ಮಸ್ಕಿ, ಸೆ.16 : ಪಟ್ಟಣದಿಂದ ವಿವಿಧ ಗ್ರಾಮಗಳಿಗೆ ತೆರಳುವ ಶಾಲಾ ಶಿಕ್ಷಕರಿಗೆ ಸಮಯಕ್ಕೆ ಬಾರದ ಸಾರಿಗೆ ಇಲಾಖೆಯ ಬಸ್ ದೊಡ್ಡ ತಲೆ ನೋವಾಗಿದೆ.ಸ್ಥಳೀಯ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಎಷ್ಟೋ ಬಾರಿ ಮನವಿ ಸಲ್ಲಿಸಿದರು ಕೂಡ ಅಧಿಕಾರಿಗಳು ಮಾತ್ರ ಗಮನಹರಿಸುತ್ತಿಲ್ಲ ಎನ್ನುವುದು ಶಿಕ್ಷಕರ ಆರೋಪವಾಗಿದೆ.
ಅದರಲ್ಲೂ ಮಸ್ಕಿ ಮುದ್ಗಲ್ ಮಾರ್ಗವಾಗಿ ಸಂಚರಿಸುತ್ತಿರುವ ಸಮಯ ಇಲ್ಲದಂತಾಗಿದೆ ಬೆಳಗ್ಗೆ 8.15 ಕ್ಕೆ ಮಸ್ಕಿ, ಅಂತರಗಂಗಿ ಕ್ರಾಸ್, ಮೆದಿಕಿನಾಳ ,ಬೈಲ್ ಗುಡ್ಡ , ಮುದ್ಗಲ್ ಮಾರ್ಗವಾಗಿ ಬಾಗಲಕೋಟೆಗೆ ತಲುಪುವ ಸಾರಿಗೆ ಬಸ್ ತಪ್ಪಿದರೆ ಸಾಕು ಮತ್ತೆ ಬೆಳಗ್ಗೆ 10.15 ಕೆ ಬರುವ ತನಕ ನಿಲ್ದಾಣದಲ್ಲಿ ಕಾಯುವಂತ ಸ್ಥಿತಿ ನಿರ್ಮಾಣಗೊಂಡಿದೆ .
ಈಗಾಗಲೇ ಸ್ಥಳೀಯ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಮಸ್ಕಿ ಮಾರ್ಗವಾಗಿ ಮುದ್ಗಲ್ ಪಟ್ಟಣಕ್ಕೆ ಸಂಚರಿಸುವ ಬಸ್ ಬೆಳಗ್ಗೆ ಒಂಬತ್ತು ಗಂಟೆಗೆ ಪ್ರಾರಂಭಿಸಲು ಶಿಕ್ಷಕರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಹೀಗಾಗಿ ಶಿಕ್ಷಕರು ತಮ್ಮ ಶಾಲೆಗೆ ಸಮಯಕ್ಕೆ ಸರಿಯಾಗಿ ಹೋಗಲು ಆಗದೆ ಮುದ್ಗಲ್ ಮಾರ್ಗವಾಗಿ ಹೋಗುವ ವಾಹನ ಟಾಟಾ ಏಸ್ ಏರಿ ಹೋಗುವ ದೃಶ್ಯಾವಳಿಗಳು ಪಟ್ಟಣದಲ್ಲಿ ಕಂಡು ಕಂಡುಬರುತ್ತದೆ.
ಸಂಬಂಧಪಟ್ಟ ಅಧಿಕಾರಿಗಳು ಇವರ ಮನವಿಗೆ ಸ್ಪಂದಿಸಿ ಶಾಲಾ ಶಿಕ್ಷಕರಿಗೆ ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ ಬಿಡಲು ಇಲಾಖೆಯ ಅಧಿಕಾರಿಗಳು ಮುಂದಾಗ ಬೇಕಾಗಿದೆ.