ಪತ್ರಕರ್ತರ ಉಳಿವಿಗಾಗಿ ಹಾಗೂ ಹಕ್ಕಿಗಾಗಿ ರಾಜ್ಯದ ಎಲ್ಲಾ ಪತ್ರಕರ್ತರು ಒಗ್ಗಟ್ಟಾಗಿ ಬೆಳಗಾವಿ ಚಲೋ...!

Udayavani News
0

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಹರಪನಹಳ್ಳಿ, ಡಿಸೆಂಬರ್ 17 : ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ಆರ್ಥಿಕ ಸಂಕಷ್ಟದಲ್ಲಿರುವ ಜಿಲ್ಲಾ ತಾಲ್ಲೂಕು, ಹಾಗೂ ಹೋಬಳಿ ಮಟ್ಟದಲ್ಲಿ ಹಗಲಿರುಳು ಶ್ರಮಿಸುವ ರಾಜ್ಯದ 16000 ನೊಂದಂತಹ ಪತ್ರಕರ್ತರ ಧ್ವನಿಯಾಗಿ ಇದೇ ತಿಂಗಳ 19ರಿಂದ ಪ್ರಾರಂಭವಾಗುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಪತ್ರಕರ್ತರ ವಿವಿಧ ಬೇಡಿಕೆಗಳಿಗಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನರವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಧರಣಿ ಪ್ರತಿಭಟನೆಯ ಹೋರಾಟಕ್ಕೆ ಬೆಳಗಾವಿ ಚಲೋ...!! ಈ ಬೃಹತ್ ಪ್ರತಿಭ ಟನೆಗೆ ರಾಜ್ಯದ ಪ್ರತಿಯೊಬ್ಬ ಪತ್ರಕರ್ತರು ಭಾಗವಹಿಸುವ ಮುಖಾಂತರ ಬೆಂಬಲಿಸೋಣ ಬನ್ನಿ ಹಾಗೂ ಸರ್ಕಾರಕ್ಕೆ ಧ್ವನಿ ಮುಟ್ಟಿಸೋಣ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಹರಪನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಮಂಜುನಾಥ ಮಾಳ್ಗಿಯವರು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿಕೊಂಡಿದ್ದಾರೆ. 


ಸಂವಿಧಾನದ 4ನೇ ಅಂಗವಾಗಿರುವ ಪತ್ರಿಕಾರಂಗ ಶೇಷ್ಠವಾದುದು. ಪತ್ರಕರ್ತರು ಸರ್ಕಾರ ಮತ್ತು ಸಮಾಜದ ಪ್ರತಿಬಿಂಬ. ಅನೇಕ ಸವಾಲುಗಳ ಮಧ್ಯೆ ಜನರಿಗೆ ಮಾಹಿತಿ ನೀಡುವ ಕಾರ್ಯವನ್ನು ಪತ್ರಕರ್ತರು ಮಾಡುತ್ತಾರೆ. ಪತ್ರಕರ್ತರು ಆಧುನಿಕ ಸಮಾಜದ ಕನ್ನಡಿಯೆಂದೇ ಹೇಳಬಹುದು. ಹಾಗಾಗಿ ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಳಗಾವಿ ಚಲೋ...!! ಹಮ್ಮಿಕೊಳ್ಳಲಾಗಿದೆ ಎಂದರು.

