ಡಿ-26 ಕ್ಕೆ ಶಾಸಕ ರಾಜುಗೌಡ ಹಾಗೂ ಸಹೋದರ ಬಬ್ಲೂಗೌಡ ಅವರ ಹುಟ್ಟು ಹಬ್ಬದ ಪ್ರಯುಕ್ತ ಹುಣಸಗಿ ಪಟ್ಟಣದಲ್ಲಿ ಉಚಿತ ಆರೋಗ್ಯ  ಚಿಕಿತ್ಸಾ ಶಿಬಿರ ಕಾರ್ಯಕ್ರಮ

Udayavani News
0

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಹುಣಸಗಿ, ಡಿಸೆಂಬರ್ 19 : ಪಟ್ಟಣದ ಯು.ಕೆ.ಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾದ ತಾಯಿ ತಿಮ್ಮಮ್ಮ ಮೆಮೊರಿಯಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಡಿ-26 ರಂದು ಎ.ಎಸ್.ಎಮ್ ಸೂಪರ್ ಸ್ಪೇಷ್ಯಾಲಿಟಿ ಹಾಸ್ಪಿಟಲ್ ಕಲಬುರಗಿ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಈ ಒಂದು ಆರೋಗ್ಯ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರ ಆಗಮಿಸಿ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕೆಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ ಹೇಳಿದರು. 

ಪಟ್ಟಣದ ಶಾಸಕರ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸುರಪುರ ಮತಕ್ಷೇತ್ರದ ಜನಪ್ರಿಯ ಶಾಸಕರಾದ ನರಸಿಂಹನಾಯಕ ( ರಾಜುಗೌಡ) ಅವರ 44 ನೇ  ಹಾಗೂ ಸಹೋದರ ಬಬ್ಲೂಗೌಡ ಅವರ 39 ನೇ  ಹುಟ್ಟು ಹಬ್ಬದ ಪ್ರಯುಕ್ತ ಡಿ-26 ರಂದು ಪಟ್ಟಣದ ಯು.ಕೆ.ಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಸಾಮಾನ್ಯ ಔಷಧಿ ಚಿಕಿತ್ಸೆಗೆ ಸಂಬಂಧಿಸಿದ ನೆಗಡಿ, ಕೆಮ್ಮು, ದಮ್ಮು, ಜ್ವರ, ಮೆದುಳು ಜ್ವರ, ಹೆಚ್.ಐ.ವಿ, ಏಡ್ಸ್, ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಉಸಿರಾಟದ ತೊಂದರೆಗಳು, 

ಮೂಳೆ ಚಿಕಿತ್ಸೆಗೆ ಸಂಬಂಧಿಸಿದ:  ಸಂಧಿವಾತ, ಮೊಳಕಾಲು ನೋವು, ಕೀಲು ನೋವು, ಎಲುಬು ಸವೆತ, ಬೆನ್ನುಮೂಳೆ ನೋವು, ಹಾಗೂ ಸೊಂಟ ನೋವು ಇನ್ನಿತರೆ ಸಮಸ್ಯೆಗಳು, 

ಹೃದಯ ಸಂಬಂಧಿ ಕಾಯಿಲೆಗಳಾದ:  ರಕ್ತದೊತ್ತಡ, ಎದೆ ನೋವು, ಶ್ವಾಸಕೋಶದ ಒತ್ತಡ, ಇ.ಸಿ.ಜಿ ಹಾಗೂ ಇನ್ನಿತರೆ ಸಮಸ್ಯೆಗಳು,

