ಮೋದಿ ಹುಟ್ಟು ದಿನದಿಂದ ಭರ್ಜರಿ ಕಾರ್ಯಕ್ರಮ- ಚುನಾವಣೆಗೆ ಜನ ಸಂಘಟನೆಗೆ ಮಾಸ್ಟರ್ ಪ್ಲಾನ್- ಸೆ.17 ರಿಂದ ಅ.2 ರವರೆಗೆ "ಸೇವಾ ಪಾಕ್ಷಿಕ"

Udayavani News
0


UDAYAVANI.NEWS
ತೀರ್ಥಹಳ್ಳಿ ಸೆ.17 : ಮೋದಿ ಹುಟ್ಟು ದಿನದಿಂದ ಬಿಜೆಪಿ ರಾಜ್ಯದಲ್ಲಿ ಭರ್ಜರಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರಲ್ಲೂ ತಳ ಮಟ್ಟದಲ್ಲಿ ಜನರನ್ನು ಸಂಘಟನೆ ಮಾಡುವ ಮೂಲಕ ಮುಂದಿನ ಚುನಾವಣೆಗೆ ಜನ ಸಂಘಟನೆಗೆ ಮಾಸ್ಟರ್ ಪ್ಲಾನ್ ಹಾಕಿಕೊಂಡಿದೆ.
ಸೆ.17 ರಿಂದ ಅ.2ರವರೆಗೆ ಸೇವಾ ಪಾಕ್ಷಿಕ: ಸೆ.17 ರಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಮತ್ತು ಸೆ.25 ದಿನದಯಾಳ್ ಉಪಾಧ್ಯಾಯರ ಜನ್ಮದಿನ ಅ.2ರಂದು ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ ಜನ್ಮದಿನ ಈ ಎಲ್ಲಾ ಕಾರ್ಯಕ್ರಮದ ಅಂಗವಾಗಿ ಸೆ 17 ರಿಂದ ಅ.2ರವರೆಗೆ ಸೇವಾ ಪಾಕ್ಷಿಕವನ್ನು ಯುವ ಮೋರ್ಚಾ ವತಿಯಿಂದ ಆಚರಿಸಲು ಸಿದ್ಧತೆ ನಡೆಸಿದೆ.
ತೀರ್ಥಹಳ್ಳಿ ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಬಾಳೆಬೈಲು ರಾಘವೇಂದ್ರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಮೋದಿ ಜನ್ಮದಿನವಾದ ಸೆ.17ರಂದು “ಸೇವಾ ಪಾಕ್ಷಿಕ”ಕ್ಕೆ ಚಾಲನೆ ಸಿಗಲಿದ್ದು 15 ದಿನಗಳ ಕಾಲ ಅನೇಕ ಸೇವಾ ಚಟುವಟಿಕೆಗಳನ್ನು ನಡೆಸಿ ಅವುಗಳ ಮೂಲಕ ಪ್ರಧಾನಿಗಳ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸಲಿದ್ದೇವೆ. ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾರವರ ಸೂಚನೆಯಂತೆ “ಸೇವಾ ಪಾಕ್ಷಿಕ " ವನ್ನು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 02 ರವರೆಗೆ ವಿವಿಧ ಸೇವಾ ಕಾರ್ಯಗಳ ಮೂಲಕ ಈ ಎಲ್ಲಾ ಆಯೋಜನೆಯನ್ನು ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ಹೆದ್ದೂರು, ಪ್ರಶಾಂತ್ ಕುಕ್ಕೆ, ಪದ್ಮಿನಿ, ಋಷಿಕೇಶ್ ಪೈ, ಹಸಿರುಮನೆ ನಂದನ್, ಮಧುರಾಜ್ ಹೆಗ್ಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು

ಏನೇನು ಕಾರ್ಯಕ್ರಮ..?

- ಸೆ.17 ರಂದು ಆರೋಗ್ಯ ತಪಾಸಣೆ, ಅಂಗಗಳ ಜೋಡಣೆ, ಲಸಿಕಾ ಅಭಿಯಾನ, ರಕ್ತದಾನ ಶಿಬಿರ 
- ಸೆ.22 ರಿಂದ 26 ರವರೆಗೆ ಅಮೃತ ಸರೋವರ ಅರಳಿ ಸಸಿ ನೆಡುವ ಕಾರ್ಯಕ್ರಮ 
- ಸೆ.24 ಪ್ರತಿ ಬೂತ್ ಮಟ್ಟದಲ್ಲಿ ಕಮಲೋತ್ಸವ, ದೀನ್ ದಯಾಳ್ ಜಿ ಸ್ಮರಣೆ, ಮನ್ ಕೀ ಬಾತ್, ಕೇಸರಿ ಟೋಪಿ ಧರಿಸಿ ಪಕ್ಷದ ಧ್ವಜಾರೋಹಣ
- ಸೆ.25 ರಿಂದ 28ರವರೆಗೆ ಒಬಿಸಿ ಮತ್ತು ಎಸ್ ಸಿ ಮೋರ್ಚಾ ನೇತೃತ್ವದಲ್ಲಿ ಫಲನುಭವಿಗಳ ಸಮಾವೇಶ
- ಸೆ.29ರಂದು ಮಹಿಳಾ ಮೋರ್ಚಾ ನೇತೃತ್ವದಲ್ಲಿ ಅಂಗನವಾಡಿ ಸೇವಾ ದಿವಸ್ ಮತ್ತು ಪತ್ರ ಬರಹ
- ಸೆ.30ರಂದು ಎಸ್ ಟಿ ತಾಂಡಾ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ
- ಅ.2ರಂದು ಮಹಾತ್ಮಾ ಗಾಂಧಿ ಜಯಂತಿ, ಖಾದಿ ಉತ್ಸವ ನಡೆಸಲು ಯೋಜನೆ ಮಾಡಲಾಗಿದೆ.

Post a Comment

0Comments

Post a Comment (0)