ಜೀವನವು ಯಾವಾಗಲೂ ಸುಲಭವಲ್ಲ. ನೀವು ನಿಮಗಾಗಿ ಹೋರಾಡುವುದನ್ನು ಎಂದು ನಿಲ್ಲಿಸುವ ಹಾಗಿಲ್ಲ. ಸತತ ಪ್ರಯತ್ನದಿಂದ ಮಾತ್ರ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ.
ಆಯಾಸ ಯಾವಾಗಲೂ ಕೆಲಸದಿಂದ ಆಗಲ್ಲ, ಹೆಚ್ಚಾಗಿ ಚಿಂತೆ, ಹತಾಶೆ, ಭಯ ಮತ್ತು ಅತೃಪ್ತಿಯಿಂದ ಆಗುತ್ತದೆ.
ಅದೃಷ್ಟ ಅಂದರೆ ಹಣ ಅಂತಸ್ತು ಇರುವುದು ಮಾತ್ರ ಅಲ್ಲ.. ಕೈ ತುಂಬಾ ಕೆಲಸ, ಹೊಟ್ಟೆ ತುಂಬಾ ಊಟ, ಕಣ್ತುಂಬ ನಿದ್ದೆ. ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಆತ್ಮೀಯರನ್ನು ಹೊಂದಿರುವುದು ನಿಜವಾದ ಅದೃಷ್ಟ.
ಹಸಿದವನಿಗೆ ಗೊತ್ತು ಅನ್ನದ ಬೆಲೆ, ದುಡಿದವನಿಗೆ ಗೊತ್ತು, ದುಡ್ಡಿನ ಬೆಲೆ, ಹೆತ್ತವಳಗೆ ಗೊತ್ತು ಒಂದು ಜೀವದ ಬೆಲೆ.
ಮನಸ್ಸಿನಲ್ಲಿ ಕೊಳಕು ತುಂಬಿಕೊಂಡು, ಹೊರಗಡೆ ಚಿನ್ನದಂತೆ ಹೊಳೆಯುವ ಬದಲು, ಒಳಗಡೆ ಜೇನಿನಂತೆ ಸಿಹಿ ತುಂಬಿಕೊಂಡು, ಹೊರಗಡೆ ಮಣ್ಣಿನ ಮಡಿಕೆಯಂತೆ ಇದ್ದರೂ ಪರವಾಗಿಲ್ಲ, ಹೊಳೆಯುವುದು ಮುಖ್ಯವಲ್ಲ, ಒಳಗೂ ಹೊರಗೂ ಒಳ್ಳೆಯ ಮನಸ್ಸಿರುವುದು ಮುಖ್ಯ.
🚩 ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧುಶ್ಚ ತ್ವಮೇವ!
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವದೇವ!! 🚩
ಓಂ ಜಯ ಭಗವದ್ಗೀತೆ
ಓಂ ಕೇಶವಾಯ ನಮಃ