 ಸ್ತ್ರೀ ರೋಗ ಕಾಯಿಲೆಗಳಾದ:  ಬಂಜೇತನ ನಿವಾರಣೆ, ಮುಟ್ಟಿನ ಸಮಸ್ಯೆ, ಗರ್ಭಧಾರಣೆ ಇನ್ನಿತರೆ ಸಮಸ್ಯೆಗಳಿಗೆ ಒಳಗಾದವರಿಗೆ ಉಚಿತ ಚಿಕಿತ್ಸೆಯನ್ನು ಹಮ್ಮಿಕೊಳ್ಳಲಾಗಿದೆ ಮತ್ತು ಬೋರುಕಾ ನೇತ್ರಾಲಯ ಕಲಬುರಗಿ ಇವರ ವತಿಯಿಂದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಕೂಡಾ ಹಮ್ಮಿಕೊಂಡಿದ್ದು ಖ್ಯಾತ ನೇತ್ರ ತಜ್ಞರು ಆದ ಡಾ. ವಿನಿತ್ ಭೀಮಶೆಟ್ಟಿ ಇವರು ಭಾಗವಹಿಸಿ  ನೇತ್ರ ಚಿಕಿತ್ಸೆ ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುತ್ತಿರುವ ಬಡವರ ಆರೋಗ್ಯದ ದೃಷ್ಟಿಯಿಂದ ಶಾಸಕರು ಈ ಉಚಿತ ಆರೋಗ್ಯ ಚಿಕಿತ್ಸೆ ಶಿಬಿರವನ್ನು ಏರ್ಪಡಿಸಿದ್ದು ಈ ಚಿಕಿತ್ಸೆಯ ಶಿಬಿರದಲ್ಲಿ ವಿವಿಧ ಆರೋಗ್ಯ ತಜ್ಞರು ಪಾಲ್ಗೊಂಡು ಬಡವರ ಚಿಕಿತ್ಸೆಗೆ ಕೈಜೋಡಿಸಲಿದ್ದಾರೆ. 

ಪ್ರಯುಕ್ತ ತಾಲೂಕಿನಲ್ಲಿ ಇರುವ ಬಡವರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಜೊತೆಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇರುವ ರೋಗಿಗಳಿಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸುವ ಮೂಲಕ ಅಲ್ಲಿಯೇ ಅವರಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಿ ಅವರಿಗೆ ಆರೋಗ್ಯ ಮುಕ್ತ ಜೀವನ ನಡೆಸಲು ಅನುಕೂಲ ಮಾಡಿಕೊಡಲು ನಮ್ಮ ಶಾಸಕರು ಪಣತೊಟ್ಟಿದ್ದು ಅವರ ಈ ಕಾರ್ಯಕ್ಕೆ ತಾಲೂಕಿನ ಜನತೆ ಕೈಜೋಡಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಹೇಳಿದರು. 

ನಂತರ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಯಲ್ಲಪ್ಪ ಕುರಕುಂದಿ ಮಾತನಾಡಿದರು. ನಂತರ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರದ ಬಿತ್ತಿ ಚಿತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ನಂಬರುಗಳಾದ: 6361861055, 7411477783, 9739030000 ಈ ಮೊಬೈಲ್ ನಂಬರುಗಳಿಗೆ ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದ್ದು ಅಂದು ಡಿ-26 ರ ಸೋಮವಾರದಂದು ಬೆಳಿಗ್ಗೆ: 10-00 ಗಂಟೆಯಿಂದ ಸಾಯಂಕಾಲ 4-00 ಗಂಟೆಯವರೆಗೆ ಈ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರವು ನಡೆಯುವುದು ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

ಈ ವೇಳೆ ಬಿ.ಎಂ. ಹಳ್ಳಿಕೋಟಿ, ವೀರೇಶ ಬಿ ಚಿಂಚೋಳಿ, ಬಸವರಾಜ ಮಲಗಲದಿನ್ನಿ, ಹೊನ್ನಕೇಶವ ದೇಸಾಯಿ, ಬಿ.ಎಲ್.ಮಠ, ಸಂಗಣ್ಣ ಸಾಹು ವೈಲಿ,  ಹೊನ್ನಕೇಶವ ದೇಸಾಯಿ, ಟಿ.ಎಸ್.ಚಂದಾ, ಸೋಮಶೇಖರ ಸ್ಥಾವರಮಠ, ರವಿ ಪುರಾಣಿಕಮಠ, ಬಸಣ್ಣ ದೇಸಾಯಿ ಬೈಲಕುಂಟಿ, ಹಾಗೂ ಶಾಸಕರ ಆಪ್ತ ಸಹಾಯಕ ಗುರು ಹುಲಕಲ್,  ಸೇರಿದಂತೆ ಇತರರು ಇದ್ದರು. 

Post a Comment

0Comments

Post a Comment (0)