ಮಸ್ಕಿ ಸೆ.10 : ಪಟ್ಟಣದ ಭ್ರಮರಾಂಭ ದೇವಾಸ್ಥಾನದ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಗುರುವಾರ ರಾತ್ರಿ ಸಮಯ 10:15 ನಿಮಿಷಕ್ಕೆ ಕಣವೆ ಆಂಜನೇಯ ದೇವಸ್ಥಾನ ಅಕ್ಕಪಕ್ಕದ ಕೆಲ ಮನೆಗಳಿಗೆ ಕೆಲವು ಕಿಡಿಗೇಡಿಗಳು ಮಹಿಳೆಯರನ್ನು ಮನಬಂದಂತೆ ಥಳಿಸಿದ್ದಾರೆ ಈ ಕುರಿತು ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ವಿಷಯವಾಗಿ ಕೋಮು ಘರ್ಷಣೆಗೆ ಎಡೆಮಾಡಿ ಕೊಡಬಾರದು ಎಂಬ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳ ಹಾಗೂ ಮುಖಂಡರುಗಳ ನೇತೃತ್ವದಲ್ಲಿ ಶಾಂತಿ ಸೌಹಾರ್ದತೆಯ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕೆಲವು ಕಿಡಿಗೇಡಿ ಸಹೋದರರಿಗೆ ತಿಳಿಹೇಳಿ ಅಹಿತಕರ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವ ಕಾರ್ಯ ನಾವೆಲ್ಲ ಸೇರಿ ಮಾಡ್ಬೇಕು. ಮತ್ತೆ ಮತ್ತೆ ಈ ರೀತಿಯ ದುರಂತ ಮರುಕಳಿಸಬಾರದು. ತಮ್ಮ ತಮ್ಮ ಮನೆಯವರಿಗೆ ತಾವೇ ಬುದ್ಧಿವಾದ ಹೇಳಿ ನಾವೆಲ್ಲ ಒಂದೇ ಎಂಬ ಒಗ್ಗಟ್ಟನ್ನು ಪ್ರದರ್ಶನ ಮಾಡ್ಬೇಕು. ಎಂದು
ಮಹಾದೇವಪ್ಪ ಪೊಲೀಸ್ ಪಾಟೀಲ್ ಮುಖಂಡರು ಮಸ್ಕಿ ತಿಳಿಸಿದರು.
ನಂತರ ಮಾತನಾಡುತ್ತಾ ನಿಜವಾದ ಕಿಡಿಗೇಡಿ ಗೆ ಶಿಕ್ಷೆ ಆಗಲಿ,ಒಬ್ಬ ಅಮಾಯಕ ವ್ಯಕ್ತಿ ಬಲಿಯಾಗುವುದು ಬೇಡ ಎಂಬುದು ನನ್ನದೊಂದು ಸಲಹೆ. ಮುಂದಿನ ದಿನಗಳಲ್ಲಿ ನಾವೇನು ಕ್ರಮ ಕೈಗೊಳ್ಳುತ್ತೇವಲ್ಲಾ ಒಂದು ಕೇಸು ವಿಚಾರವಾಗಿ ವಿಚಾರಣೆ ಮಾಡಲು ಒಂದೆರಡು ತಿಂಗಳುಗಳ ಕಾಲ ಸಮಯ ಇಡಿಯುತ್ತೆ. ಯಾವುದೇ ಒಂದು ಘಟನೆಗಳು ನಡೆಯುವುದು ಸಣ್ಣ ಸಣ್ಣ ವಿಚಾರವಾಗಿ ನಡೆಯುತ್ತೆ ಹಾಗಾಗಿ ಯಾವುದೋ ಒಂದು ವಿಚಾರವನ್ನು ಜಾತಿಗೆ ತಂದು ಕಟ್ಟುವ ಕೆಲಸ ಮಾಡಬಾರದು ಇವಾಗೇನು ನಡೆದಿದೆ ಇಲ್ಲಿಗೆ ಕೊನೆಗೊಳಿಸಿ ಮುಂದೆ ಯಾವುದೇ ರೀತಿಯ ಆನಾಹುತ ಮರುಕಳಿಸಬಾರದು ಪೋಲಿಸ್ ಇಲಾಖೆಗೆ ಸಹಕರಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೆರೆದಂತಹ ಗಣ್ಯರಿಗೆ ಸಲಹೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಪಟ್ಟಣದ ಪ್ರಮುಖ ಮುಖಂಡರು ಮಾತನಾಡಿ ಮತ್ತೆ ಮತ್ತೆ ಈ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ
ಡಿ ವೈ ಎಸ್ಪಿ ಮಂಜುನಾಥ ಲಿಂಗಸ್ಗೂರು, ಸಿಪಿಐ ಸಂಜೀವ್ ಬಳಿಗಾರ ಮಸ್ಕಿ, ಸಿಪಿಐ ದೇವದುರ್ಗ, ಸಿದ್ರಾಮ ಬಿದರಾಣಿ ಪಿಎಸ್ಐ ಮಸ್ಕಿ,ಪಟ್ಟಣದ ಎಲ್ಲಾ ಸಮುದಾಯದ ಮುಖಂಡರು ಹಾಗೂ ಪೋಲಿಸ್ ಸಿಬ್ಬಂದಿ ವರ್ಗ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.