ಸಾಗರ: ದೆಹಲಿಯಲ್ಲಿ ನಡೆದ ಕರಕುಶಲ ವೈಭವ ಪ್ರದರ್ಶನದಲ್ಲಿ ಸಾಗರದ ಶ್ರೀಗಂಧ ಸಂಕೀರ್ಣದ ಜೆ.ಸಿ ನಾಗರಾಜ್ ಅವರು ಸಂಪೂರ್ಣವಾಗಿ ಶ್ರೀಗಂಧದಿಂದ ತಯಾರಿಸಿದ ಆಭರಣ ಭರಣಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.
ನಾಗರಾಜ್ ಅವರ ಈ ಕಲಾ ಸಾಧನೆ ಮಲೆನಾಡಿಗೆ ಹೆಮ್ಮೆ ತಂದಿದ್ದು ಜೆ.ಸಿ ನಾಗರಾಜ್ ಅವರನ್ನು ಸಾಗರ ಶಾಸಕ ಹರತಾಳು ಹಾಲಪ್ಪ ಅಭಿನಂದಿಸಿ ಸನ್ಮಾನಿಸಿದ್ದಾರೆ.
ಗಂಗಾಧರ್ ಅವರಿಗೆ ಈ ಹಿಂದೆ ನ್ಯಾಷನಲ್ ಅವಾರ್ಡ್ ಮೆರಿಟ್, ರಾಜ್ಯ ಪ್ರಶಸ್ತಿ, ಶಿಲ್ಪಕಲಾ ಅವಾರ್ಡ್ ಗಳು ಲಭಿಸಿವೆ. ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾದ ಈ ಕಲಾಕೃತಿಯಲ್ಲಿ ರಾಮಾಯಣದ ಶ್ರೀ ರಾಮ ಪಟ್ಟಾಭಿಷೇಕ ಪ್ರಸಂಗ, ಮಹಾಭಾರತದ ದಶಾವತಾರ ಪ್ರಸಂಗ ಮತ್ತು ರಾಷ್ಟ್ರೀಯ ಪ್ರಾಣಿ ಹುಲಿ, ರಾಷ್ಟ್ರೀಯ ಪಕ್ಷಿ ನವಿಲು ಹಾಗೂ ಆನೆ, ಜಿಂಕೆಗಳ ಸಂತತಿಯನ್ನು ಸಂರಕ್ಷಿಸುವ ಕುರಿತು, ಲಾವಂಗ ಹೂ, ಭತ್ತದ ತೆನೆಗಳ ಸಾಲುಗಳನ್ನು ಅತೀ ಸೂಕ್ಷ್ಮವಾದ ಕೆತ್ತನೆ ಕೆಲಸ ನಿರ್ವಹಿಸಲಾಗಿದೆ. ಈ ಮೂಲಕ ದೇಶದ ಕಲಾ ಕ್ಷೇತ್ರದಲ್ಲಿ ಸಾಗರ ಹಾಗೂ ಶಿವಮೊಗ್ಗದ ಖ್ಯಾತಿ ಹೆಚ್ಚಿದೆ.
ಆಭರಣ ಭರಣಿಗೆ ಪ್ರಶಸ್ತಿ..!