ಬೇಡಿಕೆಗಳು : (1) ಸರ್ಕಾರದ ವಾರ್ತಾ ಇಲಾಖೆಯಿಂದ ಪ್ರತಿಯೊಬ್ಬ ಪತ್ರಕರ್ತರಿಗೆ ಮಾನ್ಯತಾ ಪತ್ರ (ಆಕ್ರಿಡೇಷನ್ ಕಾರ್ಡ್) ನೀಡಬೇಕು. (2) ಆರ್.ಎನ್.ಐ ಹೊಂದಿರುವ ಪ್ರತಿಯೊಂದು ಪತ್ರಿಕೆಗೆ ಜಾಹಿರಾತು ನೀಡಬೇಕು. ಹಾಗೂ ಪತ್ರ ಕರ್ತರಿಗೆ ಬಸ್ ಪಾಸ್ ಸೌಲಭ್ಯ ಕಲ್ಪಿಸಿಕೊಡಬೇಕು. (3) ನಿವೃತ್ತಿಯಾದ ಪತ್ರಕರ್ತರಿಗೆ ಸರ್ಕಾರ 10,000ರೂ ಮಾಶಾಸನದ ಬದಲಾಗಿ 20,000ರೂ/- ಮಾಶಾಸನ ಹೆಚ್ಚಿಸಬೇಕು ಹಾಗೂ ವಾರ, ಪಾಕ್ಷಿಕಾ ಮಾಸ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ಮಾಶಾಸನ ನೀಡಬೇಕು. (4) ಸರ್ಕಾರಿ ನೌಕರರಿಗೆ ಸಾರ್ವಜನಿಕರಿಂದ ಕರ್ತವ್ಯಕ್ಕೆ ಅಡ್ಡಿಯಾದಂತಹ ಸಂದರ್ಭದಲ್ಲಿ ಐಪಿಸಿ 353ರ ಅಡಿಯಲ್ಲಿ ಪ್ರಕರಣ ದಾಖಲಾಗುವಂತೆ ಅದೇ ಕರ್ತವ್ಯದಲ್ಲಿರುವ ಕಾರ್ಯನಿರತ ಪತ್ರಕರ್ತರಿಗೆ ಬೇರೆಯವರಿಂದ ಅಲ್ಲಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆಯಾದಂತಹ ಸಂದರ್ಭದಲ್ಲಿ ಅದೇ ಮಾದರಿ ಅಡಿಯಲ್ಲಿ ಕೇಸು ದಾಖಲಾಗುವಂತಾಗಲು ಸರ್ಕಾರ ಕಾನೂನು ರೂಪಿಸಬೇಕು. (5) ಕಾರ್ಯನಿರತ ಪತ್ರಕರ್ತರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ಸರ್ಕಾರ ಆರೋಗ್ಯ ವಿಮೆ ಜಾರಿಗೊಳಿಸಬೇಕು. (6) ಸಮಸ್ತ ಪತ್ರಕರ್ತರ ಸಂಕಷ್ಟಗಳ ಹಾಗೂ ಪರಿಹಾರಕ್ಕಾಗಿ ಪತ್ರಕರ್ತರ ಪ್ರಾಧೀಕಾರವನ್ನು ಸರ್ಕಾರ ರಚಿಸಬೇಕು. (7) ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಪತ್ರಕರ್ತರುಗಳಿಗೆ ನಿವೇಶನಗಳನ್ನು ಸರ್ಕಾರ ನೀಡಬೇಕು. (8) ಪ್ರತಿ ತಾಲ್ಲೂಕಿನಲ್ಲೂ ಪತ್ರಕರ್ತರ ಕಾರ್ಯಚಟುವಟಿಕೆಗಳಿಗಾಗಿ ಪತ್ರಿಕಾಭವನಗಳನ್ನು ನಿರ್ಮಾಣ ಮಾಡಬೇಕು ಎಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮತ್ತು ಪತ್ರಕರ್ತರ ಉಳಿವಿಗಾಗಿ ಹಾಗೂ ನೊಂದಂತಹ ಪತ್ರಕರ್ತರ ಹಕ್ಕಿಗಾಗಿ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಈ ಬೃಹತ್ ಪ್ರತಿಭಟನೆಯಲ್ಲಿ ಪ್ರತಿಯೊಬ್ಬ ಪತ್ರಕರ್ತರು ಭಾಗವಹಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲ್ಲೂಕು ಅಧ್ಯಕ್ಷರಾದ ಮಂಜುನಾಥ ಮಾಳ್ಗಿಯವರು ಮಾದ್ಯಮ ಪ್ರಕಟಣೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Post a Comment

0Comments

Post a Comment (0)