ಕಾಂಗ್ರೆಸ್ ಪ.ಪಂ ಜಿಲ್ಲಾ ಉಪಾಧ್ಯಕ್ಷರಾಗಿ ಬಸನಗೌಡ ಮಾರಲದಿನ್ನಿ ನೇಮಕ

Udayavani News
0
ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ,
ಮಸ್ಕಿ ಸೆ.10 : ಶ್ರೀ ಬಸನಗೌಡ ಮಾರಲದಿನ್ನಿ ಇವರನ್ನು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡದ ರಾಯಚೂರು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು ರಾಯಚೂರು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಸಭಾ ಸದಸ್ಯರ ಶಿಫಾರಸ್ಸಿನ ಮೇರೆಗೆ ಜಿಲ್ಲಾ ಪರಿಶಿಷ್ಟ ಪಂಗಡದ ಅಧ್ಯಕ್ಷರಾದ ಕೆ. ನರಸಿಂಹ ನಾಯಕ ಆದೇಶಿಸಿದ್ದಾರೆ.

ಕೆ. ನರಸಿಂಹ ನಾಯಕ ಅಧ್ಯಕ್ಷರು ಜಿಲ್ಲಾ ಪರಿಶಿಷ್ಟ ಪಂಗಡ ವಿಭಾಗ ರಾಯಚೂರು ಇವರ ಆದೇಶದ ಮೇರೆಗೆ ಶ್ರೀ ಬಸನಗೌಡ ತಂದೆ ಹನುಮನಗೌಡ ಸಾಕಿನ್ ಮಾರಲದಿನ್ನಿ ತಾ// ಮಸ್ಕಿ, ಜಿಲ್ಲಾ //ರಾಯಚೂರು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ರಾಯಚೂರು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು ರಾಯಚೂರು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಸಭಾ ಸದಸ್ಯರ ಶಿಫಾರಸ್ಸಿನ ಮೇರೆಗೆ ಜಿಲ್ಲಾ ಪರಿಶಿಷ್ಟ ಪಂಗಡದ ಅಧ್ಯಕ್ಷರಾದ ಕೆ.ನರಸಿಂಹ ನಾಯಕ ಆದೇಶಿಸಿದ್ದಾರೆ.

ಈ ಜವಾಬ್ದಾರಿಯನ್ನು ಶ್ರೀ ಬಸನಗೌಡ ಮಾರಲದಿನ್ನಿ ತಕ್ಷಣದಿಂದ ವಹಿಸಿಕೊಂಡು ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ರಾಯಚೂರು ಜಿಲ್ಲಾ ಉಪಾಧ್ಯಕ್ಷ ಸ್ಥಾನವನ್ನು ಸಂಘಟನೆ ಸದೃಢಗೊಳಿಸಿ ಎಲ್ಲಾ ಹಂತದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂಬುದು ನಮ್ಮ ಪಕ್ಷದ ಸಿದ್ಧಾಂತ ವಾಗಿರುತ್ತದೆ ಈ ಸಿದ್ಧಾಂತಕ್ಕೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ಪಕ್ಷವನ್ನು ಸರಿದೂಗಿಸಿಕೊಂಡು ಹೋಗುತ್ತೀರಿ ಎಂಬ ವಿಶ್ವಾಸ ನಮಗಿದೆ ಎಂದು 
ಕೆ. ನರಸಿಂಹ ನಾಯಕ ಜಿಲ್ಲಾ ಕಾಂಗ್ರೇಸ್ ಸಮಿತಿ ಪರಿಶಿಷ್ಟ ಪಂಗಡದ ಅಧ್ಯಕ್ಷರು ನೇಮಕ ಮಾಡಿ 
ನೇಮಕ ಪತ್ರದ ಮೂಲಕ ಅಭಿನಂದಿಸಿದ್ದಾರೆ. 

Post a Comment

0Comments

Post a Comment (0)