ಮಲಪ್ರಭಾ ನದಿ ಯೋಜನೆಯ ಜಲಾನಯನ ಪ್ರದೇಶದ ರೈತರಿಂದ ಬೃಹತ್ ಪಾದಯಾತ್ರೆ ತಯಾರಿ

Udayavani News
0
 ಜಲಾನಯನ ಯೋಜನೆಯಲ್ಲಿ ಹಿನ್ನೀರಿನ ಸಂಗ್ರಹಕ್ಕಾಗಿ ಮತ್ತು ನೀರಾವರಿ ಯೋಜನೆಯ ಹಾಗೂ ಇನ್ನಿತರ ನೀರಾವರಿಯ ಯೋಜನೆಗಾಗಿ 1969 ರಿಂದ 1973 ರವರೆಗೆ ಮತ್ತು ನಂತರದಲ್ಲಿಯೂ ಭೂ ಸ್ವಾಧೀನಾಧಿಕಾರಿಗಳಿಂದ ಭೂ ಸ್ವಾಧೀನ ಮಾಡಿಕೊಂಡಿದ್ದು ಸುಮಾರು 50 ವರ್ಷಗಳಷ್ಟು ಕಾಲಾವಧಿ ವಿಳಂಬದ ನಂತರ ಈಗ 2022 ರಲ್ಲಿ ಕಿತ್ತೂರ , ಬೈಲಹೊಂಗಲ , ಸವದತ್ತಿ ಹಾಗೂ ರಾಮದುರ್ಗ ತಹಶೀಲ್ದಾರರು ಈಗ ರೈತರ ಗಮನಕ್ಕೆ ತರದೇ ದಾಖಲಾತಿಯ ವಿಧಿ ವಿಧಾನ ಉಲ್ಲಂಘಿಸಿ ಈಗಿನ ನಿಯಮಾವಳಿಯಂತೆ ಭೂ ಮಾಪನ ಇಲಾಖೆಯ ಪ್ರಕಾರ 11 ಇ ಸ್ಕೆಚ್ ಹಾಗೂ ಜಿಪಿಎಸ್ ಸರ್ವೆ ಹದ್ದುಬಸ್ತು ಯಾವ ಕ್ರಮವನ್ನು ಜರುಗಿಸದೆ ಅವಾರ್ಡ ಪ್ರತಿಯನ್ನು ಸಹಿತ ಹಾಜರಪಡಿಸದೆ ಭೂ ಸ್ವಾಧೀನದ ಪ್ರದೇಶವನ್ನು ಗುರುತಿಸದೆ ರೈತರ ಪಹಣಿಗಳಲ್ಲಿ ಅಕ್ರಮವಾಗಿ ದಾಖಲಿಸಿದ ಈ ಕ್ರಮವನ್ನು ರದ್ದುಪಡಿಸುವಂತೆ ನಾಲ್ಕು ತಾಲೂಕಿನ ಭಾದನೆಗೊಳಪಟ್ಟ ಸಾವಿರಾರು ರೈತರೊಂದಿಗೆ ಸೋಮವಾರ ದಿ : 19/09/2022 ರಂದು ಬೈಲಹೊಂಗಲ ನಗರದ ಬೆಳಗಾವಿ ರಸ್ತೆಯ ರಾಣಿ ಕಿತ್ತೂರ ಚನ್ನಮ್ಮಾಜಿ ಮುತ್ತಳಿಯಿಂದ ಪಾದ ಯಾತ್ರೆಯ ಮೂಲಕ ಬೈಲಹೊಂಗಲ ಉಪ ವಿಭಾಗಾಧಿಕಾರಿಗಳ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಲು ಜಿಲ್ಲೆಯ ಎಲ್ಲಾ ರೈತ ಸಂಘಟನೆಗಳು ಬಾದನೆಗೊಳಪಟ್ಟ ನಾಲ್ಕು ತಾಲೂಕಿನ ರೈತ ಬಾಂಧವರು ವಿವಿಧ ಸಮಾಜ ಪರ ಸಂಘಟನೆಗಳೊಂದಿಗೆ ಪಾಲ್ಗೊಂಡು ಧರಣಿ ಸತ್ಯಾಗ್ರಹವನ್ನು ಮಾಡಲು ನಿರ್ಧರಿಸಲಾಗಿರುತ್ತದೆ.

https://youtube.com/shorts/sIWP_yiJSwM?feature=share
ಪಹಣಿಗಳಲ್ಲಿ ದಾಖಲಾಗಿರುವ ಕರ್ನಾಟಕ ನೀರಾವರಿ ನಿಗಮ ನಿಯಮಿತ , ಎಂಬ ದಾಖಲಾತಿಯನ್ನು ಮಾನ್ಯ ಉಪವಿಭಾಗಾಧಿಕಾರಿಗಳು ರದ್ದುಪಡಿಸಿದ ದಾಖಲೆಯನ್ನು ನೀಡುವವರೆಗೆ ಧರಣಿ ಸತ್ಯಾಗ್ರಹವನ್ನು ಮುಂದುವರೆಸಲಾಗುವುದು . ಬೈಲಹೊಂಗಲ ನಾಡಿನ ಎಲ್ಲಾ ಪ್ರಮುಖಕರು ಹಾಗೂ ಸ್ಥಳೀಯ ಮಠಾಧೀಶರು ಈ ಧರಣಿಯ ಪಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿರುವುದರಿಂದ ಅಕ್ರಮ ದಾಖಲೆ ಯಿಂದ ಬಾಧನೆಗೊಳಪಟ್ಟ ಎಲ್ಲಾ ರೈತರು ಈ ಪಾದಯಾತ್ರೆಯಲ್ಲಿ ಹಾಗೂ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಧರಣಿಯ ಮುಖ್ಯ ಸಂಘಟಕರಾದ ಬಿ.ಎಂ. ಚಿಕ್ಕನಗೌಡರ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)