ಸುರಪುರ,ಸೆ.16 : ತಾಲೂಕಿನ ಆಳ್ದಾಳ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದಲ್ಲಿ ಹುಳುಗಳು ಕಾಣಿಸಿಕೊಂಡಿರುವ ಘಟನೆ ನಡೆದಿದೆ.ಅಕ್ಷರ ದಾಸೋಹದ ಬಿಸಿಯೂಟ ಸೇವಿಸುತ್ತಿದ್ದ ಮಕ್ಕಳ ತಟ್ಟೆಯಲ್ಲಿ ಹುಳುಗಳು ಕಂಡು ಬಂದು ಮಕ್ಕಳ ಪಾಲಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದರು.ಈ ಘಟನೆಯೂ ಬೋನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದಿದೆ.
ಶಾಲೆಯ ಮಕ್ಕಳಿಗೆ ಬಿಸಿಯೂಟದಲ್ಲಿ ಹುಳು ಹಿಡಿದ ದವಸ ಧಾನ್ಯಗಳನ್ನು ಬಳಸಿ ಅನ್ನ, ಸಾಂಬಾರು ತಯಾರಿಸಿ ಮಕ್ಕಳಿಗೆ ಬಡಿಸಿದ್ದಾರೆ. ಇದರಲ್ಲಿ ಬಾಲಹುಳು, ಕಂಡು ಬಂದಿವೆ. ಮಕ್ಕಳು ಕೂಡಲೇ ಪಾಲಕರಿಗೆ ತಿಳಿಸಿದ್ದಾರೆ. ಇದರಿಂದ ಪಾಲಕರು ಶಾಲೆಗೆ ಭೇಟಿ ನೀಡಿ ಶಿಕ್ಷಕರನ್ನು ಮತ್ತು ಅಡಿಗೆ ತಯಾರಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಶಾಲೆಗೆ ಮಕ್ಕಳ ಪಾಲಕರೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ನಿತ್ಯ ಇದೆ ರೀತಿಯಲ್ಲಿ ಹುಳುಗಳ ಬರುತ್ತವೆ ಅಡಿಗೆ ಮಾಡುವವರಿಗೆ ಮತ್ತು ಶಿಕ್ಷಕರಿಗೆ ಹೇಳಿದರೆ ನಿಮ್ಮ ಮನೆಗಳಲ್ಲಿ ಇದು ಕೂಡ ಇಲ್ಲ ಸುಮ್ಮನೆ ತಿನ್ನರಿ ಎಂದು ಗದರಿಸುತ್ತಾರೆ ಎಂದು ಮಕ್ಕಳು ಹೇಳಿದ್ದಾರೆ.
ಮಕ್ಕಳು ಎಲ್ಲರಿಗೂ ಮಕ್ಕಳೇ ಅವರ ಆರೋಗ್ಯ ಕಾಪಾಡಬೇಕಾದದ್ದು ಶಿಕ್ಷಕರ ಮತ್ತು ಬಿಸಿ ಊಟ ತಯಾರಕರ ಜವಾಬ್ದಾರಿ. ಈ ರೀತಿಯಾದಂತಹ ದರ್ಪದ ಮಾತಾಡುವ ಸಿಬ್ಬಂದಿ ಮತ್ತು ಶಿಕ್ಷಕರನ್ನು ಕೆಲಸದಿಂದ ವಜಾ ಗೋಳಿಸಬೇಕು ಇಂತಹ ಉಡಾಫೆ ಉತ್ತರವನ್ನು ನೀಡುತ್ತಾ ಅವರ ಜೀವದ ಜತೆ ಚೆಲ್ಲಾಟ ಆಡಬಾರದು. ಸಂಬಂಧಪಟ್ಟ ಬಿಇಓ,ಸಿಆರ್ ಸಿ ಗೆ ಪೋನ್ ಮಾಡಿದರೆ ರಿಸೀವ್ ಮಾಡುತ್ತಿಲ್ಲ, ಯಾದಗಿರಿ ಜಿಲ್ಲಾಧಿಕಾರಗಳ ಮತ್ತು ಶಿಕ್ಷಣ ಸಚಿವರ ಗಮನಕ್ಕೂ ತರಲಾಗಿದೆ. ಆದಷ್ಟು ಬೇಗ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆ ಜರುಗದಂತೆ ಎಚ್ಚರವಹಿಸಬೇಕು ಎಂದು ಬೋನಾಳ ಗ್ರಾಮದ ಗ್ರಾಮಸ್ಥರಾದ ಮಾನಪ್ಪ ಬೆಳಬಟ್ಟಿ, ಮರಿಯಪ್ಪ ಚಕ್ರಿ,ಬಾಪುಗೌಡ ಬೆಳ್ಳಿ,ಈರಯ್ಯ ಹಿರೇಮಠ್, ಶಿವಪ್ಪ ಚಾಕರಿ, ಬಸವರಾಜ್ ನಡಲ್ಕೆರಿ, ಸಿದ್ದಣ್ಣ ಬಬಲಾದಿ, ದಾವಲ್ ಸಾಬ್ ಮುಲ್ಲಾ, ಸಂಗಪ್ಪಗೌಡ ಪೊಲೀಸ್ ಪಾಟೀಲ್,ದೇವಪ್ಪ ಗುದ್ಗಲ್, ತಮ್ಮ ಮಕ್ಕಳಿಗೆ ನೀಡುತ್ತಿರುವ ಬಿಸಿ ಊಟದ ತಟ್ಟೆಯಲ್ಲಿ ಹುಳು ಇರುವ ವಿಷಯವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಧ್ಯಮ ಹೇಳಿಕೆ ಮೂಲಕ ತಿಳಿಸಿದ್ದಾರೆ.