ವಡ್ಡರ್ ರವರು ಸಂಸ್ಥೆಯ ಗುತ್ತಿಗೆದಾರರಿಂದ ಮೃತರ ಕುಟುಂಬದವರಿಗೆ ಮೂರು ಲಕ್ಷ ಪರಿಹಾರವನ್ನು ಕೊಡಿಸಲಾಯಿತು.

ಇದೇ ಸಂಧರ್ಭದಲ್ಲಿ ದೇವರು ಮೃತರ ಕುಟುಂಬದವರಿಗೆ ದುಃಖವನ್ನು ತಡೆಯುವಂತಹ ಶಕ್ತಿಯನ್ನು ನೀಡಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುವುದರೊಂದಿಗೆ ಮೃತರ ಕುಟುಂಬದವರ ಜೊತೆಗೂಡಿ ಸಂತಾಪ ಸೂಚಿಸಿದರು.

ವರದಿ : ಶಿವು ರಾಠೋಡ 

Post a Comment

0Comments

Post a Comment (0)