ಸುರಪುರ ಬಸ್ಸ ನಿಲ್ದಾಣ ಅಂದ ಕೆಡಿಸುತ್ತಿರುವ ಪೋಸ್ಟರಗಳು : ಕಣ್ಮುಚ್ಚಿ ಕುಳಿತ ಅಧಿಕಾರಿಗಳು

Udayavani News
0

ಸುರಪುರ, ಸೆ.16 : ಸುರಪುರ ನಗರ ಮದ್ಯದಲ್ಲಿ ಇರುವ ಸುರಪುರ ಬಸ್ಸ ನಿಲ್ದಾಣವು ಸ್ವಚ್ಛ ಮತ್ತು ಸುಂದರವಾಗಿ ಇರಬೇಕಾಗಿತ್ತು.ಆದರೆ ಸ್ವಚ್ಛತೆ ಅನುವ ಪದವೇ ಈ ಬಸ್ಸ ನಿಲ್ದಾಣದ ಅಧಿಕಾರಿಗಳಿಗೆ ಗೊತ್ತಿದಂತೆ ಕಾಣುತ್ತದೆ. ಅನ್ನ ನೀಡುವ ಪ್ರತಿ ಕೆಲಸವು ದೇವರಿಗೆ ಸಮಾನ ಲಕ್ಷ ಲಕ್ಷ ಸಂಬಳ ಪಡೆಯುವ ಈಶಾನ್ಯ ಸಾರಿಗೆ ಸಂಸ್ಥೆ ಸುರಪುರ ಘಟಕದ ಅಧಿಕಾರಿಗಳು ಮಾತ್ರ ಅನ್ನ ನೀಡುವ ನಿಲ್ದಾಣವನ್ನೆ ಚರಂಡಿ ಮಾಡಿದ್ದಾರೆ.ಇವರ ಈ ವರ್ತನೆ ಲಾಭ ಪಡೆದ ಸಂಘ ಸಂಸ್ಥೆಗಳು ಸುಂದರ ಬಸ್ಸ ನಿಲ್ದಾಣಕ್ಕೆ ಎಲ್ಲಂದರೆ ಅಲ್ಲಿ ಪೋಸ್ಟ್ ಅಚ್ಚಿದ್ದಾರೆ. ಇನ್ನೂ ಯುವಕರು ಕೂಡ ತಮ್ಮ ನೆಚ್ಚಿನ ನಾಯಕನ ಮತ್ತು ತಮ್ಮ ಗೆಳೆಯ ಹುಟ್ಟು ಹಬ್ಬದ ಪೋಸ್ಟರ್ ಗಳನ್ನು ನಿಲ್ದಾಣ ದಲ್ಲಿ ಇರುವ ಪ್ರತಿಯೊಂದು ಕಂಬ ಕಾಲಿ ಬಿಡದಂತೆ ಹಚ್ಚಿದ್ದಾರೆ.ಇದನ್ನು ನೋಡಿದರೆ ಇದು ತಾಲ್ಲೂಕ ಬಸ್ಸ ನಿಲ್ದಾಣವೋ ಅಥವಾ ಸಿನಿಮಾ ಥಿಯೇಟರೋ ಒಂದು ಗೊತ್ತಾಗುತ್ತಾಗುವುದಿಲ್ಲ.

ಸ್ವಚ್ಛ ಭಾರತ ಎಂಬ ಯೋಜನೆ ಪೋಸ್ಟರ್ ಜಾಹೀರಾತಿಗೆ ಮಾತ್ರ ಸೀಮಿತ ಸುರಪುರ ನಗರದಲ್ಲಿ ಇರುವ ತಾಲೂಕ ಬಸ್ ನಿಲ್ದಾಣಕ್ಕೆ ಹೋದರೆ ಸಾಂಕ್ರಾಮಿಕ ರೋಗಗಳು ಒಕ್ಕರಿಸುವುದು ನಿಶ್ಚಿತ.

ಅಮರೇಶ ಕಾಮನಕೇರಿ ಪ್ರಗತಿ ಪರ ಚಿಂತಕರು.
ಸುರಪುರದ ಶಾಸಕರು ಕೂಡ ಇತ್ತ ಗಮನ ಹರಿಸಿದರೆ ಉತ್ತಮ ಕಾರಣ ಸ್ವಚ್ಛ ಭಾರತ ಎಂದು ಕೇಂದ್ರ ‌ಮತ್ತು ರಾಜ್ಯ ಬಿಜೆಪಿ ಸರ್ಕಾರ ಅನೇಕ ರೀತಿಯಲ್ಲಿ ಘೋಷಣೆ ಕೂಗುತ್ತಿದೆ ಸಾರ್ವಜನಿಕರ ತೆರಿಗೆ ಹಣವು ಖರ್ಚು ಮಾಡುತ್ತಿವೆ. ಬಸ್ ನಿಲ್ದಾಣವನ್ನೆ ಸ್ವಚ್ಛ ಇರುವಂತೆ ನೋಡಿ ಕೊಳ್ಳಲಾಗದವರು ತಾಲ್ಲೂಕನ್ನು ರಾಜ್ಯವನ್ನು ದೇಶವನ್ನು ಯಾವ ರೀತಿಯಲ್ಲಿ ಸ್ವಚ್ಛ ಇರುವಂತೆ ನೋಡಿಕೊಳ್ಳಬಲ್ಲರು ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.ಇತಿಹಾಸ ಪ್ರಸಿದ್ಧ ಸುರಪುರ ನಗರದ ಬಸ್ ನಿಲ್ದಾಣವನ್ನು ಸ್ವಚ್ಛ ಮತ್ತು ಸುಂದರವಾಗಿಟ್ಟು ಕೊಳ್ಳುವುದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಜೊತೆ ಮಾತನಾಡಿ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಸುರಪುರ ಕ್ಷೇತ್ರದ ಶಾಸಕರ ಕರ್ತವ್ಯ ಕೂಡ ಹೌದು.

Post a Comment

0Comments

Post a Comment (0)