ಬಾಗಲಕೋಟೆ, ಸೆ.17 : ಬಾಗಲಕೋಟೆ ತಾಲೂಕಿನ ಶಿರಗುಪ್ಪಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಲ್ಲಿಕಾರ್ಜುನ ಚರಂತಿಮಠ ನರೇಂದ್ರ ಮೋದಿಯವರ ಜನಧನ ಯೋಜನೆ, ಬೇಟಿ ಬಚ್ಚಾವೊ ಬೇಟಿ ಪಡಾವೋ, ಸ್ವಚ್ಛ ಭಾರತ, ನೋಟ್ ಬ್ಯಾನ್, ಕಾಶ್ಮೀರ 370 ನೇ ವಿಧಿ ರದ್ದತಿ,ಸಿಎಎ ಎನ್ ಆರ್ ಸಿ ಅನೇಕ ಯೋಜನೆಗಳು ದೇಶದ ಪ್ರಗತಿಗೆ ಪೂರಕವಾಗಿದೆ ದೇಶಕ್ಕೆ ಇಂತಹ ಪ್ರಧಾನಿ ಸಿಕ್ಕಿರುವುದು ನಮ್ಮ ಸೌಭಾಗ್ಯ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರ ಜನುಮದಿನದ ಅಂಗವಾಗಿ ನಮೋ ಯುವಪಡೆ ವತಿಯಿಂದ ಏರ್ಪಡಿಸಿದ್ದ ಶ್ರೀಬಾಲಾಜಿ ಮಂದಿರ ವಿದ್ಯಾಗಿರಿಯಲ್ಲಿ ವಿಶೇಷ ತುಳಸಿ ಅರ್ಚನೆ ಪೂಜೆ ಸಲ್ಲಿಸಿ, ನಂತರ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿ ನೆಟ್ಟು ಪ್ರಧಾನಿಯವರ ಕೊಡುಗೆ ಹಾಗೂ ಅವರ ಕಾರ್ಯವೈಖರಿ ಒಂದೇ ಒಂದು ರಜೆಯಿಲ್ಲದೆ ನಿರಂತರ ದೇಶಕ್ಕಾಗಿ ಶ್ರಮಿಸುತ್ತಿರುವ ಪ್ರಧಾನಿ ನಮ್ಮ ಹೆಮ್ಮೆ ಈ ವೇಳೆ ನಮೋ ಯುವಪಡೆ ಕಾರ್ಯಕರ್ತರು ಇದ್ದರು.
ಕಾರ್ಯಕ್ರಮ ನಂತರ
ಜಿಲ್ಲಾ ಆಸ್ಪತ್ರೆಯ ಬಡರೋಗಿಗಳಿಗೆ ಹಣ್ಣು, ಹಂಪಲು ವಿತರಣೆ ಮಾಡಲಾಯಿತು ಹಾಗೂ ಜಿಲ್ಲಾ ಆಸ್ಪತ್ರೆ ರಕ್ತ ಭಂಡಾರ ದಲ್ಲಿ ಬಾಗಕೋಟೆ ಮತಕ್ಷೇತ್ರದ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಇವರು ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಊರಿನ ಗುರು ಹಿರಿಯರು, ಗ್ರಾಮಸ್ಥರು, ಮುಖಂಡರು ಹಾಗೂ ಅಶೋಕ ಮುತ್ತಿನಮಠ, ಗುರು ಅನಗವಾಡಿ, ರವಿ ಕುಮಟಗಿ, ವಿಜಯ ಸುಲಾಖೆ, ಅರುಣ ಲೊಕಾಪೂರ, ಬಸವರಾಜ ಕಟಗೇರಿ, ರಾಘು ಯಾದಗಿರಿ, ರಾಜು ಬಾಸುತಕರ, ರಾಜು ಮುಲಿಮನಿ, ಯಮನೂರಿ ಕಮಿತಕರ, ಹರಿಶ ರಂಗರೇಜ, ವಿನಾಯಕ ಹಾಸಲಕರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.