ಸಂಜೀವನ್.ಆರ್ ವಿದ್ಯಾರ್ಥಿನಿಯರ ಸಮಸ್ಯೆ ಕೇಳಿ ನಿಲಯಕ್ಕೆ ದಿಢೀರನೆ ಭೇಟಿ

Udayavani News
0



ವರದಿ: ರಾಜೇಂದ್ರ ಪ್ರಸಾದ್ ಕಲಬುರ್ಗಿ

 ಕಲಬುರ್ಗಿ,ಸೆ.13 : ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಭಾಗ ಕುಂಚಾವರಂ ಗ್ರಾಮದ ಡಾ ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರ ಮೇಲೆ ಶಾಲೆಯ ಪ್ರಿನ್ಸಿಪಾಲ್ ಚೇತನ್ ರೆಡ್ಡಿ ಮತ್ತು ಕಂಪ್ಯೂಟರ್ ಆಪರೇಟರ್ ಸಂಗಮೇಶ ಸೇರಿದಂತೆ ಮಧ್ಯರಾತ್ರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಕಳೆದ 2ವರ್ಷಗಳಿಂದ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆಂದು  ಸಂಜೀವನ್ ಯಾಕಾಪೂರ ರವರಿಗೆ ಬಹಳ ಕಷ್ಟದಿಂದ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು. ಸುದ್ದಿ ತಿಳಿದ ತಕ್ಷಣ ದಿಢಿರನೆ ಸ್ಥಳಕ್ಕೆ ಧಾವಿಸಿದ ಚಿಂಚೋಳಿ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ  ಸಂಜೀವನ್.ಆರ್ ಯಾಕಾಪೂರ ರವರು ವಿದ್ಯಾರ್ಥಿಗಳ ಸಮಸ್ಯೆಗಳು ಆಲಿಸಿ ಆರೋಗ್ಯ ಕ್ಷೇಮ ವೀಕ್ಷಿಸಿದರು ಯಾವುದೇ ಕಷ್ಟ ಸಂಧರ್ಭದಲ್ಲಿ ನಾನು ನಿಮ್ಮ ಜೊತೆಗಿದ್ದೇನೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು ಸಂಭಂದಪಟ್ಟ ಅಧಿಕಾರಿಗಳು ಮತ್ತು ತಾಲೂಕಿನ ಶಾಸಕರ ಬೇಜವಾಬ್ದಾರಿತನದಿಂದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಸಂಭಂದಪಟ್ಟ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಮಾತನಾಡಿ ಮಕ್ಕಳಿಗೆ ಸುವ್ಯವಸ್ಥೆ ಕಲ್ಪಿಸಿಕೊಡಬೇಕು ಹಾಗೂ ಲೈಂಗಿಕ ಕಿರುಕುಳ ಎಸಗಿದ ಪ್ರಿನ್ಸಿಪಾಲ್ ಚೇತನ್ ರೆಡ್ಡಿ ಮತ್ತು ಸಂಗಮೇಶ ಇವರಿಗೆ ಕಾನೂನು ಕ್ರಮ ಜರುಗಿಸಿ ಸೇವೆಯಿಂದ ಅಮಾನತು ಮಾಡಬೇಕೆಂದು ತಾಲೂಕ ಆಡಳಿತ ಮತ್ತು ಜಿಲ್ಲಾ ಆಡಳಿತ ಮತ್ತು ಸರಕಾರಕ್ಕೆ ಒತ್ತಾಯಿಸಿದರು.

ಈ ಸಂಧರ್ಭದಲ್ಲಿ ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ರಾಹುಲ ಸಂಜೀವನ್ ಯಾಕಾಪೂರ ಸುರೇಂದ್ರ ಶಿವರೆಡ್ಡಿಪಲ್ಲಿ ಗೋಪಾಲ್ ಕಾರಬಾರಿ ಜವಾರನಗರ ತಾಂಡಾ ಸಂತೋಷ್ ರಾಠೋಡ್ ರೂಪಿಸಿಂಗ್ ದೇವು ರಾಠೋಡ್ ನರಸಿಂಗ್ ಕುಂಚಾವರಂ ಜಗನ್ ಹೆಚ್ ಡಿ ರಾಜಕುಮಾರ ತಲಾರಿ ವಿಜಯ ತಲಾರಿ ಆಶೀರ್ವಾದಂ ಕೀರ್ತಿಕುಮಾರ್ ದೀಪಕ್ ರಾಜ್ ಸಂಗಮೇಶ ಹೇಮಂತ್ ಶಾದಿಪೂರ ಚಿನ್ನಯ್ಯ ಶಾದಿಪೂರ ನರಸಿಮುಲು ಸೇರಿದಂತೆ ಅನೇಕ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.


Post a Comment

0Comments

Post a Comment (0)