ಮತಬ್ಯಾಂಕ್ ಗಾಗಿ ರೈತರ ಬಗ್ಗೆ ಮಮತೆ.! : ಭೀಮು ಕೋಲಿ ಆಕ್ರೋಶ

Udayavani News
0
ಯಾದಗಿರಿ ವರದಿ : ಗುರುಮಿಠಕಲ್ ಮತಕ್ಷೇತ್ರದ ಚುನಾವಣೆ ಹತ್ತಿರ ಬಂದಾಗ ರೈತರ ಬಗ್ಗೆ ಮಾತಾನಾಡುವ ಶಾಸಕರು ಮೊದಲು ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಕಳೆದುಕೊಂಡ 400 ಕ್ಕೂ ಅಧಿಕ ರೈತರಿಗೆ ಪರಿಹಾರ ಒದಗಿಸುವುದರಲ್ಲಿ ವೃತ್ತಿಪರತೆ ಮೆರೆಯಲಿ. ಪರಿಹಾರಕ್ಕಾಗಿ ರೈತರು ಧರಣಿ ನಡೆಸಿದಾಗ ಹೋರಾಟಗಾರಂತೆ ಧರಣಿಯಲ್ಲಿ ಭಾಗವಹಿಸಿದ್ದೀರಿ. ಶಾಸಕರ ಅಧಿಕಾರ ಧರಣಿಯಲ್ಲಿ ತೋರಿಸಿದ್ದಿರಿ. ನಿಮ್ಮದೇ JDS ಪಕ್ಷದ ಮುಖ್ಯಮಂತ್ರಿ ಇದ್ದಾಗ ಪರಿಹಾರ ಕೊಡಿಸಬಹುದಿತ್ತು ಇದು ಮಾಡಲಿಲ್ಲ. ಕನಿಷ್ಠ ಸೌಜನ್ಯಕ್ಕಾದರೂ ರೈತರ ನಿಯೋಗ ಕರೆದುಕೊಂಡು ಹೋಗಿ ಸರ್ಕಾರದ ಗಮನಕ್ಕೆ ತರಲಿಲ್ಲ ಏಕೆ? ಇದೆ ರೈತರ ಬಗ್ಗೆ ಆ ದಿನಗಳಲ್ಲಿ ಅಧಿವೇಶನದಲ್ಲಿ ಏಕೆ ಧ್ವನಿ ಎತ್ತಲಿಲ್ಲ?  ರಾಜ್ಯದಲ್ಲಿಯೇ ಇಲ್ಲದ 10 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಇಲ್ಲಿ ಹೇಗೆ ನೀಡುತ್ತದೆ ಇಲಾಖೆ. ಪ್ರಸ್ತುತ ದಿನವಹಿ 7 ಗಂಟೆಗಳ ಕಾಲ 3 ಫೇಸ್ ಈಗಾಗಲೇ ನೀಡುತ್ತಿದೆ ಇಲಾಖೆ. ಮತಬ್ಯಾಂಕಗಾಗಿ, ರೈತರ ಪರ ಧ್ವನಿ ಎತ್ತಿದ್ದೇನೆ ಎಂದು ಬಿಂಬಿಸಲು ರಾಜಕೀಯ ಮಾಡಬೇಡಿ ರೈತರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶ್ರಮಿಸುವುದು ಸೂಕ್ತ.

Post a Comment

0Comments

Post a Comment (0)