ಜೇವರ್ಗಿ, ಸೆ.16 : ಕರ್ನಾಟಕ ರಾಜ್ಯ ಕಲ್ಯಾಣ ಕಾರ್ಮಿಕ ಯೂನಿಯನ್ ವತಿಯಿಂದ ಕಲಬುರ್ಗಿ ಜಿಲ್ಲಾ ಕರ್ನಾಟಕ ರಾಜ್ಯ ಕಾರ್ಮಿಕ ಯೂನಿಯನ್ ಅಧ್ಯಕ್ಷರ ಉಪಾಧ್ಯಕ್ಷರ ಪದಗ್ರಹಣ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜೈ ಅಂಬಾ ಭವಾನಿ ಪೀಠಾಧಿಪತಿಗಳಾದ ಆಲೂರು ಶಿವಾನಂದ ಸ್ವಾಮೀಜಿಗಳು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಕಾರ್ಮಿಕರು ದೇಶದ ಸಂಪತ್ತು ಇವರನ್ನು ಬೆಳೆಸುವುದು ಇವರಿಗೆ ಸಿಕ್ತಕಂತ ಸೌಲಭ್ಯಗಳನ್ನು ತಿಳಿಸಿಕೊಡುವುದು ಕಾರ್ಮಿಕ ಸಂಘಟನೆಯ ಕಾರ್ಯವಾಗಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಸಂಘಟನೆ ಕೆಲಸ ಮಾಡಲಿ ಸದಾ ನಾನು ಬೆಂಬಲನಾಗಿ ಇರುತ್ತೇನೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭ ಜರುಗಿತು.
ಸಂತೋಷ್ ಬಿಂದಗಿ ಕರ್ನಾಟಕ ರಾಜ್ಯ ಕಾರ್ಮಿಕ ಯೂನಿಯನ್ ಕಲಬುರ್ಗಿ ಜಿಲ್ಲಾ ಅಧ್ಯಕ್ಷರಾಗಿ ಪದಗ್ರಹಣ ಮಾಡಲಾಯಿತು.
ರಾಜ್ಯ ಕಾರ್ಯದರ್ಶಿಯಾದ ದೇವೇಂದ್ರ ತಳವಾರ, ರಾಜಶೇಖರ್ ಸಿರಿ, ವಿಜಯಕುಮಾರ್ ಹಿರೇಮಠ, ದಿಲೀಪ್ ಕಾರ್ಮಿಕ ಇಲಾಖೆ ಅಧಿಕಾರಿಗಳು, ಮಂಜುನಾಥ್ ಗುತ್ತೇದಾರ್, ಪರಮೇಶ್ವರ್ , ಮಾಳಪ್ಪ ಪೂಜಾರಿ, ಮಲ್ಲನಗೌಡ ರಾಯಚೂರು, ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.