UDAYAVANI NEWS
ಮಸ್ಕಿ, ಡಿಸೆಂಬರ್ 17 : ಪಟ್ಟಣದ ಬಸವೇಶ್ವರ ವೃತ್ತದ ಮುಂಭಾಗ ಎ. ಪಿ. ಎಂ. ಸಿ ಆವರಣದಲ್ಲಿ ನೂತನವಾಗಿ ಸೃಜಿಸಲ್ಪಟ್ಟ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್. ಸಿ ಸಂಚಾರಿ ನ್ಯಾಯಾಲಯ ಕಾರ್ಯಾರಂಭೋತ್ಸವ ಮತ್ತು ವಕೀಲರ ಸಂಘದ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಪ್ರಧಾನ ನ್ಯಾಯಾಧೀಶರು ಜನಪ್ರತಿನಿಧಿಗಳ ಸಮ್ಮುಖದಲ್ಲಿ ತಾಲೂಕ ನ್ಯಾಯವಾದಿಗಳ ಸಂಘ ಮಸ್ಕಿ ವಕೀಲರ ಭವನವನ್ನು ಮೊದಲಿಗೆ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನಾ ಗೀತೆ,ತದ ನಂತರ ರಾಷ್ಟ್ರ ಗೀತೆ ಹಾಡಲಾಯಿತು.ನಂತರ ವೇದಿಕೆಯ ಮೇಲೆ ಆಸೀನರಾಗಿದ್ದ ಸರ್ವ ಗಣ್ಯರನ್ನು ಕೆಂಪು ಗುಲಾಬಿ ನೀಡಿ ಸ್ವಾಗತಿಸಲಾಯಿತು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಮಸ್ಕಿ ವಕೀಲರ ಸಂಘದ ಅಧ್ಯಕ್ಷರು ಈಶಪ್ಪ ದೇಸಾಯಿ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರುವಿಹಾಳ, ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್, ಜಿಲ್ಲಾ ಪ್ರಧಾನ ನ್ಯಾಯಾಧೀಶರು ಮಾರುತಿ ಎಸ್ ಬಾಗಡೆ ರಾಯಚೂರು ಕಾರ್ಯಕ್ರಮದ ಕುರಿತು ಮಾತನಾಡಿದರು.
ಕೊನೆಯದಾಗಿ ವೇದಿಕೆಯ ಮೇಲೆ ನೆರೆದ ಗಣ್ಯರಿಗೆ ಸನ್ಮಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ
ಮಾರುತಿ ಎಸ್ ಬಾಗಡೆ ಜಿಲ್ಲಾ ಪ್ರಧಾನ ನ್ಯಾಯಾಧೀಶರು, ದಯಾನಂದ ನ್ಯಾಯಾಧೀಶರು, ಚಂದ್ರಶೇಖರ್ ದಿದ್ದಿ ಸಿವಿಲ್ ನ್ಯಾಯಾಧೀಶರು ಲಿಂಗಸ್ಗೂರು, ಕೋಟಪ್ಪ ಕಬಳೆ ಸಿವಿಲ್ ನ್ಯಾಯಾಧೀಶರು ಸಿಂಧನೂರು, ಅಮರೇ ಗೌಡ ನಾಯಕ ತಿಮ್ಮಾಪುರ ಮಸ್ಕಿ ತಾಲೂಕ ವಕೀಲರ ಸಂಘದ ಉಪಾಧ್ಯಕ್ಷರು, ಆರ್.ಬಸನಗೌಡ ತುರುವಿಹಾಳ ಶಾಸಕರು ಮಸ್ಕಿ,ಪ್ರತಾಪ ಗೌಡ ಪಾಟೀಲ್ ಮಾಜಿ ಶಾಸಕರು, ಮಂಜುನಾಥ ಭೋಗಾವತಿ ಪ್ರಭಾರಿ ತಹಶೀಲ್ದಾರರು ಮಸ್ಕಿ, ಹನುಮಂತಮ್ಮ ನಾಯಕ ಪುರಸಭೆ ಮುಖ್ಯಾಧಿಕಾರಿ,ತಾಲೂಕಿನ ವಿವಿಧ ಸಂಘಟನೆಯ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಿರುಪಾದೆಪ್ಪ, ರಾಮಣ್ಣ ದೀನಸಮುದ್ರ ನಿರೂಪಿಸಿದರೇ,
ಹೆಚ್ .ವೀರಭದ್ರಪ್ಪ ವಕೀಲರು ಸ್ವಾಗತಿಸಿದರು.