ರಾಜ್ಯದ ಎಲ್ಲಾ ಪತ್ರಕರ್ತರಿಗೆ ಬಸ್ ಪಾಸ್ ದೊರೆಯದಿದ್ದರೆ ನ್ಯಾಯಯುತ ಹೋರಾಟ ನಿಲ್ಲದು: ಮಲ್ಲಿಕಾರ್ಜುನ ಬಂಗ್ಲೆ

Udayavani News
0
ವರದಿ - ಸೈಯದ ಮೋಸಿನ ಅಲಿ ಬೀದರ್
ಬೀದರ್ ಸೆ.10 : ಸಾರಿಗೆ ಸಚಿವರಾಗಿರುವ ಶ್ರೀರಾಮುಲು ಹಾಗೂ ಬಂಗ್ಲೆ ಮಲ್ಲಿಕಾರ್ಜುನರ ಮಧ್ಯ 25 ವರ್ಷಗಳ ಕಾಲ ಆತ್ಮೀಯ ಅನುಬಂಧವಿದ್ದರೂ ಕೂಡ ಏನನ್ನು ಇಂದಿನ ವರೆಗೂ ಅವರಿಂದ ಬಂಗ್ಲೆ ಬಯಸಿಲ್ಲ ಆದರೆ ಇಂದು ರಾಜ್ಯದ ಸಮಸ್ತ ಕಾರ್ಯನಿರತ ಪತ್ರಕರ್ತರ ಪರವಾಗಿ ಮಾಧ್ಯಮ ಮಾನ್ಯತಾ ಹೊಂದಿಲ್ಲದ (Non Accridate) ಪತ್ರಕರ್ತರೆಲ್ಲರಿಗೂ ಉಚಿತ ಬಸ್ ಪಾಸ್ ನೀಡಬೇಕೆಂದು ವೇದಿಕೆಯಲ್ಲಿ ವಿನಂತಿಸಿದಾಗ ಅದಕ್ಕೆ ಪ್ರತ್ಯುತ್ತರವನ್ನು ಸಾರಿಗೆ ಸಚಿವರಾದ ರಾಮುಲು ನೀಡಿದ್ದಾರೆ.
ಆದಷ್ಟು ಶೀಘ್ರ ರಾಜ್ಯದ ನಾನ್ ಅಕ್ರಿಡೇಟ್ ಜರ್ನಲಿಸ್ಟ್ ಗಳಿಗೆ ಉಚಿತ ಬಸ್ ಪಾಸ್ ದೊರೆಯದಿದ್ದರೆ ಸರ್ಕಾರ ಹಾಗೂ ವಾರ್ತಾ ಇಲಾಖೆಯ ವಿರುದ್ದ ರಿಟ್ ಪಿಟಿಷನ್ ಹೈಕೋರ್ಟ್ ನಲ್ಲಿ ನಮೂದಿಸಿ ನ್ಯಾಯ ದೊರೆಯಯವವರೆಗೂ ಹೋರಾಟ ನಿಲ್ಲದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ರವರು ಎಚ್ಚರಿಸಿದ್ದಾರೆ.

Post a Comment

0Comments

Post a Comment (0)