ಕೃಷಿ ಸಚಿವ ಬಿಸಿ ಪಾಟೀಲ್ ರಲ್ಲಿ ದಲಿತ ಸಂಘಟನೆ ಮನವಿ

Udayavani News
0


ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,
ಮಸ್ಕಿ, ಸೆ.17 : ರೈತ ಸಂಪರ್ಕ ಕೇಂದ್ರದಲ್ಲಿ ಭಾರಿ ಭ್ರಷ್ಟಾಚಾರ ಆಗಿರುವ ಕುರಿತು ತಾಡಪತ್ರಿ ರಾಸಾಯನಿಕ ಎರೆಹುಳ ಗೊಬ್ಬರ ಹಾಗೂ ತೊಗರಿ ಸೂರ್ಯಕಾಂತಿ ವಿವಿಧ ಸಾಮಗ್ರಿಗಳಲ್ಲಿ ಬಾರಿ ಭ್ರಷ್ಟಾಚಾರ ಮಾಡಿರುವ ಕುರಿತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾಸಾಹೇಬ್ ಡಾ. ಎನ್ ಮೂರ್ತಿ ಸ್ಥಾಪಿತ) ಮಸ್ಕಿ ತಾಲೂಕ ಸಮಿತಿ ಬೆಂಗಳೂರಿನ ಕೃಷಿ ಇಲಾಖೆಯ ಕೃಷಿ ಸಚಿವ ಬಿ.ಸಿ ಪಾಟೀಲ್ ರವರಿಗೆ ಅವರ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿದ್ದಾರೆ. 

ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾಸಾಹೇಬ್ ಡಾ. ಎನ್ ಮೂರ್ತಿ ಸ್ಥಾಪಿತ) ಮಸ್ಕಿ ತಾಲೂಕ್ ಸಮಿತಿ ತಮ್ಮಲ್ಲಿ ಒತ್ತಾಯಿಸುವುದೇನೆಂದರೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಮಸ್ಕಿ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಕುಮಾರಿ ಮೇಘನಾ ಕೃಷಿ ಅಧಿಕಾರಿ ಹಾಗೂ ಲೆಕ್ಕಾಧಿಕಾರಿ ಸಿದ್ದರಾಮ ಇವರು ಯಾವ ರೈತರಿಗೆ ರಶೀದಿ ಬಿಲ್ಲು ನೀಡದೆ ತಮ್ಮ ಮನ ಬಂದಂತೆ ಹೆಚ್ಚಿನ ದರದಲ್ಲಿ ಮಾರಾಟಕ್ಕೆ ಮುಂದಾಗಿರುತ್ತಾರೆ. ನಂತರ ಇವರ ವಿರುದ್ಧ ಲಿಂಗಸೂರು ತಾಲೂಕಿನ ಸಹಾಯಕ ನಿರ್ದೇಶಕರಾದಂತಹ ಆರೀಫಾ ಅತ್ತಾರ ಕೃಷಿ ಅಧಿಕಾರಿಗೂ ದೂರು ನೀಡಿದರು ಪ್ರಯೋಜನವಾಗಿಲ್ಲ, ಯಾವುದೇ ಕ್ರಮ ಕೈಗೊಂಡಿಲ್ಲ, ಹಾಗೂ ಮಸ್ಕಿ ರೈತ ಸಂಪರ್ಕ ಕೇಂದ್ರದಲ್ಲಿ ಅಪರಿಚಿತ ವ್ಯಕ್ತಿಗಳನ್ನಿಟ್ಟುಕೊಂಡು ಕೇಂದ್ರಕ್ಕೆ ಬಾರದೆ ಶ್ರೀ ಕುಮಾರಿ ಮೇಘನಾ ಕೃಷಿಧಿಕಾರಿ ಹಾಗೂ ಅಕೌಂಟೆಂಟ್ ಸಿದ್ದರಾಮ ಸರಿಯಾದ ರೀತಿ ಕಾರ್ಯನಿರ್ವಹಿಸದೆ ತಮ್ಮ ಮನಬಂದಂತೆ ತಮ್ಮ ವೈಯಕ್ತಿಕ ಕಾರ್ಯದಲ್ಲಿ ತೊಡಗಿಕೊಂಡು ಎಸ್ಸಿ ಎಸ್ಟಿ ರೈತರಿಗೆ ನೀಡಬೇಕಾದಂತ ಕೃಷಿ ಸಲಕರಣೆ ಗಳು, ತಾಡಪತ್ರಿ ಹಾಗೂ ಇನ್ನುಳಿದ ಸಾಮಗ್ರಿಗಳು ಹೆಚ್ಚಿನ ದರದಲ್ಲಿ ಮಾರಾಟ ಮಾಡಿರುತ್ತಾರೆ ರೈತರು ಬಿಲ್ಲು ಕೇಳಿದರೆ ನಾವು ಬಿಲ್ಲು ಕೊಡೋದಿಲ್ಲ ತಗೊಂಡ್ರೆ ತಗೋಳಿ ಬಿಟ್ರೆ ಬಿಡಿ ಅಂತ ದೌರ್ಜನ್ಯ ದರ್ಪ ತೋರಿಸುತ್ತಿರುವ ಶ್ರೀ ಕುಮಾರಿ ಮೇಘನ ವಿರುದ್ಧ ಎಷ್ಟು ಮೇಲಧಿಕಾರಿಗಳಲ್ಲಿ ಬಾರಿ ದೂರು ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಮುಂಗಾರು ಹಂಗಾಮಿನಲ್ಲಿ ಭಾರಿ ಭ್ರಷ್ಟಾಚಾರ ಕಂಡುಬಂದಿರುವುದನ್ನು ತನಿಖೆಗೆ ಆದೇಶ ಮಾಡಿದರು ಇಲ್ಲಿವರೆಗೆ ಯಾವುದೇ ಪ್ರಯೋಜನ ಆಗಿರುವುದಿಲ್ಲ ಇವರ ವಿರುದ್ಧ ಸೂಕ್ತ ತನಿಖೆಗೆ ಆದೇಶಿಸಿ ಸ್ಥಾನದ ರೀತ್ಯಾ ವಜಾಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿಕೃಷಿ ಸಚಿವ ಬಿ.ಸಿಪಾಟೀಲ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.


ಇದೇ ಸಂದರ್ಭದಲ್ಲಿ ಮಸ್ಕಿ ತಾಲೂಕ ಅಧ್ಯಕ್ಷರು ಯಲ್ಲಾಲಿಂಗ ಕುಣಿಕೆಲ್ಲೂರು, ಮೌನೇಶ್ ಮೆದಿಕಿನಾಳ, ಅನಿಲ್ ಕುಮಾರ್ ಮುದಬಾಳ, ಅನಿಲ್ ಕುಮಾರ್ ಚನ್ನಬಸವ ಬೇಡರ ಕಾರಲಕುಂಟಿ, ಶಿವಪ್ಪ ಮೆದಿಕಿನಾಳ, ಮೌನೇಶ್, ಶಿವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Post a Comment

0Comments

Post a Comment (0)