ಸಮಯಕ್ಕೆ ಸರಿಯಾಗಿ ಬಾರದ ಬಸ್ಸ ವಿದ್ಯಾರ್ಥಿಗಳ ಪ್ರತಿಭಟನೆ : ಅಧಿಕಾರಿಗಳಿಗೆ ತರಾಟೆಗೆಕೊಂಡ ಹಿಂದುಳಿದ ವರ್ಗ ಆಯೋಗದ ಸದಸ್ಯರು

Udayavani News
0


ಗುರುಮಿಠಕಲ ::  ಇಂದು ಮುಂಜಾನೆ ಕಂದುಕುರ್.ಚಿಂತನಪಲ್ಲಿ.ಮಗದಂಪೂರ್. ಪಸಪುಲ್. ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಲೇಟಾಗಿ ಬರುವುದರಿಂದ. ಶಾಲೆ ಕಾಲೇಜುಗಳಿಗೆ ಹೋಗುವಷ್ಟರಲ್ಲಿ ಸಮಯ ವ್ಯರ್ಥವಾಗುತ್ತಿದೆ ಅಂತ ಎಲ್ಲಾ ವಿದ್ಯಾರ್ಥಿಗಳು ಬಸ್ಸನ್ನು ತಡೆದು ಪಸಪುಲ್ ಗೇಟಿನ ಹತ್ತಿರ ಪ್ರತಿಭಟನೆ ಮಾಡಲಾಯಿತು. ಬೆಳಗಿನ ಜಾವ ಎಲ್ಲಾ ಪ್ರಯಾಣಿಕರಿಗೆ ವಿದ್ಯಾರ್ಥಿಗಳಿoದ ಹೋರಾಟದ ಬಿಸಿ ತಟ್ಟಿತು. ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗದ ಆಯೋಗ ಸದಸ್ಯರಾದ ಅರುಣಕುಮಾರ ಕಲ್ಗದ್ದೆ ಅವರು ಗುರುಮಠಕಲ್ ಯಿಂದ ಬೆಂಗಳೂರಿಗೆ ಪ್ರಯಣಸುತ್ತಿರುವ ಸಂದರ್ಭದಲ್ಲಿ ಈ ಶಾಲಾ ಮತ್ತು ಕಾಲೇಜು ಮಕ್ಕಳ ಪ್ರತಿಭಟನೆ ಯನ್ನು ಗಮನಿಸಿ. ವಿದ್ಯಾರ್ಥಿಗಳ ಅನೇಕ ಸಮಸ್ಯೆಗಳನ್ನು ತಿಳಿದು ಕೂಡಲೇ ಸಮಸ್ಯೆಗಳನ್ನು ಪರಿಹರಿಸಲಾಯಿತು.

Video Player
00:00
00:56
Video Player
00:00
00:20

ನಾಳೆಯಿಂದ ಈ ಗ್ರಾಮದ ವಿದ್ಯಾರ್ಥಿಗಳಿಗೆ ಎರಡು ಬಸ್ಸುಗಳ ಮುಂಜಾನೆ ಏಳು ಗಂಟೆಗೆ ಗುರುಮಠಕಲ್ ಯಿಂದ ಯಾದಗಿರಿಗೆ.ಸಂಜೆ 5 ಗಂಟೆಗೆ ಯಾದಗಿರಿ ಯಿಂದ ಗುರುಮಠಕಲ್ ಬಸ್ಸು ಮಕ್ಕಳಿಗೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಮನವೊಲಿಸಿ ಹೋರಾಟವನ್ನು ನಿಲ್ಲಿಸಿ ಅವರನ್ನು ಶಾಲಾ-ಕಾಲೇಜುಗಳಿಗೆ ಕಳಿಸಲಾಯಿತು.

Post a Comment

0Comments

Post a Comment (0)