ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರಿನ ಮಹಾನಗರ ಪಾಲಿಕೆಯ ಜೆಡಿಎಸ್ ಕಾಂಗ್ರೆಸ್ ಬಿಜೆಪಿ ಅಧಿಕಾರ ಪೈಪೋಟಿಯ ಮಧ್ಯೆ ಎರಡು ರಾಜಕೀಯ ಪಕ್ಷಗಳ ಒಳ ಒಪ್ಪಂದದಿಂದ ಶಿವಕುಮಾರ್ ಅವರು ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾಗಿ ಆಯ್ಕೆಯಾಗಿದ್ದಾರೆ. ಮೈಸೂರಿನ ಇತಿಹಾಸದಲ್ಲಿ ಮೂಟ್ಟ ಮೋದಲ ಬಾರಿಗೆ ಗಂಗಾಮತ ಸಮಾಜದವರು ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾಗಿ ಆಯ್ಕೆಯಾಗಿದ್ದಾರಿಂದ ಗಂಗಾಮತಸ್ಥ ಸಮಾಜದ ಮುಖಂಡರಿಂದ ಹರ್ಷ
ಗಂಗಾಮತಸ್ಥ ಸಮುದಾಯದ ಶಿವಕುಮಾರ್ ಅವರನ್ನು ಮಹಾಪೌರರಾಗಿ ಆಯ್ಕೆ ಮಾಡಿದ ರಾಜಕೀಯ ಪಕ್ಷಗಳಿಗೆ ಸಮಾಜದ ಮುಖಂಡರಿಂದ ಸಮಸ್ತ ಸಮಾಜದ ಬಾಂಧವರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿದ್ದಾರೆ ಮೈಸೂರು ಇತಿಹಾಸದ ಪೂರ್ವದಿಂದಲೂ ಗಂಗಮತಸ್ಥರು ಈ ಭಾಗದಲ್ಲಿ ನೆಲೆಸಿದ್ದು ಮೈಸೂರು ಜಿಲ್ಲೆಯಾದ್ಯಂತ ಯಥೇಚ್ಛ ಸಂಖ್ಯೆಯಲ್ಲಿದ್ದಾರೆ ಮೈಸೂರು ನಗರದಲ್ಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದು ರಾಜಕೀಯ ಪ್ರಾರ್ಥನೆಯಿಂದ ವಂಚಿತರಾಗಿದ್ದರು ಈ ಒಂದು ಸಂದರ್ಭದಲ್ಲಿ ರಾಜಕೀಯದಲ್ಲೂ ಕೂಡ ಅವಕಾಶ ಒದಗಿ ಬಂದಿದ್ದು ಸಮಾಜಕ್ಕೆ ರಾಜಕೀಯವಾಗಿ ಅವಕಾಶ ಸಿಕ್ಕಂತಾಗಿದೆ
ಮೈಸೂರು ನೂತನ ಮಹಾಪೌರರಾಗಿ ಶಿವಕುಮಾರ್ ಆಯ್ಕೆ
September 07, 2022
0
Tags