ಬುದ್ದಿನ್ನಿ.ಎಸ್ ಗ್ರಾಮದ ಎಸ್ಡಿಎಂಸಿಗೆ ಪದಾಧಿಕಾರಿಗಳ ಅವಿರೋಧ ಆಯ್ಕೆ,ಅಧ್ಯಕ್ಷರಾಗಿ ನಾಗರಡ್ಡೆಪ್ಪ ದೇವರಮನಿ ಪುನರಾಯ್ಕೆ

Udayavani News
0


ವರದಿ:ಗ್ಯಾನಪ್ಪ ದೊಡ್ಡಮನಿ ಮಸ್ಕಿ,
ಮಸ್ಕಿ, ಸೆ.17: ತಾಲೂಕಿನ ಬುದ್ದಿನ್ನಿ.ಎಸ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪದಾಧಿಕಾರಿಗಳನ್ನು ಶುಕ್ರವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು. 


ನಾಗರಡ್ಡೆಪ್ಪ ದೇವರಮನಿ ರವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಅಯ್ಕೆ ಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ಉಪಾಧ್ಯಕ್ಷರಾಗಿ ಯಲ್ಲಮ್ಮ ಯಲ್ಲಪ್ಪ ಭಜಂತ್ರಿ ಆಯ್ಕೆಯಾದರು. ಸದಸ್ಯರಾಗಿ ಆರೋಗ್ಯಪ್ಪ ತಂ ಮಲ್ಲಪ್ಪ ಮುದಬಾಳ. ಮೌನೇಶ ತಂ ದುರುಗಪ್ಪ, ಹನುಮಂತಿ ಗಂ ಹನುಮಂತ ಭಜಂತ್ರಿ, ಯಲ್ಲಮ್ಮ ಗಂ ಯಲ್ಲಪ್ಪ ಭಜಂತ್ರಿ, ಅಮೀನಮ್ಮ ಗಂ ಮೌಲಸಾಬ್ ಪಿಂಜಾರ, ಫಕೀರಸಾಬ್ ತಂ ಅಲ್ಲಾಸಾಬ ಪಿಂಜಾರ, ಶಿವರಾಜ ತಂ ಯಮನಪ್ಪ ಮುದಬಾಳ, ಚಂದಮ್ಮ ಗಂ ಯಮನಪ್ಪ ಮರಕಲದಿನ್ನಿ, ರೇಣುಕಾ ಗಂ ಸಿದ್ದಪ್ಪ ಹಡಪದ, ಸಿದ್ದಪ್ಪ ತಂ ಹಂಪಯ್ಯ ದೇವರಮನಿ, ನೀಲಮ್ಮ ಗಂ ಮಲ್ಲಪ್ಪ ಶೇಕ್ಷಂದಿ, ಅಮರಪ್ಪ ತಂ ಅಯ್ಯಾಳಪ್ಪ ದೇವರಮನಿ, ರೇಣುಕಮ್ಮ ಗಂ ಮೌನೇಶ ದೇವರಮನಿ, ಮಾಳಿಂಗರಾಯ ತಂ ಬೀರಪ್ಪ ಅಗಸಿಮನಿ, ಗೌರಮ್ಮ ಗಂ ಗದ್ದೆಪ್ಪ ಮರಕಲದಿನ್ನಿ, ಮಲ್ಲನಗೌಡ ತಂ ಈಶ್ವರಗೌಡ ದೇವರಮನಿ, ಲಕ್ಷ್ಮಿ ಗಂ ಅಮರಪ್ಪ ಮಡಿವಾಳ ಅವರನ್ನು ಸದಸ್ಯರನ್ನಾಗಿ ಆಯ್ಕೆಗೊಳಿಸಲಾಯಿತು. 

ನಂತರ ಮಾತನಾಡಿದ ನೂತನ ಸದಸ್ಯ ಮೌನೇಶ್ ತಂ ದುರುಗಪ್ಪ ಶೈಕ್ಷಣಿಕ ರಂಗದಲ್ಲಿ ಶಾಲಾ ಮಕ್ಕಳ ಮತ್ತು ಶಾಲೆಗೆ ತಮ್ಮದೇ ಆದ ಹೋರಾಟದ ರೂಪು ರೇಷೆಗಳನ್ನು ಕೈಗೊಂಡು ಬುದ್ದಿನ್ನಿ. ಎಸ್ ಗ್ರಾಮದ ಪ್ರೌಡ ಶಾಲೆ ಮಂಜೂರು ಆಗಲು ಮೊದಲಿಗರಾಗಿ ಹೋರಾಟ ಮಾಡಿ ಯಶಸ್ಸು ಕಂಡ ವ್ಯಕ್ತಿಗಳಲ್ಲಿ ಒಬ್ಬರಾದ ನಾಗರೆಡ್ಡೆಪ್ಪ ದೇವರಮನಿ ರಂತಹ ಶಿಕ್ಷಣ ಪ್ರೇಮಿಗಳು ಮತ್ತೇ ಮತ್ತೇ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾಗಿ ಅಯ್ಕೆಯಾಗಿರುವುದು ಸಂತಸದ ಸಂಗತಿ.ಬುದ್ದಿನ್ನಿ.ಎಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳಾಗಿ ಆಯ್ಕೆ ಯಾದ ಸರ್ವರಿಗೂ ಅಭಿನಂದನೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮೇಲ್ವಿಚಾರಣೆ ಅಧಿಕಾರಿಯಾಗಿ ಅಂಕುಶದೊಡ್ಡಿ ಗ್ರಾಪಂನ ಶೇಖರಪ್ಪ ಮಾರಲದಿನ್ನಿ, ಕರವಸೂಲಿಗಾರ ಲಿಂಗನಗೌಡ ದೇವರಮನಿ, ಶಾಲಾ ಮುಖ್ಯ ಗುರುಗಳಾದ ದುರುಗಣ್ಣ ಹೂವಿನಭಾವಿ, ಬುದ್ದಿನ್ನಿ.ಎಸ್. ಪ್ರೌಢಶಾಲೆ ಪ್ರಭಾರಿ ಶಿಕ್ಷಕರಾದ ಕಳಕಪ್ಪ ಹಾದಿಮನಿ, ಈರಪ್ಪ ನಾರಬಂಡಿ, ಹೊಳೆಬಸಪ್ಪ ಸಜ್ಜನ್ ಸೇರಿದಂತೆ ಇನ್ನಿತರರಿದ್ದರು.

Post a Comment

0Comments

Post a Comment (0)